Revenue Facts

ಸ್ಟೇರ್ ಕೇಸ್ ಅನ್ನು ನಿರ್ಮಾಣ ಮಾಡಲು ವಾಸ್ತು ಟಿಪ್ಸ್

ಸ್ಟೇರ್ ಕೇಸ್ ಅನ್ನು ನಿರ್ಮಾಣ ಮಾಡಲು ವಾಸ್ತು ಟಿಪ್ಸ್

ಬೆಂಗಳೂರು, ಫೆ. 27 : ಮನೆ ನಿರ್ಮಾಣ ಮಾಡುವಾಗ ಈಗಂತೂ ಹೆಚ್ಚಿನ ಜನರು ಡ್ಯುಪ್ಲೆಕ್ಸ್ ಮನೆಗಳನ್ನು ಬಯಸುತ್ತಾರೆ. ಡ್ಯುಪ್ಲೆಕ್ಸ್ ಮನೆಗಳನ್ನು ನಿರ್ಮಿಸುವಾಗ ಮನೆಯೋಳಗೆ ಸ್ಟೇರ್ ಕೇಸ್ ಗಳನ್ನು ಅಳವಡಿಸಲಾಗುತ್ತೆ. ಸ್ಟೇರ್ ಕೇಸ್ ಗಳಲ್ಲೂ ಸಾಕಷ್ಟು ವಿಧಗಳು ಇದ್ದು, ವಾಸ್ತು ಪ್ರಕಾರ ಯಾವುದು ಮುಖ್ಯ ಎಂದು ತಿಳಿಯೋಣ ಬನ್ನಿ..

ಸ್ಟೇರ್ ಕೇಸ್ ಅನ್ನು ವಾಸ್ತು ಶಾಸ್ತ್ರದಲ್ಲಿ ಹೆಚ್ಚಾಗಿ ರೆಕ್ಟ್ಯಾಗ್ಯುಲರ್ ಹಾಗೂ ಸ್ಕ್ವಯರ್ ಶೇಪ್ ನಲ್ಲಿ ನಿರ್ಮಾಣ ಮಾಡುವುದು ಸೂಕ್ತ. ರೌಂಡ್ ಅಥವಾ ಸ್ಪೈರಲ್ ಶೇಪ್ ನಲ್ಲಿ ಸ್ಟೇರ್ ಕೇಸ್ ಅನ್ನು ಬೇಡ ಎಂದು ಹೇಳಲಾಗುತ್ತದೆ. ಸ್ಪೈರಲ್ ಶೇಪ್ ಸ್ಟೇರ್ ಕೇಸ್ ನಲ್ಲಿ ಅಗ್ನಿ ಎನರ್ಜಿಯನ್ನು ಉಂಟು ಮಾಡುತ್ತದೆ. ಇವೆರಡು ಕೂಡ ಮೃತ್ಯುವನ್ನು ಆಹ್ವಾನಿಸುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಮಾರ್ಡನ್ ವಾಸ್ತು ಪ್ರಕಾರ, ಆಗ್ನೇಯ ಅಥವಾ ವಾಯುವ್ಯದಲ್ಲಿ ಸರ್ಕಲ್ ಅಥವಾ ಸ್ಪೈರಲ್ ಸ್ಟೇರ್ ಕೇಸ್ ಅನ್ನು ನಿರ್ಮಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಆದರೆ ಇದು ಕೂಡ ಸಮಸ್ಯೆ ಆಗುತ್ತದೆ. ಆಗ್ನೇಯ ದಿಕ್ಕಾಗಲೀ, ವಾಯುವ್ಯವಾಗಲೀ ಯಾವ ದಿಕ್ಕಿನಲ್ಲೇ ಆದರೂ ಈ ಎರಡೂ ಮಾಡದರಿಯ ಸ್ಟೇರ್ ಕೇಸ್ ಗಳು ಮೃತ್ಯುವನ್ನು ಆಹ್ವಾನಿಸುತ್ತವೆ., ಹಾಗಾಗಿ ಇಂತಹ ಸ್ಟೇರ್ ಕೇಸ್ ಗಳನ್ನು ಹಾಕಲೇ ಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಆಗ್ನೇಯದಲ್ಲಿ ಸರ್ಕಲ್ ಹಾಗೂ ಸ್ಪೈರಲ್ ಸ್ಟೇರ್ ಕೇಸ್ ಗಳನ್ನು ನಿರ್ಮಿಸಿದರೆ, ಆ ಮನೆಯ ಯಜಮಾನಿಗೆ ತೊಂದರೆ ಆಗುತ್ತದೆ. ಯಜಮಾನಿಗೆ ಸಾವು ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಇನ್ನು ವಾಯುವ್ಯದಲ್ಲಿ ಯಜಮಾನನ ತಾಯಿ ಅಥವಾ ಅವರ ಮಗಳಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಎರಡೂ ದಿಕ್ಕುಗಳಲ್ಲಿ ಆದಷ್ಟು ಸ್ಟೇರ್ ಕೇಸ್ ಗಳನ್ನು ಅಳವಡಿಸದಂತೆ ನೋಡಿಕೊಳ್ಳುವುದು ಸಾಧ್ಯವಿರುತ್ತದೆ. ವಾಯುವ್ಯದಲ್ಲಿ ಸ್ಟೇರ್ ಕೇಸ್ ಅನ್ನು ಹಾಕಿದರೆ ಹಣಕಾಸು ತೊಂದರೆ ಎದುರಾಗುತ್ತದೆ. ಆ ಮನೆಯಲಿ ಕಳ್ಳತನಗೂ ಆಗುವ ಸಂಭವವಿರುತ್ತದೆ ಎಂದು ಹೇಳಲಾಗಿದೆ.

ಇನ್ನು ಸರ್ಕಲ್ ಹಾಗೂ ಸ್ಪೈರಲ್ ಸ್ಟೇರ್ ಕೇಸ್ ಗಳನ್ನು ನೈರುತ್ಯದಲ್ಲಿ ಹಾಕಿಕೊಂಡರೆ, ಮನೆಯ ಯಜಮಾನನಿಗೆ ಮೃತ್ಯು ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ವಾಸ್ತು ಶಾಸ್ತ್ರದಲ್ಲಿ ಸರ್ಕಲ್ ಹಾಗೂ ಸ್ಪೈರಲ್ ಸ್ಟೇರ್ ಕೇಸ್ ಗಳನ್ನು ಮನೆಗಳಲ್ಲಿ ಯಾವುದೇ ಕಾರಣಕ್ಕೂ ಅಳವಡಿಸಬಾರದು. ಇನ್ನು ಚೌಕಾಕಾರದ ಸ್ಟೇರ್ ಕೇಸ್ ಗಳು ಉತ್ತಮ ಎಂದು ಹೇಳಲಾಗಿದೆ.

Exit mobile version