Revenue Facts

Bank Holidays in December;ಡಿಸೆಂಬರ್‌ನಲ್ಲಿ 18 ದಿನಗಳ ಬ್ಯಾಂಕ್‌ಗಳಿಗೆ ರಜೆ

ನವದೆಹಲಿ;ಭಾರತೀಯ ರಿಸರ್ವ್ ಬ್ಯಾಂಕ್(RBI) ವಿವಿಧ ರಾಜ್ಯಗಳ ಪ್ರಕಾರ ರಜೆ ಪಟ್ಟಿ ನೀಡುತ್ತದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಇದನ್ನು ಪರಿಶೀಲಿಸಬಹುದು. ಡಿಸೆಂಬರ್ 2023 ರಲ್ಲಿ ಒಟ್ಟು 18 ದಿನಗಳ ಬ್ಯಾಂಕ್ ರಜಾದಿನಗಳು ಇರುತ್ತವೆ. ಇದರಲ್ಲಿ ಶನಿವಾರ ಮತ್ತು ಭಾನುವಾರದ ರಜೆಗಳೂ ಸೇರಿವೆ.ಡಿಸೆಂಬರ್‌ನಲ್ಲಿ 18 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ ಎಂದು ಆರ್‌ಬಿಐ ಘೋಷಿಸಿದೆ. ಇದರಲ್ಲಿ 2ನೇ, 4ನೇ ಶನಿವಾರ & ಭಾನುವಾರದ ರಜೆಗಳು ಸೇರಿವೆ. ಬ್ಯಾಂಕುಗಳು ಮುಚ್ಚಿದರೂ, ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ ಎಂದು ತಿಳಿಸಿದೆ. ಇದಲ್ಲದೇ, ಡಿ.4ರಿಂದ 11ರವರೆಗೆ ರಾಜ್ಯವಾರು ಹಾಗೂ ಬ್ಯಾಂಕ್ ವಾರು 6 ದಿನಗಳ ಕಾಲ ಮುಷ್ಕರ ನಡೆಸುವುದಾಗಿ ಅಖಿಲ ಭಾರತೀಯ ಬ್ಯಾಂಕ್‌ ನೌಕರರ ಸಂಘ (AIEBA) ಪ್ರಕಟಿಸಿದೆ.ಡಿಸೆಂಬರ್ 4 – ಪಂಜಾಬ್ ನ್ಯಾಷನಲ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡಿಸೆಂಬರ್ 5 – ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ ಡಿಸೆಂಬರ್ 6 – ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಡಿಸೆಂಬರ್ 7 – ಇಂಡಿಯನ್ ಬ್ಯಾಂಕ್, ಯುಕೋ ಬ್ಯಾಂಕ್ ಬಂದ್ ಆಗಿರುತ್ತೆ.ಡಿಸೆಂಬರ್ 8 – ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ಡಿಸೆಂಬರ್ 11- ಎಲ್ಲಾ ಖಾಸಗಿ ಬ್ಯಾಂಕ್‌ಗಳು ಬಂದ್‌ ಆಗಿರುತ್ತೆ.

ಡಿಸೆಂಬರ್ ತಿಂಗಳಲ್ಲಿ ಆರ್​ಬಿಐ ಕ್ಯಾಲೆಂಡರ್ ಪ್ರಕಾರ ಬ್ಯಾಂಕ್ ರಜಾ ದಿನಗಳು

ಡಿಸೆಂಬರ್ 1: ಅರುಣಾಚಲಪ್ರದೇಶ ಮತ್ತು ನಾಗಾಲ್ಯಾಂಡ್​ನಲ್ಲಿ ರಾಜ್ಯೋತ್ಸವ ಪ್ರಯುಕ್ತ ಬ್ಯಾಂಕ್ ರಜೆ

ಡಿಸೆಂಬರ್ 3: ಭಾನುವಾರ

ಡಿಸೆಂಬರ್ 4: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಉತ್ಸವ ಪ್ರಯುಕ್ತ ಗೋವಾದಲ್ಲಿ ಬ್ಯಾಂಕ್ ರಜೆ

ಡಿಸೆಂಬರ್ 9: ಎರಡನೇ ಶನಿವಾರ

ಡಿಸೆಂಬರ್ 10: ಭಾನುವಾರ

ಡಿಸೆಂಬರ್ 12: ಪಾ ಟೋಗನ್ ನೆಂಗ್ಮಿಂಜ ಸಾಂಗ್ಮ ಪ್ರಯುಕ್ತ ಮೇಘಾಲಯದಲ್ಲಿ ಬ್ಯಾಂಕ್ ರಜೆ

ಡಿಸೆಂಬರ್ 13: ಲೋಸುಂಗ್, ನ್ಯಾಮ್​ಸುಂಗ್ ಪ್ರಯುಕ್ತ ಸಿಕ್ಕಿಂನಲ್ಲಿ ಬ್ಯಾಂಕ್ ರಜೆ

ಡಿಸೆಂಬರ್ 14: ಲೋಸುಂಗ್, ನ್ಯಾಮ್​ಸುಂಗ್ ಪ್ರಯುಕ್ತ ಸಿಕ್ಕಿಂನಲ್ಲಿ ಬ್ಯಾಂಕ್ ರಜೆ

ಡಿಸೆಂಬರ್ 17: ಭಾನುವಾರ

ಡಿಸೆಂಬರ್ 18: ಉ ಸೋಸೋ ಥಾಮ್ ಪುಣ್ಯ ತಿಥಿ ಪ್ರಯುಕ್ತ ಮೇಘಾಲಯದಲ್ಲಿ ಬ್ಯಾಂಕ್ ರಜೆ

ಡಿಸೆಂಬರ್ 19: ಗೋವಾ ವಿಮುಕ್ತಿ ದಿನದ ಪ್ರಯುಕ್ತ ಅಲ್ಲಿನ ಬ್ಯಾಂಕುಗಳಿಗೆ ರಜೆ

ಡಿಸೆಂಬರ್ 23: ನಾಲ್ಕನೇ ಶನಿವಾರ

ಡಿಸೆಂಬರ್ 24: ಭಾನುವಾರ

ಡಿಸೆಂಬರ್ 25: ಕ್ರಿಸ್ಮಸ್

ಡಿಸೆಂಬರ್ 26: ಕ್ರಿಸ್ಮಸ್ ಪ್ರಯುಕ್ತ ಮಿಜೋರಾಮ್, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಬ್ಯಾಂಕ್ ರಜೆ

ಡಿಸೆಂಬರ್ 27: ಕ್ರಿಸ್ಮಸ್ ಪ್ರಯುಕ್ತ ನಾಗಾಲ್ಯಾಂಡ್​ನಲ್ಲಿ ಬ್ಯಾಂಕ್ ರಜೆ

ಡಿಸೆಂಬರ್ 30: ಉ ಕಿಯಾಂಗ್ ನಂಗ್​ಬಾಹ್ ಪ್ರಯುಕ್ತ ಮೇಘಾಲಯದಲ್ಲಿ ಬ್ಯಾಂಕ್ ರಜೆ

ಡಿಸೆಂಬರ್ 31: ಭಾನುವಾರ

Exit mobile version