Revenue Facts

ಸೋಫಾ ಆಯ್ಕೆ ಮಾಡುವ ಮುನ್ನ ಇರಲಿ ಎಚ್ಚರ..!!

ಸೋಫಾ ಆಯ್ಕೆ ಮಾಡುವ ಮುನ್ನ ಇರಲಿ ಎಚ್ಚರ..!!

ಬೆಂಗಳೂರು, ಜು. 03 : ಇನ್ನೇನು ಹಬ್ಬ ಶುರುವಾಗುವ ಸಮಯ ಹೆಚ್ಚಿಲ್ಲ. ಸಾಲು ಸಾಲು ಹಬ್ಬಗಳು ಕೆಲವೇ ದಿನಗಳಲ್ಲಿ ಶುರುವಾಗುತ್ತವೆ. ಆಗ ನಿಮಗೆ ಎಲ್ಲಾ ವಸ್ತುಗಳ ಖರೀದಿ ಮೇಲೂ ಆಫರ್‌ ಗಳು ಸಿಗುವುದು ಕೂಡ ಗ್ಯಾರೆಂಟಿ ಆಗಿರುತ್ತದೆ. ನಿಮ್ಮ ಮನೆಗೆ ನೀವು ಏನಾದರೂ ವಸ್ತುವನ್ನು ಖರೀದಿಸಬೇಕು ಎಂದುಕೊಂಡಿದ್ದರೆ, ಸ್ವಲ್ಪ ದಿನ ಕಾಯಿರಿ. ನಿಮಗೆ ಒಳ್ಳೆಯ ಆಫರ್‌ ಗೆ ನಿಮ್ಮಿಷ್ಟದ ಬ್ರ್ಯಾಂಡ್‌ ನ ವಸ್ತುಗಳನ್ನು ಖರೀದಿ ಮಾಡಬಹುದು. ಇನ್ನು ನಿಮ್ಮ ಮನೆಗೆ ಹೊಸ ಸೋಫಾ ಖರೀದಿಸಬೇಕೆಂದಿದ್ದರೆ, ಎಂತಹ ಸೋಫಾವನ್ನು ಆರಿಸಿಕೊಳ್ಳಬೇಕು ಎಂಬುದನ್ನು ನೋಡಿ.

ನೀವು ಸೋಫಾವನ್ನು ಖರೀದಿಸುವ ಮುನ್ನ ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನೋಡಿ.. ನಿಮ್ಮ ಮನೆಯ ಅಲಂಕಾರವನ್ನು ಹೆಚ್ಚಿಸಲು ಈ ಟಿಪ್ಸ್‌ ಗಳನ್ನು ಫಾಲೋ ಮಾಡಿದರೆ ಸಾಕು. ನೀವು ಉತ್ತಮವಾದ ಸೋಫಾ ಸೆಟ್ ಅನ್ನು ಆಯ್ಕೆ ಮಾಡಿದರೆ, ಬಾಳಿಕೆ ಬರುತ್ತದೆ. ನೀವು ನಿಮ್ಮ ಮನೆಯ ಲೀವಿಂಗ್‌ ರೂಮ್‌ ಗೆ ಸೋಫಾ ಸೆಟ್‌ ಖರೀದಿಸಬೇಕು ಎಂದಿದ್ದರೆ, ಲಿವಿಂಗ್‌ ಏರಿಯಾದ ಸ್ಪೇಸ್‌ ಬಗ್ಗೆ ಯೋಚಿಸಿ. ಸೂಫಾ ಮೇಲೆ ಹೆಚ್ಚು ಕುಳಿತುಕೊಳ್ಳುವ ಜಾಗವಿದ್ದರೆ ಒಳ್ಳೆಯದು.

ನಿಮ್ಮ ಮನೆಯ ಲೀವಿಂಗ್‌ ರೂಮ್‌ ಗೆ ಎಲ್‌ ಶೇಪ್‌, ಯೂ ಆಕಾರ ಅಥವಾ ಸ್ಕ್ವಯರ್‌ ಆಕಾರ ಯಾವುದು ಉತ್ತಮ ಎಂಬುದನ್ನು ಚೆಕ್‌ ಮಾಡಿ ಕೊಳ್ಳಿ. ಬಳಿಕ ಸೋಫಾ ಗಾತ್ರದ ಬಗ್ಗೆಯೂ ಗಮನಹರಿಸಿ ಈನ್ನು ಸೋಫಾ ಯಾವುದರಿಂದ ತಯಾರಿಸಲಾಗಿದೆ ಎಂಬುದನ್ನು ಗಮನಿಸಿ. ಬಟ್ಟೆ, ಚರ್ಮ ಮತ್ತು ಲೆಥರೆಟ್ನಿಂದ ಮಾಡಿದ ಸೋಫಾ ಸೆಟ್ಗಳನ್ನು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಸೋಫಾ ಮೇಲೆ ಕುಳಿತುಕೊಂಡು ಪರಿಶೀಲಿಸಿ. ಅದು ಎಷ್ಟು ಮೆತ್ತಗಿದೆ. ಸೋಫಾ ಎಷ್ಟು ಬಾಳಿಕೆ ಬರಬಹುದು ಎಂಬುದನ್ನು ತಿಳಿದುಕೊಳ್ಳಿ.

Exit mobile version