ಭಾರತದ ಬಹುತೇಕ ರಾಜ್ಯಗಳಲ್ಲಿ ವಿವಿಧ ಬಗೆಯಲ್ಲಿ ಸಂಕ್ರಾಂತಿ ಆಚರಣೆ

0
97
makara sankranthi
makara sankranthi

makara sankranthi : ಬೆಂಗಳೂರು, ಜ. 13 : ಮಕರ ಸಂಕ್ರಾಂತಿ ಹಬ್ಬವನ್ನು ಭಾರತದ ಬಹುತೇಕ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಆದರೆ, ಹಬ್ಬದ ಹೆಸರು, ಆಚರಣೆಯ ಬಗೆಯಲ್ಲಿ ಸ್ವಲ್ಪ ಮಟ್ಟಕ್ಕಷ್ಟೇ ಬದಲಾವಣೆ ಇರುತ್ತದೆ. ಹಾಗಾದರೆ ಬನ್ನಿ ಯಾವ ರಾಜ್ಯದಲ್ಲಿ ಹೇಗೆ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ ಎಂದು ನೋಡೋಣ.

ಆಂಧ್ರ ಪ್ರದೇಶ ಮತ್ತು ತೆಲಂಗಾಣ
ಸಂಕ್ರಾಂತಿ ಹಬ್ಬವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅಧ್ಧೂರಿಯಾಗಿ ಆಚರಿಸಲಾಗುತ್ತದೆ. ಬರೋಬ್ಬರಿ ನಾಲ್ಕು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮೊದಲನೇಯ ದಿನ ಭೋಗಿ ಹಬ್ಬ ಎಂದು ಆಚರಣೆ ಮಾಡಲಾಗುತ್ತದೆ. ಎರಡನೇಯ ದಿನ ಸಂಕ್ರಾಂತಿ ಎಂದು ಆಚರಿಸಲಿದ್ದು, ಇದು ಬಹಳ ಮುಖ್ಯ ಹಬ್ಬದ ದಿನವಾಗಿದೆ. ಮೂರನೇಯ ದಿನ ಕನುಮ ಎಂದು ಹೇಳುತ್ತಾರೆ. ನಾಲ್ಕನೇಯ ದಿನ ಮುಕ್ಕನುಮ ಎಂದು ಆಚರಿಸುತ್ತಾರೆ.

ಅಸ್ಸಾಂ
ಅಸ್ಸಾಂನಲ್ಲೂ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತೆ. ಇಲ್ಲಿ ಸಂಕ್ರಾಮತಿ ಹಬ್ಬವನ್ನು ಮಾಘ ಬಿಹ ಭೋಗಾಲಿ ಬಿಹು ಬಿಹು ಎಂದು ಕರೆಯಲಾಗುತ್ತದೆ. ಇಲ್ಲವೇ ಮಘರ್ ದೋಮಾಹಿ ಎಂದು ಸುಗ್ಗಿಯನ್ನು ಸಂಭ್ರಮಿಸುತ್ತಾರೆ. ಸುಮಾರು ಒಂದು ವಾರದವರೆಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಗುಡಿಸಲು ನಿರ್ಮಿಸಿ, ಭಕ್ಷ್ಯಗಳನ್ನು ಸವಿದು ಕೆಲ ಆಟಗಳನ್ನೂ ಆಡುತ್ತಾರೆ. ಜೊತೆಗೆ ಎತ್ತುಗಳ ಕಾಳಗವನ್ನೂ ನಡೆಸುತ್ತಾರೆ. ದೀಪೋತ್ಸವ ಕೂಡ ಇರುತ್ತದೆ.

ಗೋವಾ
ಗೋವಾದಲ್ಲಿ ಸಂಕ್ರಾಂತ್ ಎಂದು ಹಬ್ಬವನ್ನು ಆಚರಿಸುತ್ತಾರೆ. ಗೋವಾ ಸಂಪ್ರದಾಯದ ಪ್ರಕಾರ ಹೊಸದಾಗಿ ಮದುವೆಯಾದವರು ಮಡಿಕೆಗಳಿಗೆ ಅಲಂಕಾರ ಮಾಡಿ, ಅದರೊಳಗೆ ಕೊಯ್ಲು ಮಾಡಿದ ಧಾನ್ಯಗಳನ್ನು ತುಂಬಿಸಿ ದೇವರಿಗೆ ಸಮರ್ಪಣೆ ಮಾಡುತ್ತಾರೆ. ಇದರ ಜೊತೆಗೆ ಸಕ್ಕರೆಯ ಪಾಕದಿಂದ ಸಿಹಿ ತಿಂಡಿಗಳನ್ನು ತಯಾರಿಸಿ ಎಲ್ಲರಿಗೂ ಹಂಚುತ್ತಾರೆ.

ಗುಜರಾತ್
ಗುಜರಾತ್ ನಲ್ಲೂ ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಎರಡು ದಿನಗಳ ಕಾಲ ಇಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಉಂಧಿಯು, ಚಿಕ್ಕಿಗಳನ್ನು ತಯಾರಿಸಿ ಹಬ್ಬವನ್ನು ಆಚರಿಸುತ್ತಾರೆ. ಇನ್ನು ಗಾಳಿಪಟಗಳನ್ನು ತಯಾರಿಸಿ ಆಗಸದಲ್ಲಿ ಹಾರಿಸಿ ಖುಷಿ ಪಡುತ್ತಾರೆ.

ಹರಿಯಾಣ ಮತ್ತು ದೆಹಲಿ
ಹರಿಯಾಣ ಮತ್ತು ದೆಹಲಿ ಯಲ್ಲೂ ಸಂಕ್ರಾಂತ್‌ ಎಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಯಮುನಾ ನದಿಯಲ್ಲಿ ತೀರ್ಥ ಸ್ನಾನ ಮಾಡಿ ತುಪ್ಪದೊಂದಿಗೆ ಹಲವು ಭಕ್ಷ್ಯಗಳನ್ನು ತಯಾರಿಸಿ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ಸಹೋದರರು ಮದುವೆಯಾದ ಸಹೋದರಿ ಮನೆಗೆ ಹೋಗಿ ಬಟ್ಟೆ ಮತ್ತು ಇತರೆ ಉಡುಗೊರೆಗಳನ್ನು ನೀಡುತ್ತಾರೆ

ಜಮ್ಮು
ಉತ್ರೇನ್‌ ಎಂದು ಜಮ್ಮುವಿನಲ್ಲಿ ಆಚರಿಸಲಿದ್ದು, ಇಂದು ವಿವಾಹಿತ ಮಹಿಳೆಯರ ಮನೆಗೆ ತವರು ಮನೆಯವರು ಖಿಚಡಿ ಮಾಡಲು ಬೇಕಾಗುವ ಪದಾರ್ಥಗಳನ್ನು ದಾನ ಕೊಡುತ್ತಾರೆ. ಮನೆಗಳಲ್ಲಿ ಖಿಚಡಿ ತಯಾರಿಸಿ ಸಂಬ್ರಮಿಸುತ್ತಾರೆ. ಇದರೊಂದಿಗೆ ವಿವಿಧ ಆಚರಣೆಗಳೂ ಇರುತ್ತವೆ.

ಮಹಾರಾಷ್ಟ್ರ
ಈ ದಿನದಂದು ಮಹಾರಾಷ್ಟ್ರದಲ್ಲಿ ಎಳ್ಳು ಬೆಲ್ಲ ಮಿಶ್ರಿತ ಸಿಹಿ ಪದಾರ್ಥಗಳನ್ನು ತಯಾರಿಸಿ ಹಂಚುತ್ತಾರೆ. ಈ ದಿನ ಮಹಿಳೆಯರು ಕಪ್ಪು ಬಟ್ಟೆಗಳನ್ನು ಧರಿಸುತ್ತಾರೆ. ಚಳಿ ಹೆಚ್ಚಿರುವುದರಿಂದ ಕಪ್ಪು ಬಟ್ಟೆ ಉಷ್ಣತೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಮನೆಗೆ ಸಂಬಂಧಿಕರನ್ನು ಕರೆದು ಉಡುಗೊರೆ ಕೊಟ್ಟು ಸಂಬ್ರಮಿಸುತ್ತಾರೆ.

ಒಡಿಶಾ
ಒಡಿಶಾದಲ್ಲಿ ಈ ಹಬ್ಬದ ದಿನ ಮಕರ ಚೌಲವನ್ನು ತಯಾರಿಸುತ್ತಾರೆ., ಬಾಳೆಹಣ್ಣು, ತೆಂಗಿನಕಾಯಿ, ಬೆಲ್ಲ, ಎಳ್ಳು ಬೆರೆಸಿ ಭಕ್ಷ್ಯ ತಯಾರಿಸುತ್ತಾರೆ. ಇಲ್ಲಿನ ಕೋನಾರ್ಕ್ ಮಹಾ ದೇವಾಲಯದಲ್ಲಿ ಉತ್ಸಾವ ನಡೆಯುತ್ತದೆ. ಸೂರ್ಯ ದೇವರನ್ನು ಪೂಜಿಸುವ ಭಕ್ತರಿಗೆ ಇದು ಖಗೋಳಶಾಸ್ತ್ರದ ಮಹತ್ವದ್ದಾಗಿದೆ. ಹಾಡುತ್ತಾರೆ, ನೃತ್ಯ ಮಾಡುತ್ತಾರೆ ನಿರ್ದಿಷ್ಟ ಭಕ್ಷ್ಯಗಳನ್ನು ಒಟ್ಟಿಗೆ ಕುಳಿತು ಸವಿಯುತ್ತಾರೆ. ದೀಪಗಳನ್ನು ಬೆಳಗಿಸುವ ಮೂಲಕ ಆಚರಿಸುತ್ತಾರೆ.

ಪಂಜಾಬ್
ಪಂಜಾಬ್‌ನಲ್ಲಿ ಮಾಘಿ ಎಂದುಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಎಳ್ಳಿನ ಎಣ್ಣೆಯಿಂದ ದೀಪಗಳನ್ನು ಬೆಳಗಿಸುತ್ತಾರೆ. ಇಲ್ಲಿ ಮೇಳಗಳು ಕೂಡ ನಡೆಯುತ್ತವೆ.

ತಮಿಳುನಾಡು
ತಮಿಳು ಹಬ್ಬವಾದ ಪೊಂಗಲ್ ಮಕರ ಸಂಕ್ರಾಂತಿಯನ್‌ನು ಆಚರಿಸುತ್ತಾರೆ. ಇಲ್ಲೂ ನಾಲ್ಕು ದಿನಗಳ ಕಾಲ ಹಬ್ಬ ನಡೆಯುತ್ತದೆ. ಭೋಗಿ ಪಂಡಿಗೈ, ಥೈ ಪೊಂಗಲ್‌, ಮಾಟ್ಟು ಪೊಂಗಲ್‌ ಹಾಗೂ ಕಾಣು ಪೊಂಗಲ್‌ ಎಂದು ಆಚರಿಸುತ್ತಾರೆ.

ಕರ್ನಾಟಕ
ಕರ್ನಾಟಕ ರಾಜ್ಯದಲ್ಲಿ ಹೆಣ್ಣು ಮಕ್ಕಳು ಸಂಕ್ರಾಮತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಸಂಜೆ ಎಳ್ಳು ಬೆಲ್ಲ, ಸಕ್ಕರೆ, ಕಬ್ಬನ್ನು ಮನೆ ಮನೆಗೆ ಹಂಚಿ ಖುಷಿ ಪಡುತ್ತಾರೆ. ಇನ್ನು ಹಲ್ಳಿಗಳಲ್ಲಿ ಎತ್ತುಗಳನ್ನು ಕಿಚ್ಚಿಗೆ ಹಾಯಿಸುತ್ತಾರೆ. ದಕಷಿಣ ಭಾರತದಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಿ ಆಚರಿಸಲಾಗುತ್ತದೆ.