Revenue Facts

ರಾಣಿ ಎರಡನೇ ಎಲಿಜಬೆತ್ ನಿಧನ ಬ್ರಿಟನ್ ವಸತಿ ಮಾರುಕಟ್ಟೆಗೆ ಹೊಡೆತ ನೀಡಲಿದೆಯೇ?

ಬ್ರಿಟನ್‌ನನ್ನು ಸುಮಾರು 70 ವರ್ಷಗಳ ಕಾಲ ಆಳ್ವಿಕೆ ಮಾಡಿ ಸೆಪ್ಟೆಂಬರ್ ಆರಂಭದಲ್ಲಿ ರಾಣಿ ಎರಡನೇ ಎಲಿಜಬೆತ್ ನಿಧನರಾಗಿದ್ದಾರೆ. ಈ ಬೆನ್ನಲ್ಲೆ ರಾಷ್ಟ್ರದಲ್ಲಿ ಹೊಸ ಸರ್ಕಾರ ಕೂಡ ಕಾರ್ಯನಿರ್ವಹಿಸಲಿದೆ. ಕೆಲ ದಿನಗಳ ಅನಿಶ್ಚಿತತೆ ಕಾಡಲಿದೆ. ಸರ್ಕಾರ ಮತ್ತು ರಾಜಪ್ರಭುತ್ವ ಎರಡರಲ್ಲೂ ಬದಲಾವಣೆಯಾಗಲಿದೆ. ಹೀಗಾಗಿ ಈ ಎಲ್ಲಾ ಘಟನೆಗಳು ಬ್ರಿಟನ್ ವಸತಿ ಮಾರುಕಟ್ಟೆ ಮೇಲೆ ಪ್ರಭಾವ ಬೀರಲಿದೆಯೇ ಎಂಬುದನ್ನು ಈ ಬರಹದಲ್ಲಿ ತಿಳಿಯೋಣ.

“ಈಗಲೇ ರಾಣಿಯ ಮರಣ ಅಥವಾ ಹೊಸ ಪ್ರಧಾನ ಮಂತ್ರಿಯಾಗಿ ಲಿಜ್ ಟ್ರಸ್ ಅವರ ನೇಮಕಾತಿಯು U.K ವಸತಿ ಮಾರುಕಟ್ಟೆಯಲ್ಲಿ ಉಂಟುಮಾಡಬಹುದಾದ ದೀರ್ಘಾವಧಿಯ ಪರಿಣಾಮವನ್ನು ಊಹಿಸಲು ಸಾಧ್ಯವಿಲ್ಲ. ಆದರೆ, ಎರಡೂ ಘಟನೆಗಳು ಬ್ರಿಟನ್‌ನ ಆರ್ಥಿಕ ಸ್ಥಿತಿಗೆ ಅನಿಶ್ಚಿತತೆಯ ಮಟ್ಟವನ್ನು ಸೇರಿಸಿವೆ” ಎಂದು ಲಂಡನ್ ಮೂಲದ ಕ್ಲಿಯರ್‌ವ್ಯೂ ಡೆವಲಪ್‌ಮೆಂಟ್ಸ್‌ನ ನಿರ್ದೇಶಕ ಜೇಸನ್ ಟೀಮಾ ಹೇಳಿದ್ದಾರೆ.

ಎಲಿಜಬೆತ್ ರಾಣಿಯ ಮರಣ ಮತ್ತು ಆಕೆಯ ಮಗ ಕಿಂಗ್ ಚಾರ್ಲ್ಸ್ III ಕಿರೀಟಧಾರಣೆ ನಿಸ್ಸಂಶಯವಾಗಿ ಒಂದು ಪ್ರಮುಖ ಘಟನೆಯಾಗಿದ್ದರೂ, ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳುತ್ತಾರೆ.

ಬ್ರಿಟನ್ ಸರ್ಕಾರದಿಂದ ಸೆಪ್ಟೆಂಬರ್ ಮಧ್ಯದಲ್ಲಿ ಬಿಡುಗಡೆಯಾದ ತೀರಾ ಇತ್ತೀಚಿನ ಮಾಹಿತಿಯ ಪ್ರಕಾರ, ಬ್ರಿಟನ್‌ನಾದ್ಯಂತ ಪ್ರಾಪರ್ಟಿ ಬೆಲೆಗಳು ಜುಲೈನಿಂದ ಜುಲೈವರೆಗಿನ ವರ್ಷದಲ್ಲಿ 15.5% ರಷ್ಟು ಏರಿಕೆಯಾಗಿದೆ.

ಆದರೆ ಆ ಸಂಖ್ಯೆಗಳು ಇತ್ತೀಚಿನ ಆರ್ಥಿಕ ಸವಾಲುಗಳಾದ ಹೆಚ್ಚುತ್ತಿರುವ ಬಡ್ಡಿದರಗಳು ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳನ್ನು ಮನೆ ಖರೀದಿದಾರರು ಎದುರಿಸುತ್ತಿದ್ದಾರೆ. ಇದನ್ನು ಈ ಮಾಹಿತಿ ತಿಳಿಸುವುದಿಲ್ಲ.

ಇನ್ನು, ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಸರ್ವೇಯರ್ಸ್‌ನ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಮೂಲಕ ಮುಂಬರುವ ತಿಂಗಳುಗಳಲ್ಲಿ ವಸತಿ ಮಾರಾಟವು ಕೊಂಚ ಮಟ್ಟಿಗೆ ಅನಿಶ್ಚಿತತೆ ಎದುರಿಸುತ್ತದೆ ಎಂದು ಆಸ್ತಿ ಮಾರುಕಟ್ಟೆ ತಜ್ಞರು ಊಹಿಸುತ್ತಾರೆ ಎಂದು ತಿಳಿಸಿದೆ.

ಎಸ್ಟೇಟ್ ಏಜೆನ್ಸಿ ಬೆನ್ಹ್ಯಾಮ್ ಮತ್ತು ರೀವ್ಸ್ ನಿರ್ದೇಶಕ ಮಾರ್ಕ್ ವಾನ್ ಗ್ರುನ್‌ಹೆರ್ ಹೇಳುವಂತೆ. “ರಾಜಪ್ರಭುತ್ವದೊಳಗೆ ಕಂಡುಬರುವ ಬದಲಾವಣೆಗಳು U.K. ಆಸ್ತಿ ಮಾರುಕಟ್ಟೆಯ ಮೇಲೆ ಕಡಿಮೆ ಪರಿಣಾಮ ಬೀರುವ ಸಾಧ್ಯತೆಯಿದೆ, ಏಕೆಂದರೆ ಇದು ವಸತಿ ನೀತಿಗೆ ಬಂದಾಗ ಬ್ರಿಟನ್ ಸರ್ಕಾರವು ಹಿಡಿತ ಪಡೆದಿದೆ” ಎಂದಿದ್ದಾರೆ.

ಕಿಂಗ್ ಚಾಲ್ಸ್‌ ಪದಗ್ರಹಣವೂ ಬ್ರಿಟನ್ ಜನರ ಜೀವನ ವೆಚ್ಚದ ಬಿಕ್ಕಟ್ಟು ಅಥವಾ ವಸತಿ ಪೂರೈಕೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಆ ಕೆಲಸಗಳು ಪ್ರಧಾನ ಮಂತ್ರಿಯ ಕೈಯಲ್ಲಿ ದೃಢವಾಗಿ ಇವೆ ಎಂದು ಪರಿಗಣಿಸಲಾಗಿದೆ.

“ಕಡಿಮೆ ಹಣದುಬ್ಬರ ಮತ್ತು ಕಡಿಮೆ ಬಡ್ಡಿದರದ ಪರಿಸರ, ಅವರು ಭರವಸೆ ನೀಡುತ್ತಿರುವ ಕಡಿಮೆ ತೆರಿಗೆಗಳೊಂದಿಗೆ, ಆಶಾದಾಯಕವಾಗಿ ದೇಶದ ಆರ್ಥಿಕತೆಯನ್ನು ಕಿಕ್‌ಸ್ಟಾರ್ಟ್ ಮಾಡುತ್ತದೆ. ಭವಿಷ್ಯದಲ್ಲಿ ಆರ್ಥಿಕ ಹಿಂಜರಿತದ ಆತಂಕವನ್ನು ಕಡಿಮೆ ಮಾಡುತ್ತದೆ” ಎಂದು ತಜ್ಞರು ಹೇಳುತ್ತಾರೆ.

Exit mobile version