Revenue Facts

5 ವರ್ಷದಲ್ಲಿ 2 ಲಕ್ಷ ಬಡ್ಡಿ ನೀಡುವ ಈ ಯೋಜನೆ ಹಿರಿಯ ನಾಗರಿಕರಿಗೆ ಮಾತ್ರ

5 ವರ್ಷದಲ್ಲಿ 2 ಲಕ್ಷ ಬಡ್ಡಿ ನೀಡುವ ಈ ಯೋಜನೆ ಹಿರಿಯ ನಾಗರಿಕರಿಗೆ ಮಾತ್ರ

ಬೆಂಗಳೂರು, ಡಿ. 15: ಹಿರಿಯ ನಾಗರಿಕರು ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ನಲ್ಲಿ ಹಣ ಉಳಿತಾಯ ಮಾಡಿ, ಉತ್ತಮವಾದ ರಿಟರ್ನ್ಸ್‌ ಅನ್ನು ಪಡೆಯಬಹುದಾಗಿದೆ. ಇದು 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಸರ್ಕಾರಿ ಪ್ರಾಯೋಜಿತ ಉಳಿತಾಯ ಯೋಜನೆಯಾಗಿದೆ. ಭಾರತ ಸರ್ಕಾರವು 2004 ರಲ್ಲಿ ಹಿರಿಯ ನಾಗರಿಕರಿಗೆ ಅವರ ನಿವೃತ್ತಿಯ ನಂತರದ ಆದಾಯದ ಸ್ಥಿರ ಮತ್ತು ಸುರಕ್ಷಿತ ಮೂಲವನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಿತು.

ಭಾರತದಲ್ಲಿನ ಅತ್ಯಂತ ಲಾಭದಾಯಕ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಸರ್ಕಾರದ ಬೆಂಬಲಿತ ಯೋಜನೆಯಾಗಿರುವುದರಿಂದ ನಿಮ್ಮ ಮೊತ್ತಕ್ಕೆ ಸುರಕ್ಷತೆ ಇರುತ್ತದೆ. ಹಿರಿಯ ನಾಗರೀಕರು. ಅಂದರೆ, 60 ವರ್ಷ ಮೇಲ್ಪಟ್ಟವರು ಈ ಯೋಜನೆಯ ಖಾತೆಯನ್ನು ತೆರೆಯಬಹುದು. ಇದನ್ನು ಕೇವಲ ಅಂಚೆ ಕಛೇರಿಯಲ್ಲಷ್ಟೇ ಅಲ್ಲದೇ, ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳ ಮೂಲಕವೂ ಅರ್ಜಿ ಸಲ್ಲಿಸಬಹುದು. ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ನೀಡುವ ಬಡ್ಡಿದರವನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸಲಾಗುತ್ತದೆ.

ಹೂಡಿಕೆಯ ಸಮಯದಲ್ಲಿ ಘೋಷಿಸಲಾದ ಬಡ್ಡಿದರವು ಮುಕ್ತಾಯದ ಅವಧಿಯ ಉದ್ದಕ್ಕೂ ಸ್ಥಿರವಾಗಿರುತ್ತದೆ. ಅರ್ಹ ವ್ಯಕ್ತಿಗಳು ಗರಿಷ್ಠ 30 ಲಕ್ಷ ರೂಪಾಯಿಯವರೆಗೆ ಹಣ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಗೆ ಮೆಚ್ಯೂರಿಟಿ ಅವಧಿಯು 5 ವರ್ಷಗಳಾಗಿರುತ್ತವೆ. ಇದನ್ನು ಇನ್ನೂ 3 ವರ್ಷಗಳವರೆಗೆ ವಿಸ್ತರಿಸಬಹುದು, ಪರಿಣಾಮಕಾರಿಯಾಗಿ ಅವಧಿಯನ್ನು 8 ವರ್ಷಗಳವರೆಗೆ ತರಬಹುದು. ಒಬ್ಬ ವ್ಯಕ್ತಿಯು ಅಂತಹ ಅವಧಿಯನ್ನು 3 ವರ್ಷಗಳವರೆಗೆ ವಿಸ್ತರಿಸಲು ಸಿದ್ಧರಿದ್ದರೆ, ಫಾರ್ಮ್ ಬಿ ಅನ್ನು ಸಲ್ಲಿಸಬೇಕು.

ಸದ್ಯ ಈ ಯೋಜನೆಗೆ ಬಡ್ಡಿ ದರವು ಶೇ. 8.2% ರಷ್ಟಿದೆ. ಈಗ ನೀವು 5 ಲಕ್ಷ ಹಣವನ್ನು ಹೂಡಿದರೆ, ತಿಂಗಳಿಗೆ 3,416 ರೂ., ಆರು ತಿಂಗಳಿಗೆ 10,250 ರೂ., ವರ್ಷಕ್ಕೆ 41,000 ರೂಪಾಯಿ ಬಡ್ಡಿ ಸಿಗುತ್ತದೆ. ಅಲ್ಲಿಗೆ ನಿಮಗೆ ಐದು ವರ್ಷಕ್ಕೆ ಒಟ್ಟು 2,05,000 ರೂ ಬಡ್ಡಿ ಸಿಗುತ್ತದೆ. ನೀವು ಬಡ್ಡಿಯನ್ನು ಪಡೆಯದೇ, ಒಟ್ಟಿಗೆ ಮೆಚ್ಯುರಿಟಿಯ ಬಳಿ ಹಣವನ್ನು ಪಡೆದರೆ ನಿಮಗೆ 7,05,000 ಲಕ್ಷ ರೂಪಾಯಿ ಕೈ ಸೇರುತ್ತದೆ.

Exit mobile version