Revenue Facts

ಮನೆಯಲ್ಲಿ ಕಿಟಕಿಗಳು ಎಷ್ಟಿರಬೇಕು ಹಾಗೂ ಯಾವ ದಿಕ್ಕಿನಲ್ಲಿರಬೇಕು..?

ಮನೆಯಲ್ಲಿ ಕಿಟಕಿಗಳು ಎಷ್ಟಿರಬೇಕು ಹಾಗೂ ಯಾವ ದಿಕ್ಕಿನಲ್ಲಿರಬೇಕು..?

ಬೆಂಗಳೂರು, ಮೇ. 05 : ಹೊಸ ಮನೆಯನ್ನು ಕಟ್ಟುವಾಗ ಕಿಟಕಿಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು. ಒಟ್ಟು ಎಷ್ಟು ಕಿಟಕಿಗಳು ಮನೆಯಲ್ಲಿದ್ದರೆ ಒಳ್ಳೆಯದು ಎಂದು ತಿಳಿಯೋಣ ಬನ್ನಿ.. ಮನೆಗೆ ಕಿಟಕಿ ಮತ್ತು ಬಾಗಿಲು ಎಂದು ಬಂದಾಗ ಯಾವಾಗಲೂ ಸಮ ಸಂಖ್ಯೆಯಲ್ಲಿ ಇರಬೇಕು. 6,8,12 ಹೀಗೆ ಸಮ ಸಂಖ್ಯೆಯಲ್ಲಿ ಕಿಟಕಿ ಮತ್ತು ಬಾಗಿಲುಗಳನ್ನು ಅಳವಡಿಸಬೇಕು. ನೀವೇನಾದರೂ ಬಾಡಿಗೆ ಮನೆಯನ್ನು ನಿರ್ಮಿಸುತ್ತಿದ್ದರೆ ಇದಕ್ಕೂ ಕೂಡ ಇದೇ ನಿಯಮ ಅನ್ವಯವಾಗುತ್ತದೆ.

ಕಿಟಕಿಯೂ ಸಮ ಸಂಖ್ಯೆಯಲ್ಲಿರಬೇಕು. ಬಾಗಿಲುಗಳು ಕೂಡ ಸಮ ಸಂಖ್ಯೆಯಲ್ಲಿ ಇರುವ ವಂತೆ ನೋಡಿಕೊಳ್ಳ ಬೇಕು. ಕಿಟಕಿ, ಪಿಲ್ಲರ್ ಹಅಗೂ ಬಾಗಿಲುಗಳನ್ನು ಈವನ್ ನಂಬರ್ ಗಳಲ್ಲಿ ಹಾಕಲಾಗುತ್ತದೆ. ಎರಡು, ನಾಲ್ಕು, ಆರು, ಎಂಟು ಪಿಲ್ಲರ್ ಗಳನ್ನು ಹಾಕಬಹುದು. ಇನ್ನು ಈವನ್ ನಂಬರ್ ಗಳಲ್ಲೂ ಶೂನ್ಯ ಇರುವ ಸಂಖ್ಯೆಯನ್ನು ಇಡಬಾರದು. ಅದರಲ್ಲೂ ಕೆಲವರು 10, 20 ಅನ್ನು ಅಶುಭ ಎಂದು ಹೇಳುತ್ತಾರೆ. ಆದರೆ, ಸಾಮಾನ್ಯವಾಗಿ ಇದರಲ್ಲಿ ಸೊನ್ನೆ ಬರುತ್ತದೆ ಎಂಬ ಕಾರಣಕ್ಕಾಗಿ ಹಾಗೆ ಹೇಳಲಾಗಿದೆ. ಆದರೆ, ವಾಸ್ತು ಶಾಸ್ತ್ರದಲ್ಲಿ ಹಾಗೆಲ್ಲಾ ಏನೂ ಹೇಳಿಲ್ಲ.

ಆದರೆ ಯಾವುದೇ ಮನೆಗೂ ಬೆಸ ಸಂಖ್ಯೆಯಷ್ಟು ಬಾಗಿಲು, ಕಿಟಕಿ ಹಾಗೂ ಪಿಲ್ಲರ್ ಗಳನ್ನು ಇಡಬಾರದು. ಯಾಕೆಂದರೆ, ಇದರಿಂದ ಮನೆಯಲ್ಲಿ ಏನಾದರೂ ಸಮಸ್ಯೆಗಳು ಇರುತ್ತವೆ. ಆ ಮನೆಯಲ್ಲಿ ಕೆಲ ಘಟನೆಗಳು ನಡೆಯುತ್ತಿರುತ್ತವೆ. ಯಾವಾಗಲೂ ಅಶುಭ ವಾರ್ತೆಗಳೇ ಕೇಳುತ್ತವೆ. ನೆಗೆಟಿವ್ ಕಾರಣಗಳಿಗೆ ಆ ಮನೆ ಹೆಚ್ಚಾಗಿ ಸುದ್ದಿಯಾಗುತ್ತಿರುತ್ತದೆ. ಅದರಲ್ಲೂ ಹೆಚ್ಚಾಗಿ ಬಾಗಿಲುಗಳು ಬೆಸ ಸಂಖ್ಯೆಯಲ್ಲಿ ಇರಬಾರದು. ಇನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ನೋಡೋಣ.

ಪದವಾಸ್ತುಗೆ ಗ್ರಹಗಳಿಗಿಂತ ಪ್ರಾಮುಖ್ಯತೆಯನ್ನ ಕೊಡಲಾಗಿದೆ. ಗ್ರಂಥಗಳಿಗೆ ಪದವಾಸ್ತುವಿಗೆ ಸಮ್ಮತವನ್ನು ನೀಡಲಾಗಿದೆ. ವಾಸ್ತು ಮಂಡಲದಲ್ಲಿ ಕೊನೆಯಲ್ಲಿ 32 ಮನೆಗಳು ಇರುತ್ತವೆ. ಇದರಲ್ಲಿ ಪೂರ್ವದಲ್ಲಿ ಬಲಗಡೆಯಿಂದ ಮೂರು ಅಥವಾ ನಾಲ್ಕನೇ ಭಾಗ. ದಕ್ಷಿಣದಲ್ಲಿ ಮೂರು ಅಥವಾ ನಾಲ್ಕನೇ ಭಾಗ, ಪಶ್ಚಿಮದಲ್ಲಿ ನಾಲ್ಕು ಮತ್ತು ಐದನೇ ಭಾಗ, ಉತ್ತರದಲ್ಲಿ ಮೂರು, ನಾಲ್ಕು ಮತ್ತು ಐದು ಭಾಗವನ್ನು ಬಳಸಬಹುದು. ಇವುಗಳಲ್ಲಿ ಶುಭ ಸಂಬಂಧಗಳಿರುವ ಕಡೆ ಮುಖ್ಯದ್ವಾರವನ್ನು ಇಡಬೇಕು ಎಂದು ಹೇಳಲಾಗುತ್ತೆ.

Exit mobile version