Revenue Facts

Bank Holidays:ಆಗಸ್ಟ್ ತಿಂಗಳಲ್ಲಿ 14 ದಿನಗಳು ಬ್ಯಾಂಕ್ ರಜೆ

ನವದೆಹಲಿ : ಜುಲೈ ತಿಂಗಳು ಮುಗಿಯಲು ಇನ್ನು ಕೆಲವು ದಿನಗಳಷ್ಟೇ ಬಾಕಿ ಉಳಿದಿವೆ ಭಾರತೀಯ ರಿಸರ್ವ್(RBI) ಬ್ಯಾಂಕ್ ನ ರಜಾದಿನದ ಕ್ಯಾಲೆಂಡರ್ ಪ್ರಕಾರ 2023 ರ ಆಗಸ್ಟ್ ತಿಂಗಳಿನಲ್ಲಿ ವಾರಾಂತ್ಯ ಸೇರಿ ಒಟ್ಟು 14 ದಿನಗಳು ಬ್ಯಾಂಕ್ ರಜಾ ಇರಲಿದೆ.ಸಾರ್ವಜನಿಕರು ಬ್ಯಾಂಕ್ ಕೆಲಸಗಳಿಗೆ ಭೇಟಿ ಕೊಡುವ ಮುನ್ನ ರಜಾ ದಿನಗಳ ಬಗ್ಗೆ ನೋಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.ಆದರೂ ಎಲ್ಲಾ ದಿನ ಇಂಟರ್ನೆಟ್ ಬ್ಯಾಂಕಿಂಗ್ ದೇಶಾದ್ಯಂತ ಲಭ್ಯವಿರುತ್ತದೆ.

 

ಆಗಸ್ಟ್ ತಿಂಗಳ ರಜಾ ದಿನಗಳ ಪಟ್ಟಿ :

ಆಗಸ್ಟ್ 6 : ತಿಂಗಳ ಮೊದಲ ಭಾನುವಾರ

ಆಗಸ್ಟ್ 8 : ಟೆಂಡೋಂಗ್ ಲ್ಹೋ ರಮ್ ಘಾತ್ (ಗ್ಯಾಂಗ್ಟಾಕ್ ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತದೆ)

ಆಗಸ್ಟ್ 12 : ತಿಂಗಳ ಎರಡನೇ ಶನಿವಾರ

ಆಗಸ್ಟ್ 15 : ಸ್ವಾತಂತ್ಯ್ರ ದಿನ

ಆಗಸ್ಟ್ 16 : ಪಾರ್ಸಿ ಹೊಸ ವರ್ಷ ( ಈ ಆಚರಣೆಗೆ ಬೇಲಾಪುರ್, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತದೆ)

ಆಗಸ್ಟ್ 18 : ಶ್ರೀಮಂತ ಶಂಕರದೇವರ ತಿಥಿ (ಗುಹವಾಟಿಯಲ್ಲಿ ಬ್ಯಾಂಕ್ ರಜೆ)

ಆಗಸ್ಟ್ 20 : ಮೂರನೇ ಭಾನುವಾರ

ಆಗಸ್ಟ್ 26 : ತಿಂಗಳ ನಾಲ್ಕನೇ ಶನಿವಾರ

ಆಗಸ್ಟ್ 27 : ತಿಂಗಳ ನಾಲ್ಕನೇ ಭಾನುವಾರ

ಆಗಸ್ಟ್ 28 : ಮೊದಲ ಓಣಂ ( ಕಾರಣ ಕೊಚ್ಚಿ ನತ್ತು ತಿರುವನಂತಪುರದಲ್ಲಿ ಬ್ಯಾಂಕುಗಳು ರಜೆ ಇರಲಿವೆ)

ಆಗಸ್ಟ್ 29 : ತಿರುವೋಣಂ ( ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ಗಳಿಗೆ ರಜೆ ಇರಲಿದೆ.)

ಆಗಸ್ಟ್ 30 : ರಕ್ಷಾ ಬಂಧನ (ರಕ್ಷ ಬಂಧನದ ನಿಮಿತ್ತ ಜೈಪುರ ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳು ರಜೆ ಇರಲಿವೆ)

ಆಗಸ್ಟ್ 31 : ರಕ್ಷಾ ಬಂಧನ / ಶ್ರೀ ನಾರಾಯಣ ಗುರು ಜಯಂತಿ / ಪಾಂಗ್ – ಲಬ್ಸೋಲ್ ( ಗ್ಯಾಂಗ್ ಟಾಕ್, ಡೆಹ್ರಾಡೊನ್, ಕಾನ್ಪುರ್,ಕೊಚ್ಚಿ ಲಕ್ನೋ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕಗಳು ಮುಚ್ಚಲ್ಪಡುತ್ತದೆ)

Exit mobile version