Revenue Facts

Makar Sankranti 2023: ಶನಿ ಮತ್ತು ರಾಹು ದೋಷವನ್ನು ನಿವಾರಿಸಲು ಯಾವ ವಸ್ತುಗಳನ್ನು ದಾನ ಮಾಡಬೇಕು?

Makar Sankranti 2023: ಶನಿ ಮತ್ತು ರಾಹು ದೋಷವನ್ನು ನಿವಾರಿಸಲು ಯಾವ ವಸ್ತುಗಳನ್ನು ದಾನ ಮಾಡಬೇಕು?

ಮಕರ ಸಂಕ್ರಾಂತಿಯ ದಿನ ದಾನ ಮಾಡುವ ಪರಂಪರೆ ರೂಢಿಯಲ್ಲಿದೆ.ಈ ದಿನದಂದು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಶುಭ ಫಲ ಸಿಗುತ್ತದೆ.ಗ್ರಹಗಳ ದೋಷವನ್ನು ತೊಡೆದುಹಾಕಲು ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಕೆಲವು ವಸ್ತುಗಳನ್ನು ದಾನ ಮಾಡಲಾಗುತ್ತದೆ.ಸಂಕ್ರಾಂತಿ ಹಬ್ಬದ ವಿಶೇಷ ತಿನಿಸು ಎಂದರೆ ಎಳ್ಳು, ಬೆಲ್ಲ. ಭಾರತದಲ್ಲಿ ವಿವಿಧ ಹೆಸರಿನಲ್ಲಿ ಸಂಕ್ರಾಂತಿ ಹಬ್ಬವನ್ನುಸಿಹಿ ಹಂಚಿ ಸಂಭ್ರಮಿಸುತ್ತಾರೆ. ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಬಹಳ ಮಹತ್ವವಿದೆ. ಶಾಸ್ತ್ರದ ಪ್ರಕಾರ ಸಂಕ್ರಾಂತಿಯಿಂದ ಉತ್ತರಾಯಣ ಕಾಲ ಪ್ರಾರಂಭವಾಗುವುದು.

ಸಂಕ್ರಮಣದ ಶುಭ ಮುಹೂರ್ತವು ಜನವರಿ 15, 2023 ರಂದು ಬೆಳಿಗ್ಗೆ 6.48ರ ಸುಮಾರಿಗೆ ಪ್ರಾರಂಭವಾಗುತ್ತದೆ, ಅದೇ ದಿನ ಸಂಜೆ 5.41 ರವರೆಗೆ ಇರುತ್ತದೆ. ಈ ದಿನ ಶನಿ ದೋಷ ಇದ್ದವರಿಗೆ ಬಹಳ ಮುಖ್ಯವಾದ ದಿನವಾಗಲಿದೆ. ಅಂದರೆ ಮಕರ ಸಂಕ್ರಾಂತಿಯ ದಿನ ಶನಿ ದೋಷ ಇದ್ದವರು ಈ ವಸ್ತುಗಳನ್ನು ದಾನ ಮಾಡಿದರೆ ದೋಷ ನಿವಾರಣೆಯಾಗುತ್ತದೆ, ಶುಭ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ.

1.ಎಳ್ಳು
ಮಕರ ಸಂಕ್ರಾಂತಿಯ ದಿನದಂದು ಎಳ್ಳನ್ನು ದಾನ ಮಾಡಬೇಕು.ಎಳ್ಳು ಶನಿ ದೇವನ ದೋಷ ನಿವಾರಣೆಗೆ ಬಳಸುವ ಪ್ರಮುಖ ಪದಾರ್ಥ.ಕಪ್ಪು ಎಳ್ಳು ದಾನ ಮಾಡುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ. ಶನಿಯ ಸಾಡೇಸಾತಿಯಿಂದ ಬಳಲುತ್ತಿರುವವರು ಕಪ್ಪು ಎಳ್ಳನ್ನು ದಾನ ಮಾಡಬೇಕು.ಎಳ್ಳಿನ ದಾನವು ಶನಿಯ ಕೋಪದಿಂದ ಭಾಗಶಃ ಪರಿಹಾರವನ್ನು ನೀಡುತ್ತದೆ.

2.ಬೆಲ್ಲ
ಜ್ಯೋತಿಷ್ಯ ಶಾಸ್ತ್ರದಲ್ಲಿ, ಬೆಲ್ಲವು ಗುರು ಗ್ರಹದೊಂದಿಗೆ ಸಹ ಸಂಬಂಧಿಸಿದೆ.ಬೆಲ್ಲವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ ವ್ಯಕ್ತಿಯು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ.

3. ಕಂಬಳಿ
ಕಂಬಳಿಯನ್ನು ದಾನ ಮಾಡುವುದರಿಂದ ರಾಹು ದೋಷ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಸಂಕ್ರಾಂತಿಯ ದಿನದಂದು ಕಂಬಳಿಗಳನ್ನು ದಾನ ಮಾಡುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ.ಸಂಕ್ರಾಂತಿಯ ದಿನದಂದು ಬಡವರು, ನಿರ್ಗತಿಕರಿಗೆ ಕಂಬಳಿ ದಾನ ಮಾಡಿ.

Exit mobile version