Revenue Facts

ಜಗತ್ತಿನಲ್ಲಿರುವ ಚಿತ್ರ ವಿಚಿತ್ರಗಳ ಮನೆಗಳು ಹೇಗೆಲ್ಲಾ ಇವೆ ಗೊತ್ತಾ..?

ಜಗತ್ತಿನಲ್ಲಿರುವ ಚಿತ್ರ ವಿಚಿತ್ರಗಳ ಮನೆಗಳು ಹೇಗೆಲ್ಲಾ ಇವೆ ಗೊತ್ತಾ..?

worlds different houses

Worlds different houses : ಬೆಂಗಳೂರು, ಜ. 11 : ಈ ಪ್ರಪಂಚದಲ್ಲಿ ನಿತ್ಯ ಒಂದಲ್ಲ ಒಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಇನ್ನು ವಿಚಿತ್ರವಾದ ಮನುಷ್ಯರೂ ಇದ್ದಾರೆ. ಕೆಲವರು ತಾವು ಜಗತ್ತಿನಲ್ಲಿ ಇತರರಿಗಿಂತ ಡಿಫರೆಂಟ್‌ ಆಗಿರಬೇಕು ಎಂದು ಬಯಸುತ್ತಾರೆ. ಅವರು ಮಾಡುವ ಸಾಕಷ್ಟು ಕೆಲಸಗಳು ಕೂಡ ಡಿಫರೆಂಟ್‌ ಆಗಿ ಇರುತ್ತವೆ. ಅಂತಹವರು ತಮ್ಮ ಮನೆಗಳನ್ನು ಕೂಡ ವಿಚಿತ್ರವಾಗಿ ಕಟ್ಟಿಸಿರುತ್ತಾರೆ. ಈ ಮನೆಗಳನ್ನು ನೋಡಿದರೆ, ಇವು ಮನೆ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಈ ಮನೆಗಳನ್ನು ನೋಡಿದರೆ ನೀವು ಆಶ್ಚರ್ಯ ಪಡುವುದಂತೂ ಗ್ಯಾರೆಂಟಿ. ಪ್ರಪಂಚದಲ್ಲಿರುವ ಸಾಕಷ್ಟು ಡಿಫರೆಂಟ್‌ ಮನೆಗಳನ್ನು ನೋಡೋಣ ಬನ್ನಿ..

ಹೆಲಿಡೋಮ್‌ ಮನೆ: ಫ್ರಾನ್ಸ್‌ ನಲ್ಲಿ ಹೆಲಿಡೋಮ್‌ ಎಂಬ ಮನೆ ಇದೆ. ಇದನ್ನು ಎರಿಕ್ ವಾಸರ್ ವಿನ್ಯಾಸಗೊಳಿಸಿದ್ದಾರೆ. ಇದು ಜೈವಿಕ-ಹವಾಮಾನ ಸೌರ ಮನೆ 3D ಸನ್ಡಿಯಲ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚಳಿಗಾಲದಲ್ಲಿ ಖರ್ಚಿಲ್ಲದೆ ಮನೆಯನ್ನು ಬಿಸಿಯಾಗಿಡುತ್ತದೆ. ಸೂರ್ಯನ ಕಿರಣಗಳಿಂದ ಸೌರ ಶಕ್ತಿಯನ್ನು ಸೆರೆಹಿಡಿಯುತ್ತದೆ. ಇನ್ನು ಬೇಸಿಗೆ ಗಾಲದಲ್ಲಿ ಮನೆಯನ್ನು ತಂಪಾಗಿಸುತ್ತದೆ. ಮರ, ಗಾಜು ಮತ್ತು ಕಾಂಕ್ರೀಟ್‌ ಬಳಸಿ ಈ ಮನೆಯನ್ನು ನಿರ್ಮಿಸಲಾಗಿದೆ. ಇದು ಪರಿಸರ ಸ್ನೇಹಿ ಮನೆಯಾಗಿದ್ದು, ತ್ರಿಕೋನಾಕಾರದಲ್ಲಿದೆ. ನೋಡಲು ಇದು ಬಾಹ್ಯಾಕಾಶ ನೌಕೆಯಂತೆ ಕಾಣುತ್ತದೆ.

ಸ್ಟೀಲ್‌ ಪಿಗ್‌ ಹೌಸ್:‌ ನ್ಯೂಯಾರ್ಕ್‌ ನ ಟೆಕ್ಸಾಸ್‌ ನಲ್ಲಿ ಮನೆ ಇದ್ದು, ಇದನ್ನು ನಿರ್ಮಾಣ ಮಾಡಲು 110 ಟನ್‌ ಸ್ಟೀಲ್‌ ಅನ್ನು ಬಳಸಲಾಗಿದೆ. ಅಲ್ಲದೇ, ಈ ಮನೆಯನ್ನು ಕಟ್ಟಲು ಬರೋಬ್ಬರಿ 23 ವರ್ಷ ತೆಗೆದುಕೊಳ್ಳಲಾಗಿದೆ. ರಾಬರ್ಟ್‌ ಬ್ರೂನೋ ಈ ಮನೆಯನ್ನು ನಿರ್ಮಿಸಿದ್ದು, ನಿರ್ಮಾಣದ ವೇಳೆ ಸಾಕಷ್ಟು ಬದಲಾವಣೆಯನ್ನು ಮಾಡಿಕೊಂಡು ಕೊನೆಗೆ ಪಿಗ್‌ ಹೌಸ್‌ ತಯಾರಾಗಿದೆ. ರಾಬರ್ಟ್‌ ಬ್ರೂನೋ ಅವರ ವಿನ್ಯಾಸವೂ ಬದಲಾಯಿಸಿದ ಕಾರಣ ಈ ಮನೆ ಪಿಗ್‌ ನಂತೆ ಕಾಣುತ್ತಿದೆ.

ಸ್ಪೇಸ್‌ ಶಿಪ್‌ ಮನೆ: ಇದನ್ನು 1972 ರಲ್ಲಿ ಕರ್ಟಿಸ್ ಕಿಂಗ್ ನಿರ್ಮಿಸಿದ್ದಾರೆ, ಸ್ಪೇಸ್‌ಶಿಪ್ ಹೌಸ್ ದೀರ್ಘ ಮತ್ತು ಆಸಕ್ತಿದಾಯಕ ಇತಿಹಾಸವನ್ನು ಹೊಂದಿದೆ. ಇದು 2008 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್‌ ಇದರ ಬಗ್ಗೆ ಲೇಖನ ಬಂದಿತ್ತು. ಇದನ್ನು ನಿರ್ಮಿಸಲು $250,000 ವೆಚ್ಚವಾಗಿದೆ. ಈ ಮನೆಯಲ್ಲಿ ಬಹಳಷ್ಟು ಫ್ಯೂಚರಿಸ್ಟಿಕ್ ದುಂಡಾದ ಪೀಠೋಪಕರಣಗಳು ಮತ್ತು ಅಸಾಮಾನ್ಯ ವೈಶಿಷ್ಟ್ಯಗಳನ್ನು ಹೊಂದಿದೆ. 3 ಬೆಡ್‌ರೂಮ್, 2 ಬಾತ್‌ರೂಮ್ ಹೊಂದಿದ್ದು, ಒಟ್ಟು 2,000 ಚದರ ಅಡಿ ಜಾಗವನ್ನು ಆಕ್ರಮಿಸಿಕೊಂಡಿದೆ.

ಕೆಟಲ್‌ ಮನೆ: ನೀರಿನ ಕೆಟಲ್‌ ನಂತೆ ಇರುವ ಈ ಮನೆಯನ್ನು 1950 ರ ದಶಕದಲ್ಲಿ ನಿರ್ಮಿಸಲಾಗಿದೆ. ಈ ಮನೆಯನ್ನು ವ್ಯಾಪಾರದ ಅಂಗಡಿ ಮಾಡುವ ಉದ್ದೇಶದಿಂದ ನಿರ್ಮಿಸಲಾಯ್ತು. ಆದರೆ, ಇಲ್ಲಿ ಎಂದೂ ಅಂಗಡಿಯನ್ನು ತೆರೆಯಲಿಲ್ಲ. ಇದನ್ನು ಉಕ್ಕಿನಿಂದ ನಿರ್ಮಿಸಲಾಗಿದೆ. ಇದು ಸಮುದ್ರದ ದಡದಲ್ಲಿದ್ದು, ಸಾಕಷ್ಟು ಚಂಡಮಾರುತಗಳು ಬಂದಾಗಲೂ ಈ ಮನೆಗೆ ಏನೂ ಆಗಿಲ್ಲ. ಸದ್ಯ ಈ ಮನೆಯಲ್ಲಿ ಯಾರೂ ವಾಸವಿಲ್ಲ. ಈ ಮನೆ ಬಳಿಗೆ ನೀರು ಬಂದು ನಿಂತಾಗ ನೋಡಲು ಟೀ ಕಪ್‌ ನಂತೆ ಕಾಣುತ್ತದೆ. ಹಾಗಾಗಿ ಇದಕ್ಕೆ ಕೆಟಲ್‌ ಹೌಸ್‌ ಎಂದು ಹೇಸರಿಸಲಾಗಿದೆ.

ಶಂಕ ಮನೆ: ಈ ಮನೆಯನ್ನು ನೋಡಲು ಶಂಕದಂತೆ ಕಾಣುತ್ತದೆ. ಇದು ಮೆಕ್ಸಿಕೋ ಸಿಟಿಯಲ್ಲಿದೆ. ಈ ಮನೆಯಲ್ಲಿ ಗಂಡ, ಹೆಂಡತಿ ಹಾಗೂ ಇಬ್ಬರು ಮಕ್ಕಳು ವಾಸವಿರಬಹುದು. ಇಲ್ಲಿ ಎರಡು ರೂಮ್‌, ಲೀವಿಂಗ್‌ ಏರಿಯಾ ಮತ್ತು ಎರಡು ಬಾತ್ರೂಮ್‌, ಅಡುಗೆ ಮನೆ ಇದೆ. ಇದು ಹೊರಗಿನಿಂದ ನೋಡಲು ಎಷ್ಟು ಅಂದವಾಗಿದೆಯೋ, ಹೊರಗಿನಿಂದಲೂ ಅಷ್ಟೇ ಅದ್ಭುತ ಅನುಭವವಾಗುತ್ತದೆ.

Exit mobile version