Revenue Facts

ಈ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು ₹3,000 ಪಿಂಚಣಿ

ಬೆಂಗಳೂರು;ಈ ಶ್ರಮಯೋಗಿ ಮಾನ್‌ಧನ್‌ ಯೋಜನೆ ಕೇಂದ್ರ ಸರ್ಕಾರದ್ದಾಗಿದ್ದು, ಕಾರ್ಮಿಕರಿಗೆ ಹಲವಾರು ಸೌಲಭ್ಯಗಳು ಸಿಗುತ್ತವೆ.ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ನೀವು ಪ್ರತೀ ತಿಂಗಳು 3,000 ರೂ. ಪಿಂಚಣಿ ಪಡೆಯುವ ಒಂದು ಅತ್ಯತ್ತಮ ಯೋಜನೆ ಇದಾಗಿದ ಇದರಡಿಯಲ್ಲಿ ಫಲಾನುಭವಿ 50% ಮಾಸಿಕ ಹಣ ಪಾವತಿಸಬೇಕು. ಇನ್ನುಳಿದ 50% ಹಣ ಕೇಂದ್ರವೇ ಭರಿಸುತ್ತದೆ. ಬೀದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ಮೀನುಗಾರರು.ಹೀಗೆ ಮುಂತಾದ ಉದ್ಯಮಗಳಲ್ಲಿ ಕೆಲಸ ಮಾಡುವವರು (ವಯಸ್ಸಿನ ಮಿತಿ 18-40 ವರ್ಷ)ಈ ಯೋಜನೆಗೆ ಅರ್ಹರು. ಇವರು 60 ವರ್ಷ ವಯಸ್ಸು ತಲುಪಿದ ನಂತರ ₹3,000 ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.ಈ ರೀತಿ ಯಾವುದೇ ಸೌಲಭ್ಯಗಳಿಲ್ಲದೆ ದಿನ ಸಂಬಳದಲ್ಲಿ ಕೆಲಸ ಮಾಡುತ್ತಿರುವ ಅಸಂಘಟಿತ ಕಾರ್ಮಿಕರ ಮುಂದಿನ ಭದ್ರತೆಗಾಗಿ, ಅಂದರೆ ಅವರ ವಯೋವ್ರದ್ದ ಕಾಲದಲ್ಲಿ ಅವರಿಗೆ ನೆರವಾಗಲೆಂದು ಈ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ಇವರು ಈಗ ಪ್ರತೀ ತಿಂಗಳು ಪಿಂಚಣಿ ಪಡೆಯಬಹುದಾಗಿದೆ.ಪಿಂಚಣಿ ಬರುವ ಸಮಯದಲ್ಲಿ ಆ ವ್ಯಕ್ತಿ ಮೃತ ಪಟ್ಟರೆ ಆ ವ್ಯಕ್ತಿಯ ನಾಮಿನಿಗೆ 50% ಅಂದರೆ 1500 ರೂ. ಪ್ರತೀ ತಿಂಗಳು ಪಿಂಚಣಿ ಬರಲಿದೆ.ಈ ಯೋಜನೆಯಲ್ಲಿ ನಿಮ್ಮ ವಯಸ್ಸಿಗನುಗುಣವಾಗಿ ಪ್ರೀಮಿಯಂ ಇರಲಿದ್ದು, ನೀವು ಪಾವತಿಸಿದ ಹಣದಷ್ಟೇ ಕೇಂದ್ರ ಸರ್ಕಾರದಿಂದ ಕೂಡ ಬರುತ್ತದೆ.

ಈ ಯೋಜನೆಗೆ (PM-SYM) ಅರ್ಹತೆಗಳು :

ಈ ಯೋಜನೆಗೆ ನೀವು ಸೇರಲು 18 ರಿಂದ 40 ವರ್ಷದ ಒಳಗಿರಬೇಕು.
ಮಾಸಿಕ ಆದಾಯ 15,000 ಒಳಗಿರಬೇಕು.
ಆದಾಯ ತೆರಿಗೆ ಪಾವತಿಸುವರು ಅರ್ಹರಲ್ಲ
ಅಸಂಘಟಿತ ವಲಯದ ಕಾರ್ಮಿಕರಾಗಿರಬೇಕು, PF, ESI ಹೊಂದಿರಬಾರದು.
2. ಉಳಿತಾಯ ಬ್ಯಾಂಕ್ ಖಾತೆ / IFSC ಯೊಂದಿಗೆ ಜನ್ ಧನ್ ಖಾತೆ ಸಂಖ್ಯೆ

 

ಅರ್ಹ ವ್ಯಕ್ತಿಯು ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ / ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ನಿಮ್ಮ ವಿವರಗಳನ್ನು ನೀಡಿ ಯೋಜನೆಗೆ ನೊಂದಾಯಿಸಿ ಕೊಳ್ಳಬಹುದಾಗಿದ್ದು, ಮೊದಲ ಪ್ರೀಮಿಯಂ ಅಲ್ಲಿ ಪಾವತಿಸಬೇಕಾಗುತ್ತದೆ, ಮುಂದಿನ ತಿಂಗಳಿಂದ ನೇರವಾಗಿ ನಿಮ್ಮ ಖಾತೆಯಿಂದ ಕಡಿತಗೊಳ್ಳುತ್ತದೆ.ಯೋಜನೆಯ ಪೂರ್ಣ ವಿವರಗಳಿಗಾಗಿ:ಸಂಪರ್ಕ – 05612-231068

ನೋಂದಣಿ ಪ್ರಕ್ರಿಯೆ

.ಫಲಾನುಭವಿಯು ಅಗತ್ಯ ಮಾಹಿತಿಯೊಂದಿಗೆ ಕಾಮನ್ ಸರ್ವೀಸ್ ಸೆಂಟರ್‍ಗೆ (CSC) ತೆರಳುವುದು.

Exit mobile version