Revenue Facts

ಮರಣ ಶಾಸನ (ಉಯಿಲ್) ಎಂದರೇನು? ಅದನ್ನು ಯಾರು ಬರೆದಿಡಬಹುದು?

ಒಬ್ಬ ವ್ಯಕ್ತಿಯು ತನ್ನ ಸಂಪೂರ್ಣ ಹಕ್ಕುಳ್ಳ ಆಸ್ತಿಯನ್ನು ತನ್ನ ಮರಣಾನಂತರ ಯಾರಿಗೆ ಸಲ್ಲಬೇಕು ಎನ್ನುವುದನ್ನು ಬರೆದಿಡುವುದಕ್ಕೆ ಮರಣಶಾಸನ(ಉಯಿಲ್) ಎನ್ನುತ್ತಾರೆ.ಮರಣಶಾಸನದ ಪ್ರಕಾರ ಯಾರಿಗೆ ಸೇರಬೇಕೆಂದು ಬರೆಯಲಾಗಿದೆಯೋ ಅವರಿಗೆ ಮರಣಶಾಸನ ಬರೆದ ವ್ಯಕ್ತಿಯ ಮರಣಾ ನಂತರ ಸೇರುತ್ತದೆ.

ಮರಣಶಾಸನವನ್ನು ಯಾರು ಬರೆದಿಡಬಹುದು?
ಅಲ್ಪವಯಿ(ಮೈನರ್)ಯನ್ನು ಹೊರತುಪಡಿಸಿ 18 ವರ್ಷಗಳ ವಯಸ್ಸನ್ನು ಮೀರಿದ ಮತ್ತು ಮಾನಿಸಿಕ ಸ್ವಾಸ್ಥ್ಯ ಹೊಂದಿರುವ ಯಾವುದೇ ವ್ಯಕ್ತಿ ಮರಣಶಾಸನವನ್ನು ಬರೆದಿಡಬಹುದು.ಆದರೆ ವ್ಯಕ್ತಿಯೊಬ್ಬನು ಬೇರೆಯೊಬ್ಬರ ಬೆದರಿಕರಗರ ಪ್ರಲೋಭನಗೆ,ಮರಳು ಮಾತಿಗೆ ಅಥವಾ ಮೋಸಕ್ಕೆ ಒಳಗಾಗಿದ್ದ ಸಮಯದಲ್ಲಿ ಮಾಡಿದ ಮರಣಶಾಸನವು ಊರ್ಜಿತವಾಗುವುದಿಲ್ಲ.ಆದ್ದರಿಂದ ಮರಣಶಾಸನ ಮಾಡುವ ವ್ಯಕ್ತಿಯು ಸಂಪೂರ್ಣವಾಗಿ ಸ್ವಇಚ್ಛೆಯಿಂದ ಮಾಡುವಂತಿರಬೇಕು.ಅಪ್ರಾಪ್ತ ವಯಸ್ಕರು ಅಥವಾ ಬುದ್ದಿ ಭ್ರಮಣೆಯಾದವರ ಪರವಾಗಿ ಅವರ ಪಾಲಕರು ಅಥವಾ ಸಂರಕ್ಷಣೆಧಾರರು ಮರಣಶಾಸನವನ್ನು ಮಾಡುವಂತಿಲ್ಲ.

ಮರಣಶಾಸನಕ್ಕೆ ಕನಿಷ್ಟ ಇಬ್ಬರು ವ್ಯಕ್ತಿಗಳು “ಸಾಕ್ಷಿಗಳೆಂದು” ಸಹಿ ಮಾಡಬೇಕು. ಈ ಇಬ್ಬರು ಸಾಕ್ಷಿದಾರರ ಸಮ್ಮುಖದಲ್ಲಿ ಮರಣಶಾಸನ ಬರೆದುಕೊಡುವವರು ಸಹಿ ಮಾಡಿದ್ದಾರೆಂದು ಷರಾ ಬರೆಯಬೇಕು.
ಬಿಕ್ಕಲಂದಾರ(ಪತ್ರ ಬರಹಗಾರ) “ಸಾಕ್ಷಿ” ಆಗುವುದಿಲ್ಲ. ಈತನನ್ನು ಹೊರತುಪಡಿಸಿ ಇಬ್ಬರು ಸಾಕ್ಷಿಗಳು ಸಹಿ ಹಾಕಬೇಕು.

ಮರಣಶಾಸನದ ಮೂಲಕ ಪ್ರಯೋಜನ ಪಡೆಯುವ ವ್ಯಕ್ತಿಯು ಮರಣಶಾಸನಕ್ಕೆ ಸಾಕ್ಷಿ ಹಾಕಬಾರದು. ಯಾಕೆಂದರೆ ಮರಣಶಾಸನದ ಮೂಲಕ ಪಡೆಯುವ ಪ್ರಯೋಜನ ರದ್ದಾಗುತ್ತದೆ.
ಮರಣಶಾಸನವು ವಿವಾದರಹಿತವಾಗಿ ಅನುಷ್ಟಾನಕ್ಕೆ ಬರಬೇಕಾದಲ್ಲಿ ಆಸ್ತಿಗಳ ವಿವರಗಳನ್ನು ಯಾವುದೇ ಸಂದಿಗ್ದತೆ ಅಥವಾ ಅಸ್ಪಷ್ಟತೆಗೆ ಅವಕಾಶಕೊಡದಂತೆ ಸ್ಪಷ್ಟವಾಗಿ , ಸರಿಯಾಗಿ ಬರೆಯಬೇಕು ಹಾಗೂ ಆಸ್ತಿ ಪಡೆಯುವ ವ್ಯಕ್ತಿಗಳ ವಿವರಗಳನ್ನು ನಮೂದಿಸಬೇಕು.

ಮರಣಶಾಸನವನ್ನು ನೋಂದಾಯಿಸುವುದು ಕಡ್ಡಾಯವಾಗಿರುವುದಿಲ್ಲ,ಮರಣಶಾಸನ ಬರೆದಿಡುವವರು ಇಚ್ಛೆಪಟ್ಟಲ್ಲಿ ನೋಂದಾಯಿಸಬಹುದು.ಭಾರತ ದೇಶದ ಯಾವುದೇ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಾಯಿಸಬಹುದು. ನೋಂದಣಿ ಮಾಡಿಸಲಿಕ್ಕೆ ಕಾಲದ ಮಿತಿ ಇರುವುದಿಲ್ಲ.

Exit mobile version