24.5 C
Bengaluru
Thursday, December 19, 2024

ಹುಬ್ಬಳ್ಳಿ-ಧಾರವಾಡದ ಮೊದಲ ಮಹಿಳಾ ಪೊಲೀಸ್ ಆಯುಕ್ತರಾಗಿ ರೇಣುಕಾ ಕೆ ಸುಕುಮಾರ್ ನೇಮಕ

#hublidharwad #womancommissioner #transfer #Renuka k sukumar

ಧಾರವಾಡ: ಹುಬ್ಬಳ್ಳಿ-ಧಾರವಾಡದ ಮೊದಲ ಮಹಿಳಾ ಪೊಲೀಸ್ ಕಮಿಷನರ್(Policecommissioner) ಆಗಿ ಐಪಿಎಸ್(IPS) ಅಧಿಕಾರಿ ರೇಣುಕಾ ಕೆ ಸುಕುಮಾರ್ ಅವರನ್ನು ಕರ್ನಾಟಕ ಸರ್ಕಾರ ಬುಧವಾರ ನೇಮಕ ಮಾಡಿದೆ.ರೇಣುಕಾ ಅವರು ಈ ಹಿಂದೆ ಕಮಿಷನರೇಟ್‌ ನಲ್ಲಿ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.ಆಗಸ್ಟ್ 9 ರಂದು ಹೊರಡಿಸಿದ ವರ್ಗಾವಣೆ(Transfer) ಆದೇಶದಲ್ಲಿ ಐಪಿಎಸ್ ಅಧಿಕಾರಿ ಸಂತೋಷ್ ಬಾಬು ಬದಲಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ರೇಣುಕಾ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.ಹುಬ್ಬಳ್ಳಿ-ಧಾರವಾಡ ಕಮಿಷನರ್ ಹುದ್ದೆಯನ್ನು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ಸಮನಾಗಿ ಪರಿಗಣಿಸಲಾಗುವುದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.2011ರ ಬ್ಯಾಚ್‌ ನ ಐಪಿಎಸ್ ಅಧಿಕಾರಿಯಾಗಿರುವ ರೇಣುಕಾ ಅವರು ಪ್ರಸ್ತುತ ಡೆಪ್ಯುಟಿ ಕಮಾಂಡೆಂಟ್ ಜನರಲ್, ಗೃಹ ರಕ್ಷಕರು ಮತ್ತು ಸಿವಿಲ್ ಡಿಫೆನ್ಸ್‌ನ ಪದನಿಮಿತ್ತ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಅವರು ಈ ಹಿಂದೆ ಮಾರ್ಚ್ 2018 ರಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಮೊದಲ ಮಹಿಳಾ ಅಧಿಕಾರಿ.

Related News

spot_img

Revenue Alerts

spot_img

News

spot_img