Revenue Facts

ಅಯೋಧ್ಯೆ ರಾಮಮಂದಿರದ ವಿಶೇಷತೆ ಏನು?

ಅಯೋಧ್ಯೆ ರಾಮಮಂದಿರದ ವಿಶೇಷತೆ ಏನು?

ನವದೆಹಲಿ: ಹಿಂದೂಗಳ ಪರವಾಗಿ ಅಯೋಧ್ಯೆ ತೀರ್ಪು ಬಂದಾಗಿದ್ದು, ಇನ್ನಿರುವುದು ರಾಮಮಂದಿರ ನಿರ್ಮಾಣ. ಮಂದಿರ ನಿರ್ಮಾಣಕ್ಕೆ ಈಗಾಗಲೇ ನೀಲಿನಕ್ಷೆ, ಮಾದರಿ ಸಜ್ಜಾಗಿದೆ. ಜೊತೆಗೆ ಸ್ತಂಭ-ಸ್ತೂಪಗಳು, ಗೋಪುರಗಳನ್ನು ಈಗಾಗಲೇ ಸಿದ್ಧಗೊಂಡಿವೆ.ಮಂದಿರದ ಪ್ರಮುಖ ಆಕರ್ಷಣೆಯಾಗಿ 221 ಅಡಿ ಎತ್ತರದ ಬಿಲ್ಲು-ಬಾಣ ಹಿಡಿದಿರುವ ಶ್ರೀರಾಮನ ಪ್ರತಿಮೆಯನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊಂದಿದೆ. ಒಂದು ಮಹಡಿಯ ರಾಮ ಮಂದಿರ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧವಾಗಿದೆ. ಅದರಂತೆ ನೆಲ ಮಹಡಿಯಲ್ಲಿ 106 ಕಂಬಗಳ ನಿರ್ಮಾಣವಾಗಲಿದ್ದು, ಒಂದೊಂದು ಕಂಬವು 15.6 ಅಡಿ ಉದ್ದ ಇರಲಿವೆ. ಅದೇ ರೀತಿ ಮೊದಲ ಮಹಡಿಯಲ್ಲೂ 14.6 ಅಡಿ ಉದ್ದದ 106 ಕಂಬಗಳ ನಿರ್ಮಾಣವಾಗಲಿವೆ. ಪ್ರತಿಕಂಬದಲ್ಲಿ 16 ಮೂರ್ತಿಗಳ ಕೆತ್ತನೆ ಇರಲಿದೆ.ಅಯೋಧ್ಯೆಯಲ್ಲಿನ ರಾಮ ಮಂದಿರಕ್ಕೆ 1000 ವರ್ಷಗಳವರೆಗೆ ದುರಸ್ತಿ ಅಗತ್ಯವಿಲ್ಲ, ಅದು ಭೂಕಂಪಕ್ಕೂ ಅಲುಗಾಡುವುದಿಲ್ಲ ಎನ್ನಲಾಗುತ್ತಿದೆ. ಈ ದೇವಾಲಯವು 6.5 ತೀವ್ರತೆಯ ಭೂಕಂಪವನ್ನು ಸುಲಭವಾಗಿ ತಡೆದುಕೊಳ್ಳುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ. ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಜ.22, 2024ರಂದು ದೇಗುಲದ ಶಂಕುಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ

ಅಯೋಧ್ಯೆ ರಾಮಮಂದಿರದ ವಿಶೇಷತೆ

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಚಂಪತ್ ರೈ ಪ್ರಕಾರ,

* ದೇವಾಲಯದ ಅಡಿಪಾಯವು 50 ಅಡಿ ಆಳದಲ್ಲಿದೆ. ಕಲ್ಲು, ಸಿಮೆಂಟ್ ಮತ್ತು ಇತರ ವಸ್ತುಗಳನ್ನು ಬಳಸಿಕೊಂಡು ಅಡಿಪಾಯ ಹಾಕಲಾಗಿದೆ.

*ಹೀಗಾಗಿ ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪನವನ್ನು ಇದು ತಡೆಯಬಲ್ಲದು

* ಒಟ್ಟು 17000 ಗ್ರಾನೈಟ್ ಕಲ್ಲುಗಳನ್ನು ಬಳಸಲಾಗಿದ್ದು, ಪ್ರತಿಯೊಂದು ಕಲ್ಲಿನ ತೂಕ 2 ಟನ್

* 21 ಲಕ್ಷ ಘನ ಅಡಿಗಳಷ್ಟು ಗ್ರಾನೈಟ್, ಮರಳು, ಕಲ್ಲು ಮತ್ತು ಅಮೃತಶಿಲೆಯನ್ನು ಬಳಸಲಾಗಿದೆ

*ದೇವಾಲಯವು ಭೇಟಿ ನೀಡುವ ಭಕ್ತರಿಗೆ ತ್ರೇತಾಯುಗದ ಅನುಭವವನ್ನು ನೀಡುತ್ತದೆ.

Exit mobile version