Unique Houses : ಬೆಂಗಳೂರು, ಜ. 06 : ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬರ ಜೀವನದ ಮಹದಾಸೆ ಎಂದರೆ ತಪ್ಪಾಗುವುದಿಲ್ಲ. ತನ್ನ ಜೀವಮಾನದಲ್ಲಿ ಹೇಗಾದರೂ ಮಾಡಿ ಒಂದಾದರೂ ಮನೆಯನ್ನು ನಿರ್ಮಾಣ ಮಾಡಬೇಕು ಎಂದು ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಆದರೆ, ಮನೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ನಮ್ಮ ಹಿರಿಯರು ಒಂದು ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದು ಹೇಳಿರುವುದೇ ಇವು ಕಷ್ಟದ ಕೆಲಸ ಎಂದು. ಇನ್ನು ಮನೆ ಕಟ್ಟುವವರೆಲ್ಲಾ ತಮ್ಮ ಮನೆ ಇತರರ ಮನೆಗಿಂತಲೂ ವಿಶಿಷ್ಟವಾಗಿರಬೇಕು ಎಂದು ಬಯಸುತ್ತಾರೆ. ನಾವಿಲ್ಲಿ ಈಗ ಜಗತ್ತಿನಲ್ಲಿ ಕೆಲವರು ಆಸೆ ಪಟ್ಟು ಕಟ್ಟಿರುವ ವಿಚಿತ್ರವಾದ ಮನೆಗಳನ್ನು ಹೇಳುತ್ತೇವೆ. ಈ ಮನೆಗಳನ್ನು ನೋಡಿ ನಿಮಗೂ ಇಂಥಹ ಮನೆಯನ್ನು ಕಟ್ಟಬೇಕೆಂದು ಅನಿಸಿದರೂ ಆಶ್ಚರ್ಯವೇನಿಲ್ಲ.
ಜಾರುಬಂಡೆ ಮನೆ:
ಇದರ ಹೆಸರು ಸ್ಲೈಡಿಂಗ್ ಹೌಸ್ ಎಂದು ಇದು ಇರುವುದು ಜಪಾನ್ ನ ಟೋಕಿಯೋದಲ್ಲಿ. ಇಲ್ಲಿನ ವ್ಯಕ್ತಿಯೊಬ್ಬರು ತಮ್ಮ ಮಕ್ಕಳು ನೆನಪಿನಲ್ಲಿಟ್ಟುಕೊಳ್ಳಬಹುದಾದಂತಹ ಹಾಗೂ ಆಟವಾಡಲು ಇಷ್ಟ ಪಡುವಂತಹ ಮನೆಯನ್ನು ಕಟ್ಟಬೇಕು ಎಂದು ಬಯಸಿದರಂತೆ. ಇದನ್ನೇ ಆರ್ಕಿಟೆಕ್ಚರ್ ಬಳಿ ಹೋಗಿ, ತಮಗೆ ಮೂರು ಅಂತಸ್ತಿನ ಜಾರುಬಂಡೆಯಂತಿರುವ ಮನೆ ಬೇಕು ಎಂದು ಕೇಳಿದರಂತೆ. ಇದಕ್ಕೆ ಸಾಕಷ್ಟು ಖರ್ಚಾದರೂ, ಮನೆಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಸ್ಲೈಡಿಂಗ್ ಬಳಸಬೇಕು. ಮೇಳೆ ಹತ್ತಲು ಮೆಟ್ಟಿಲುಗಳನ್ನು ನೀಡಲಾಗಿದೆ.
ಪಾರದರ್ಶಕ ಮನೆ :
ಇದು ಕೂಡ ಜಪಾನ್ ನಲ್ಲಿದ್ದು, ತಮ್ಮ ಮನೆಯೂ ಪಾರದರ್ಶಕವಾಗಿರಬೇಕು ಎಂದು ಗ್ಲಾಸ್ ನಿಂದ ನಿರ್ಮಾಣ ಮಾಡಲಾಗಿದೆ. ಈ ಮನೆಯಲ್ಲಿ ಸ್ನಾದ ಕೋಣೆಯೊಂದು ಬಿಟ್ಟು ಎಲ್ಲವೂ ಟ್ರಾನ್ಸಪರೆಂಟ್ ಆಗಿದೆ. ಯಾರು ಏನು ಮಾಡುತ್ತಿದ್ದಾರೆ ಎಂಬುದನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಈ ಮನೆಯನ್ನು 900 ಚದರ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಇಲ್ಲಿ ಬದುಕುವವರಿಗೆ ಧೈರ್ಯಬೇಕು ಎನ್ನಲಾಗಿದೆ.
ಉಲ್ಟಾ ಮನೆ:
ಇದಕ್ಕೆ ವಂಡರ್ ವರ್ಕ್ಸ್ ಎಂದು ಈ ಮನೆಗೆ ಹೆಸರಿಡಲಾಗಿದ್ದು. ಇದು ತಲಕೆಳಗಾಗಿದೆ. ಈ ಮನೆಯನ್ನು ನಿರ್ಮಾಣ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡಿತು. ಇದು ಫ್ಲೊರಿಡಾದ ಓರ್ಲ್ಯಾಂಡೋದಲ್ಲಿ ನಿರ್ಮಿಸಲಾಗಿದೆ. ಆಸೆಯಿಂದ ವ್ಯಕ್ತಿಯೊಬ್ಬ ಈ ಮನೆಯನ್ನು ಕಟ್ಟಿದರು. ಆದರೆ ಅವರಿಗೆ ಔಆಸ ಮಾಡಲು ಸಾಧ್ಯವಾಗಲಿಲ್ಲ. ಈ ಮನೆ ಈಗ ಮ್ಯುಸಿಯಂ ಪಾರ್ಕ್ ಆಗಿದೆ. ಈ ಮನೆಯನ್ನು ನೋಡಲು ಸಾಕಷ್ಟು ಜನ ಬರುತ್ತಾರೆ. ಅಲ್ಲದೇ, ಮಕ್ಕಳನ್ನೂ ಈ ಮನೆ ಹೆಚ್ಚು ಸೆಳೆಯುತ್ತಿದ್ದು, ಇದು 48 ಸಾವಿರ ಚದರಡಿ ಇದೆ.
ಸ್ಲಿಮ್ ಹೌಸ್:
ಇದು ಜಗತ್ತಿನ ಅತೀ ತೆಳ್ಳಗಿನ ಮನೆ. ಎಟ್ಗರ್ ಕೆರೆಟ್ ಎಂಬಾತ ಈ ಮನೆಯಲ್ಲಿ ವಾಸವಿದ್ದಾರೆ. ಪೊಲ್ಯಾಂಡ್ ನಲ್ಲಿ ಎರಡು ಅಪಾರ್ಟ್ ಮೆಂಟ್ ನಡುವೆ ಈ ಮನೆಯನ್ನು ನಿರ್ಮಾಣ ಮಾಡಲಾಗಿದೆ.
ವಿಮಾನದ ಮನೆ:
ಈ ಮನೆಯನ್ನು ಒಂದು ವಿಮಾನದ ಮೂಲಕ ನಿರ್ಮಿಸಲಾಗಿದೆ. ವಿಮಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಜಾನ್ ಇಲಿಯಾಸ್ ಎಂಬಾತ ತನ್ನ ಜೀವನವನ್ನು ಪೂರ್ತಿ ಕಳೆಯಬೇಖು ಎಂದು ಆಸೆ ಪಟ್ಟರು. ಹಾಗಾಗಿ 727 ಬೋಯಿಂಗ್ ವಿಮಾನವನ್ನು 2000 ಡಾಲರ್ ಅನ್ನು ಕೊಟ್ಟು ಖರೀದಿಸಿದರು. ಬಳಿಕ ಈ ವಿಮಾನದ ಒಳಗೆ ಮನೆಯನ್ನು ನಿರ್ಮಿಸಿದ್ದಾರೆ. ಎರಡು ಬೆಡ್ರೂಮ್ ನ ಈ ವಿಮಾನದ ಮನೆಯಲ್ಲಿ ಜಾನ್ ಇಲಿಯಾಸ್ ವಾಸವಿದ್ದಾರೆ.