ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಇಸ್ರೋ ಉಪಗ್ರಹ ಉಡ್ಡಯನ

0
173

ದೆಹಲಿ: ಭಾರತ ಸದ್ಯದಲ್ಲೇ ಸಂಪರ್ಕ ಕ್ಷೇತ್ರದಲ್ಲಿ(contact field) ಹೊಸ ಸಾಧನೆ ಮಾಡಲು, ಸಂಪರ್ಕ ಕ್ರಾಂತಿ ಉಂಟು ಮಾಡಲು ಮುಂದಾಗಿದೆ. ಅದಕ್ಕಾಗಿ ಈ ವರ್ಷದ 2ನೇ ತ್ರೈಮಾಸಿಕದಲ್ಲಿ ‘ಜಿಸ್ಯಾಟ್-20’ ಆರ್ಥಾತ್ ಜಿಯೊ ಸಿಂಕ್ರೋನಸ್ ಸ್ಯಾಟಿಲೈಟ್ ಉಡಾವಣೆ ಮಾಡಲಿದೆ.ಸ್ಪೇಸ್‌ ಎಕ್ಸ್ ರಾಕೆಟ್‌ನಲ್ಲಿ(Space X rocket) ಇಸ್ರೋ(Isro) ಉಪಗ್ರಹ ಉಡಾವಣೆ ಇಸ್ರೋದ ವಾಣಿಜ್ಯ ಅಂಗಸಂಸ್ಥೆ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL), ಸ್ಪೇಸ್ ಎಕ್ಸ್‌ನ ‘ಫಾಲ್ಕನ್-9′ ರಾಕೆಟ್‌ನ ನೆರವಿನಿಂದ ಸಂವಹನ ಉದ್ದೇಶದ ಉಪಗ್ರಹವನ್ನು ಉಡ್ಡಯನ ಮಾಡಲಿದೆ. ಇಸ್ರೋ ಬಳಿ ಇರುವ “GSLV-MK3’ ರಾಕೆಟ್‌ನಿಂದ 4 ಟನ್‌ ಭಾರದ ಉಪಗ್ರಹಗಳನ್ನು ಮಾತ್ರ ಭೂ ಕಕ್ಷೆಗೆ ಸೇರಿಸಬಹುದಾಗಿದೆ. ಹೀಗಾಗಿ 4.7 ಟನ್ ಭಾರದ ‘GSAT-20’ ಉಪಗ್ರಹ ಉಡ್ಡಯನಕ್ಕೆ ಸ್ಪೇಸ್ ಎಕ್ಸ್‌ನ ಅಧಿಕ ಸಾಮರ್ಥ್ಯದ ‘ಫಾಲ್ಕನ್-9’ ರಾಕೆಟ್ ಬಳಸಲಾಗುತ್ತದೆ.ವಿಶ್ವದ ಅತ್ಯಂತ ಸಿರಿವಂತ ಉದ್ಯಮಿ ಎಲಾನ್ ಮಸ್ಕ್ ಅವರ ಒಡೆತನದ ಬಾಹ್ಯಾಕಾಶ ಯಾನ ಸಂಸ್ಥೆ ‘ಸ್ಪೇಸ್ ಎಕ್ಸ್’ ಕಂಪನಿ ಅಭಿವೃದ್ಧಿಪಡಿಸಿರುವ ಬಲು ಶಕ್ತಿಶಾಲಿ ರಾಕೆಟ್ ಎನಿಸಿರುವ ‘ಫಾಲ್ಕನ್ -9’ ಖಾಸಗಿ ಗಗನಯಾನ ಕ್ಷೇತ್ರದ ‘ಬಾಹುಬಲಿ’ ಎಂದೇ ಹೆಸರಾಗಿದೆ. ಅತಿಭಾರದ ಉಪಗ್ರಹಗಳನ್ನು ಅಂತರಿಕ್ಷದಲ್ಲಿ ಬಲು ದೂರದವರೆಗೂ ಕೊಂಡೊಯ್ಯಬಲ್ಲದಾಗಿದೆ.ಇಸ್ರೋದ ವಾಣಿಜ್ಯ ವಿಭಾಗ ‘ಎನ್‌ಎಸ್‌ಐಎಲ್(NSIL)’ನ ಯೋಜನೆಯ ಭಾಗವಾದ ‘ಜಿಸ್ಯಾಟ್-20’ ಉಪಗ್ರಹವನ್ನು ಭೂಮಿಯಿಂದ 36,756 ಕಿಮೀಗಳಷ್ಟು ದೂರಕ್ಕೆ ಸಮರ್ಥವಾಗಿ ಕೊಂಡೊಯ್ಯಲು ಫಾಲ್ಕನ್-9 ನಂತಹ ಶಕ್ತಿಶಾಲಿ ರಾಕೆಟ್ ನೆರವು ಅಗತ್ಯವಾಗಿದೆ. ಪ್ರಸ್ತುತ ‘ಇಸ್ರೋ’ ಬಳಿ ನೆರವು “ಜಿಸ್ಯಾಟ್-20 ‘ಯಂತಹ ದೊಡ್ಡದಾದ, ಭಾರವಾದ (ಅಂದಾಜು 4,700 ಕಿಲೊ) ಉಪಗ್ರಹವನ್ನು ಹೊತ್ತು ಸ್ಪೇಸ್‌ ಎಕ್ಸ್ ರಾಕೆಟ್‌ನಲ್ಲಿ ಇಸ್ರೋ ಉಪಗ್ರಹ ಉಡಾವಣೆ ಇಸ್ರೋದ ವಾಣಿಜ್ಯ ಅಂಗಸಂಸ್ಥೆ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL), ಸ್ಪೇಸ್ ಎಕ್ಸ್‌ನ ‘ಫಾಲ್ಕನ್-9′ ರಾಕೆಟ್‌ನ ನೆರವಿನಿಂದ ಸಂವಹನ ಉದ್ದೇಶದ ಉಪಗ್ರಹವನ್ನು ಉಡ್ಡಯನ ಮಾಡಲಿದೆ. ಇಸ್ರೋ ಬಳಿ ಇರುವ “GSLV-MK3’ ರಾಕೆಟ್‌ನಿಂದ 4 ಟನ್‌ ಭಾರದ ಉಪಗ್ರಹಗಳನ್ನು ಮಾತ್ರ ಭೂ ಕಕ್ಷೆಗೆ ಸೇರಿಸಬಹುದಾಗಿದೆ