Revenue Facts

ಸಂಘ ಎಂದರೇನು? ಪಾಲಿಸಬೇಕಾದ ಕಾನೂನಾತ್ಮಕ ಅಂಶಗಳು ಹಾಗೂ ನೋಂದಣಿ ಹೇಗೆ?

ಸಂಘ ಎಂದರೆ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಅಭಿವೃದ್ದಿಯ ಉದ್ದೇಶವನ್ನೊಳಗೊಂಡು ಒಂದುಗೂಡಿದ ಜನಸಮೂಹವನ್ನುಸಂಘ ಎಂದು ಕರೆಯುತ್ತಾರೆ.
ಇಂತಹ ಸಂಘವನ್ನು ನೋಂದಾಯಿಸುವುದರಿಂದ ಅದಕ್ಕೆ ಕಾನೂನಿನ ಮಾನ್ಯತೆ ಸಿಗುತ್ತದೆ.
ಸಂಘಗಳನ್ನು ನೋಂದಣಿ ಮಾಡುವ ಅಧಿಕಾರವು ಕರ್ನಾಟಕ ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ 1960 ರ ಅಡಿಯಲ್ಲಿ ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ವ್ಯಾಪ್ತಿಗೆ ಬರುತ್ತದೆ.
ಸಂಘವನ್ನು ಪ್ರಾರಂಭಿಸಲು ಕನಿಷ್ಟ ಏಳು ಜನರಿರಬೇಕು ಹಾಗು ಅವರಿಗೆ 18 ವರ್ಷ ವಯಸ್ಸು ಮೀರಿರಬೇಕು.
ಸಂಘವನ್ನು ನೋಂದಣಿ ಮಾಡಲು ಶುಲ್ಕ ಪಾವತಿಸಬೇಕಾಗುತ್ತದೆ.
ಧಾರ್ಮಿಕ ,ಶೈಕ್ಷಣಿಕ,ಸಾಹಿತ್ಯ,ಕಲೆ,ಕ್ರೀಡೆ,ವಾಣಿಜ್ಯ,ಕೈಗಾರಿಕೆ,ಚರಿತ್ರಾರ್ಹ ಸ್ಮಾರಕಗಳ ಸಂಗ್ರಹ, ತಾಂತ್ರಿಕ ಮತ್ತು ತಂತ್ರಜ್ಞಾನದ ಅನ್ವೇಷಣೆ ಇವುಗಳನ್ನು ಅಭಿವೃದ್ದಿಪಡಿಸಿ ಬೆಳೆಸಲು ಸಂಘಗಳನ್ನು ನೋಂದಾಯಿಸಿಕೊಡಲಾಗುತ್ತದೆ.

ಸದಸ್ಯರುಗಳನ್ನು ಸೇರಿಸಿಕೊಳ್ಳಲು ಅವಕಾಶವಿರುತ್ತದೆ.
ಪ್ರತಿ ವರ್ಷ ಸರ್ವ ಸದಸ್ಯರ ಸಭೆಯನ್ನು ಕರೆದು ಅನುಮೋದಿಸಿದ ಲೆಕ್ಕ ಪತ್ರಗಳನ್ನು ಪ್ರತಿ ವರ್ಷವೂ ಜಿಲ್ಲಾ ನೋಂದಣಾಧಿಕಾರಿ ಅವರಿಗೆ ಸಲ್ಲಿಸಬೇಕು.ಲಾಭವನ್ನು ಸದಸ್ಯರಿಗೆ ಹಂಚಕೂಡದು.ಇದನ್ನುಸಂಸ್ಥೆಯ ಅಭಿವೃದ್ದಿಗೆ ಮಾತ್ರ ವಿನಿಯೋಗಿಸತಕ್ಕದ್ದು.ಕಾರ್ಯಾಚರಣೆಯು ಕಾರ್ಯಕಾರಿ ಸಮಿತಿಯಿಂದ ನಿರ್ವಹಿಸಬೇಕಾಗುತ್ತದೆ.

ಕಾರ್ಯಕಾರಿ ಸಮಿತಿಯು ಸರ್ವ ಸದಸ್ಯರ ಸಭೆಯ ಅನುಮೋದನೆಗೊಳಪಟ್ಟು ಕಾರ್ಯ ನಿರ್ವಹಿಸಬೇಕಾಗುತ್ತದೆ.
ಸಂಘಗಳನ್ನು ರದ್ದುಪಡಿಸಲು ಸಂಘಗಳ ನೋಂದಣಿ ಕಾಯ್ದೆ ಕಲಂ 25 ರಂತೆ ವಿಚಾರಣೆ ಮಾಡಿ ಕ್ರಮ ಜರುಗಿಸಬೇಕು.

ಫ್ಲಾಟ್ ಮತ್ತು ಅಪಾರ್ಟ್ ಮೆಂಟ್ ಗಳು ನೋಂದಣಿಯಾದ ಮೇಲೆ ಅಲ್ಲಿನ ಗೃಹವಾಸಿಗಳು ಸರಾಗವಾಗಿ ಅಪಾರ್ಟ್ ಮೆಂಟಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಂಘಗಳನ್ನು ರಚಿಸಿರುತ್ತಾರೆ ಅದು ಕೂಡ
ಸಂಘಗಳ ನೋಂದಣಿ ಕಾಯ್ದೆ ವ್ಯಾಪ್ತಿಗೆ ಬರುತ್ತದೆ.

ನೋಂದಣಿಯಾದ ಸಂಘಗಳಿಗೆ ಆದಾಯ ತೆರಿಗೆ ಇಲಾಖೆಯಲ್ಲಿ ಪಾನ್ ಕಾರ್ಡ್ ಹಾಗೂ ಇನ್ನಿತರ ಅಕೌಂಟ್ ಗಳನ್ನು ತೆರೆದು ತೆರಿಗೆಗಳನ್ನು ಪಾವತಿಸಬೇಕು.

ಸಂಘವು ನೋಂದಣಿಯಾದ ಸ್ಥಳದಲ್ಲಿ ಪ್ರತಿವರ್ಷ ಬ್ಯಾಲನ್ಸ್ ಶೀಟ್ ಸಮೇತ ಲೆಕ್ಕ ಪತ್ರಗಳನ್ನು ಸಲ್ಲಿಸಿ ನಿಗದಿತ ಶುಲ್ಕವನ್ನು ಪಾವತಿಸಿ ಸಂಘವನ್ನು ನವೀಕರಿಸಿಕೊಳ್ಳಬೇಕು.
ಸಂಘವು ಆಸ್ತಿಗಳನ್ನು ಖರೀದಿಸಬಹುದು.

Exit mobile version