Revenue Facts

ಬಸವನ ಗುಡಿ ಕಡ್ಲೇ ಕಾಯಿ ಪರಿಷೆ ಯಾಕೆ ಕಾರ್ತಿಕ ಮಾಸದಲ್ಲೇ ನಡೆಯುತ್ತೆ.?

ಬಸವನ ಗುಡಿ ಕಡ್ಲೇ ಕಾಯಿ ಪರಿಷೆ ಯಾಕೆ ಕಾರ್ತಿಕ ಮಾಸದಲ್ಲೇ ನಡೆಯುತ್ತೆ.?

ಸಿಲಿಕಾನ್ ಸಿಟಿ ಬಸವನಗುಡಿ ಪ್ರದೇಶದಲ್ಲಿ ನಡೆಯುವ ವಾರ್ಷಿಕ ನೆಲಗಡಲೆ ಜಾತ್ರೆಯಾಗಿದೆ. ಬಸವನಗುಡಿ ಕಡಲೆ ಕಾಯಿಪರಿಷೆ ಯಾಕೆ ಇಷ್ಟು ಪ್ರಸಿದ್ದಿ ಪಡೆದಿದೆ? ಬಸವನಗುಡಿಯಲ್ಲೇ ಯಾಕೆ ನಡೆಸುತ್ತಾರೆ? ಇದರ ಇತಿಹಾಸವೇನು? ಈ ವರ್ಷ ಯಾವಾಗ ನಡೆಯುತ್ತದೆ?ಈ ಪರಿಷೆಯನ್ನು ಬುಲ್​ ಟೆಂಪಲ್​ ರಸ್ತೆಯ ಎರಡೂ ಬದಿಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿವರ್ಷ ಎರಡು ದಿನಗಳ ಕಾಲ ನಡೆಯುತ್ತದೆ.ಅದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಕಡ್ಲೇ ಕಾಯಿ‌ಪರಿಷೆ ಇತಿಹಾಸ

ಬೆಂಗಳೂರು ಬೆಳೆದು ಮಹಾ ನಗರವಾಗುವ ಮೊದಲು, ಬಸವನಗುಡಿಯ ಪಕ್ಕದ ಹಳ್ಳಿಗಳಲ್ಲಿ ಯಥೇಚ್ಛವಾಗಿ ಕಡ್ಲೇ ಕಾಯಿ ಬೆಳೆಯುತ್ತಿದ್ದರು. ಕಟಾವಿಗೆ ಸಿದ್ಧವಾದ ಕಡ್ಲೇ ಕಾಯಿ ಗದ್ದೆಗೆ ಹಸುವೊಂದು ನುಗ್ಗಿ ಸಾಕಷ್ಟು ಬೆಳೆ ಹಾನಿ ಮಾಡುತ್ತಿತ್ತು. ಹೀಗಾಗಿ ರೈತರು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸಿ ಬಸವ (ನಂದಿ)ಯನ್ನು ಪ್ರಾರ್ಥಿಸಲು ಆರಂಭಿಸಿದರೆನ್ನುವ ಐತಿಹ್ಯವಿದೆ.

ಕಾರ್ತಿಕ ಮಾಸದಲ್ಲೆ ಯಾಕೆ ಕಡ್ಲೇ ಕಾಯಿ ಪರಿಷೆ ನಡೆಯುತ್ತೆ.?

ಪ್ರತಿ ವರ್ಷದ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿ ಕಡಲೆ ಕಾಯಿ ಪರಿಷೆ ನಡೆಯುತ್ತದೆ. ಕಾರ್ತಿಕ ಮಾಸದ ಸೋಮವಾರವು ಭಗವಾನ್​ ಶಿವನ ನೆಚ್ಚಿನ ದಿನವಾಗಿದ್ದು, ನಂದಿಯು ಶಿವನ ವಾಹನವಾಗಿರುವುದರಿಂದ ನಂದಿಗೆ ಈ ದಿನಗಳು ಪ್ರಿಯವಾಗಿದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ಕಡೆಲೆಕಾಯಿ ಪರಿಷೆ ನಡೆಯುತ್ತದೆ.

ಈ ವರ್ಷ ಯಾವಾಗ ಕಡ್ಲೇ ಕಾಯಿ ಪರಿಷೆ ನಡೆಯುತ್ತೆ.?

ಇದು ಸಾಮಾನ್ಯವಾಗಿ ನವೆಂಬರ್ ಕೊನೆಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಬರುತ್ತದೆ. ಈ ವರ್ಷ ಅಂದರೆ 2023ರಲ್ಲಿ ಡಿಸೆಂಬರ್​ 11 ರಿಂದ ಎರಡು ದಿನಗಳ ಕಾಲ ಕಡಲೆಕಾಯಿ ಪರಿಷೆ ನಡೆಯುತ್ತದೆ. ಪರಿಷೆಗೆ ಬಿಬಿಎಂಪಿ ಸಕಲ ಸಿದ್ದತೆ ಮಾಡಿಕೊಂಡಿದೆ. ‘ಪರಿಷೆಗೆ ಬನ್ನಿ-ಕೈಚೀಲ’ ತನ್ನಿ ಎಂಬ ಆಹ್ವಾನದೊಂದಿಗೆ ಪರಿಸರ ಸ್ನೇಹಿ ಪರಿಷೆ ನಡೆಸಲು ಬಿಬಿಎಂಪಿ ಮುಂದಾಗಿದೆ. ಇನ್ನು ಕಡ್ಲೇ ಕಾಯಿ ಪರಿಷೆಯಲ್ಲಿ ಎಷ್ಟು ಅದ್ಭುತವಾಗಿರುತ್ತೆ ಅಂತ ಕಾದು ನೋಡಬೇಕಿದೆ.

ಚೈತನ್ಯ, ರೆವಿನ್ಯೂ ಫ್ಯಾಕ್ಟ್ ನ್ಯೂಸ್

Exit mobile version