ವ್ಯಕ್ತಿಗತ ವಾಸ್ತು ದೋಷಕ್ಕೆ ಪರಿಹಾರ ಇದೆಯಾ..?

0
439

ಬೆಂಗಳೂರು, ಡಿ. 28 : ವಾಸ್ತು ದೋಷದ ಬಗ್ಗೆ ಎಷ್ಟೇ ಆಳವಾಗಿ ಹೋದರೆ, ತಿಳಿದುಕೊಳ್ಳುವ ವಿಚಾರಗಳು ಕಡಿಮೆಯಾಗುವುದಿಲ್ಲ. ವಾಸ್ತು ದೋಷಗಳು ಕೇವಲ ವಸ್ತು ಮತ್ತು ದಿಕ್ಕನ್ನು ನೋಡಿ ಹೇಳುವುದಲ್ಲ. ಈಗಾಗಲೇ ಇಂಡಿಯನ್ ಕೌನ್ಸಿಲ್ ಆಫ್ ಅಸ್ಟ್ರಾಲಾಜಿಕಲ್ ಸೈನ್ಸ್ ಪ್ರೊಫೇಸರ್ ಆಗಿ ಸೇವೆ ಸಲ್ಲಿಸಿರುವ ಹಾಗೂ ವಾಸ್ತು ಶಾಸ್ತ್ರದಲ್ಲಿ ಪಿಎಚ್ʼಡಿ ಮಾಡಿರುವ ಪ್ರೊಫೇಸರ್ ಡಾ. ರೇವತಿ ವೀ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ವ್ಯಕ್ತಿಯ ಕರ್ಮ ದೋಷಗಳ ಮೇಲೂ ನಿರ್ಧಾರವಾಗುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಹಾಗಾದರೆ ವ್ಯಕ್ತಿ ದೋಷಕ್ಕೆ ಪರಿಹಾರ ಇದೆಯಾ ? ಕರ್ಮ ಸಿದ್ಧಾಂತ ಏನು ಹೇಳುತ್ತದೆ ? ವ್ಯಕ್ತಿ ದೋಷಕ್ಕೆ ಪರಿಹಾರ ಮಾಡಬಹುದು? ವ್ಯಕ್ತಿ ದೋಷದಿಂದ ಆಗುವ ಸಮಸ್ಯೆಗಳನ್ನು ಅಲ್ಪ ಮಟ್ಟಿಗೆ ಕಡಿಮೆ ಮಾಡಬಹುದೇ ? ವ್ಯಕ್ತಿ ದೋಷಕ್ಕೆ ವಾಸ್ತು ಶಾಸ್ತ್ರದಲ್ಲಿ ಇರುವ ಪರಿಹಾರ ಏನು ?. ಎಂಬ ಪ್ರಶ್ನೆಗಳಿಗೆ ಪ್ರೊಫೇಸರ್ ಡಾ. ರೇವತಿ ವೀ ಕುಮಾರ್ ಉತ್ತರಿಸಿದ್ದಾರೆ.

ಡಾ.ರೇವತಿ ವೀ ಕುಮಾರ್ ಅವರ ಪ್ರಕಾರ, ಒರತಿಯೊಂದು ಸಮಸ್ಯೆಗಳಿಗೂ ಪರಿಹಾರವಿರುತ್ತೆ. ಆದರೆ, ಪರಿಹಾರಗಳಿಗೂ ಕೊನೆ ಅಂತ ಇರುತ್ತೆದೆಯಂತೆ. ಕೆಲ ದೋಷಗಳು ಕರ್ಮ ಫಲವಾಗಿರುತ್ತವೆ. ಕರ್ಮ ದೋಷವನ್ನ ಅಷ್ಟು ಸಾಧಾರಣವಾಗಿ ಸುಲಭವಾಗಿ ಪರಿಹಾರ ಮಾಡುವುದು ತುಂಬಾನೇ ಕಷ್ಟ. ಕರ್ಮ ಸಿದ್ಧಾಂತದಲ್ಲಿ ಪರಿಹಾರ ನೀಡಲು ಆ ವ್ಯಕ್ತಿಗೆ ಪರಿಹಾರ ಸಿಗುತ್ತದೆಯಾ ಇಲ್ಲವೇ ಎಂಬುದನ್ನು ಮೊದಲು ನೋಡಬೇಕಾಗುತ್ತದೆ. ಇದನ್ನೆಲ್ಲಾ ನೋಡಬೇಕು ಎಂದು ವ್ಯಕ್ತಿಯ ವಾಸ್ತು ನೋಡಲೇಬೇಕು ಎಂದು ಹೇಳಿದ್ದಾರೆ. ಅಲ್ಲಿಗೆ ವಾಸ್ತು ಶಾಸ್ತ್ರವೂ ಜ್ಯೋತಿಷ್ಯಕ್ಕೆ ಸಂಬಂಧಪಟ್ಟದ್ದೇ ಎಂಬ ಡಾ.ರೇವತಿ ವೀ ಕುಮಾರ್ ಅವರು ಈ ಹಿಂದೆಯೇ ಹೇಳಿದ್ದರು.

ದೋಷವಿರುವ ವ್ಯಕ್ತಿಯ ಜಾತಕವನ್ನು ಹೆಚ್ಚು ಗಮನಕೊಟ್ಟಿ ನೋಡಿ ತಿಳಿಯಬೇಕು. ಕರ್ಮ ಸಿದ್ಧಾಂತವನ್ನೆಲ್ಲಾ ಜ್ಯೋತಿಷ್ಯದ ಮೂಲಕವೇ ನೋಡುವಂತಹದ್ದು. ವ್ಯಕ್ತಿಗೆ ಪರಿಹಾರ ಇದೆ ಎಂಬುದಾಗಲೀ ಇಲ್ಲ ಎಂಬುದಾಗಲೀ ಜಾತಕದಿಂದ ನೋಡಬಹುದು. ದೋಷ ನಿವಾರಣೆ ಸಾಧ್ಯವಾಗುತ್ತೆ. ಪರಿಹಾರ ಸಾಧ್ಯ ಇದ್ದರೆ, ಅವರ ಗ್ರಹಗತಿಗಳ ಬಗ್ಗೆಯೂ ತಿಳಿಯಬೇಕಾಗುತ್ತದೆ. ಯಾಕೆಂದರೆ, ವ್ಯಕ್ತಿಗೆ ನಾಲ್ಕನೇ ಮನೆಯಲ್ಲಿ ಅಶುಭಗಳಿದ್ದಾಗ ತೊಂದರೆ ಆಗುವುದೇ ಹೆಚ್ಚು. ಉದಾಹರಣೆಗೆ, ನಾಲ್ಕನೇ ಮನೆಯಲ್ಲಿ ರಾಹು ಗ್ರಹ ಇದ್ದರೆ, ಆ ಮನೆ ಮುಂದಿನ ಪೀಳಿಗೆ ಸಿಗುವುದಿಲ್ಲ. ಕರ್ಮದೋಷ ಇರುವ ವ್ಯಕ್ತಿಗೆ ಕೊನೆಯಾಗುತ್ತದೆ.

ಇನ್ನು ಶುಭ ಗ್ರಹಗಳು ನಾಲ್ಕನೇ ಮನೆಯಲ್ಲಿದ್ದರೆ ಒಳ್ಳೆಯದಾಗುತ್ತೆ. ಉದಾಹರಣಗೆ ಗುರು ಗ್ರಹ ನಾಲ್ಕನೆ ಮನೆಯಲ್ಲಿ ಇದ್ದರೆ, ವ್ಯಕ್ತಿಗೆ ಮನೆ ಸಿಗುತ್ತದೆ ಎಂದು ಸಾಮಾನ್ಯವಾಗಿ ಹೇಳಬಹುದು. ಹೀಗಿದ್ದಲ್ಲಿ ವಾಸ್ತು ಪರಿಹಾರವನ್ನು ಮಾಡುವುದು ಉತ್ತಮ. ಆಗ ಲೋಪದೋಷಗಳನ್ನ ಕಡಿಮೆ ಮಾಡಿಕೊಳ್ಳಬಹುದು. ಪ್ರಾರ್ಬ್ಧ ಇದ್ದರೆ ಮಾತ್ರವೇ ಪರಿಹಾರ ಮಾಡಲು ಸಾಧ್ಯವಿರುತ್ತದೆ. ಇನ್ನು ಕಟ್ಟಿರುವ ಮನೆಯಲ್ಲಿ ಲೋಪದೋಷಗಳಿವೆ ಎಂದರೆ, ತಕ್ಕ ಮಟ್ಟಿಗೆ ಪರಿಹಾರವನ್ನು ಮಾಡಿಕೊಳ್ಳಬಹುದು. ಮನೆಯಲ್ಲಿ ಸಮಸ್ಯೆಗಳು ಮೇಲಿಂದ ಮೇಲೆ ಬರುತ್ತಿವೆ ಎಂದರೆ, ಎಷ್ಟು ಹಣ ತಂದರೂ ಉಳಿಯುತ್ತಿಲ್ಲ. ಆಸ್ಪತ್ರೆಗಳಿಗೆ ಅಲೆದರೂ, ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದರೆ ಕರ್ಮದೋಷಗಳ ಬಗ್ಗೆ ತಿಳಿದುಕೊಂಡು ಸಾಧ್ಯವಾದಷ್ಟು ಕಡಿಮೆ ಮಾಡಬಹುದು ಎಂದು ಡಾ. ರೇವತಿ ವೀ.ಕುಮಾರ್ ಅವರು ತಿಳಿಸಿದ್ದಾರೆ.