Revenue Facts

ಆಕಾರಬಂದ್ ಎಂದರೇನು? ಜಮೀನುಗಳ ನೋಂದಣಿಗೆ ಎಷ್ಟು ಅವಶ್ಯಕ..

ಒಂದು ಜಮೀನು ಎಂದರೆ ಅದಕ್ಕೊಂದು ವಿಸ್ತೀರ್ಣ ಮತ್ತು ಬೌಂಡರಿ ಇರಲೇಬೇಕು. ಹೀಗಿ ಅಧಿಕೃತವಾಗಿ ಸರ್ಕಾರಿ ವ್ಯವಸ್ಥೆಯ ಮೂಲಕ ಇರುವ ವಿಸ್ತೀರ್ಣದ ದಾಖಲೆಯೇ ಆಕಾರಬಂದ್.

ನೀವು ಯಾವುದೇ ಜಮೀನಿನ ನೋಂದಣಿ ಅಥವಾ ದಾನ ಮುಂತಾದವುಗಳಿಗಾಗಿ ಸಬ್ ರಿಜಿಸ್ಟ್ರಾರ್‌ ಕಚೇರಿಗೆ ಹೋದಾಗ ಆಕಾರಬಂದ್ ಕೇಳುತ್ತಾರೆ. ನಿಮ್ಮ ಬಳಿ ಆರ್‌ಟಿಸಿ ಜೊತೆಗೆ ಆಕಾರಬಂದ್ ಸಹ ಇಟ್ಟುಕೊಳ್ಳಬೇಕು. ಹಾಗಾದರೆ, ಆಕಾರಬಂದ್ ಯಾಕೆ ಬೇಕು, ಅದರ ಮಹತ್ವವೇನು, ಎಲ್ಲಿ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.

ಯಾವುದೇ ಜಮೀನಿನ ಅಂತಿಮ ವಿಸ್ತೀರ್ಣ ಇರುವ ದಾಖಲೆಯೇ ಅಕಾರಬಂದ್. ಇದರಲ್ಲಿ ಒಟ್ಟಾರೆ 29 ಕಾಲಂಗಳಿವೆ. ಅದರಲ್ಲಿ ಪ್ರಮುಖವಾಗಿನೋಡಿದಾಗ ಒಂದು ಮತ್ತು ಎರಡನೇ ಕಲಂಗಳಲ್ಲಿ ಜಮೀನಿನ ಸರ್ವೆ ಸಂಖ್ಯೆ ಇರುತ್ತದೆ. ಮೂರನೇ ಕಲಂನಲ್ಲಿ ಹಿಸ್ಸಾ ನಂಬರ್, ನಾಲ್ಕನೇ ಕಲಂನಲ್ಲಿ ಜಮೀನಿನ ಒಟ್ಟು ವಿಸ್ತೀರ್ಣ, ಐದನೇ ಕಲಂನಲ್ಲಿ ಜಮೀನಿನಲ್ಲಿ ಇರುವ ಖರಾಬು ಬಗ್ಗೆ ತಿಳಿಸುತ್ತದೆ. ಆರನೇ ಕಲಂ ಸಾಗುವಳಿ ಭೂಮಿ ಮತ್ತು ವಿಸ್ತೀರ್ಣದ ಬಗ್ಗೆ ಇರಲಿದ್ದು ಉಳಿದ ಕಾಲಂಗಳಲ್ಲಿ ಇತರೆ ವಿಚಾರಗಳನ್ನು ಒಳಗೊಂಡಿರುತ್ತದೆ.

ಆಕಾರಬಂದ್ ದಾಖಲೆಯು ಯಾವುದೇ ಜಮೀನಿಗೆ ಆಕಾರಬಂದ್ ದಾಖಲೆ ಹೊರತು ಆರ್‌ಟಿಸಿಯಲ್ಲ. ಆಕಾರಬಂದ್‌ವಿನಲ್ಲಿ ವಿಸ್ತೀರ್ಣ, ಸ್ವಾಧೀನದ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದರೆ ಅಥವಾ ಹೆಚ್ಚಿದ್ದರೆ ಆ ವಿಚಾರವನ್ನು ಸಂಬಂದಿಸಿದ ಪಾರ್ಟಿಗಳು ತಹಶೀಲ್ದಾರ್ ಕಚೇರಿಯ ಸರ್ವೆ ವಿಭಾಗಕ್ಕೆ ಅರ್ಜಿ ನೀಡಬೇಕು.

ಅರ್ಜಿ ನೀಡಿದ ನಂತರ ಸರ್ವೆಯರ್ ಸ್ಥಳ ಪರಿಶೀಲನೆ ಮಾಡಿ ನಿಜವಾದ ಜಮೀನಿನ ವಿಸ್ತೀರ್ಣವನ್ನ ಅಕಾರಬಂದ್‌ವಿನಲ್ಲಿ ತಿದ್ದುಪಡಿ ಮಾಡಿ ಜಿಲ್ಲಾ ಭೂದಾಖಲೆಗಳ ಮುಖ್ಯಸ್ಥರಿಂದ ಅನುಮತಿ ಪಡೆದು ಅಕಾರಬಂದ್‌ವನ್ನು ಅಪ್‌ಡೇಟ್ ಮಾಡುತ್ತಾರೆ.

ಅಕಾರ ಬಂದ್ ಮಾಡುವುದರಿಂದ ನಿಜವಾದ ಜಮೀನಿನ ಗುರುತು, ಸ್ವಾಧೀನ ಹಾಗೂ ಅಕ್ಕಪಕ್ಕದ ಒತ್ತುವರಿ ಬಗ್ಗೆ ಖಾತ್ರಿಯಾಗುತ್ತದೆ. ಅದೇ ಪ್ರಕಾರ ಅಕಾರ ಬಂಧು ಸರಿಯಾಗಿ ನಿರ್ವಹಿಸಿದರೆ ಆ ಜಮೀನುಗಳು ತಕರಾರಿಗೆ ಒಳಪಡುವುದಿಲ್ಲ. ಅಕಾರ ಬಂದು ಮೊದಲು ಸರಿಪಡಿಸಿದ ನಂತರವೇ ಆರ್‌ಟಿಸಿ ಅಪ್‌ಡೇಟ್ ಮಾಡಬೇಕಿರುತ್ತದೆ.

ಯಾವುದೇ ಕೃಷಿ ಜಮೀನು ಪಡೆಯಬೇಕಾದರೆ ಅಕಾರಬಂದ್‌ವನ್ನು ಪರಿಶೀಲಿಸಿಕೊಳ್ಳುವುದು ಒಳ್ಳೆಯದು. ಅಕಾರಬಂದ್‌ವನ್ನು ಪಡೆಯಬೇಕಾದರೆ ಅಥವಾ ಸರಿಪಡಿಸಬೇಕಾದರೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಕೊಡಬೇಕು. ಅರ್ಜಿಯೊಡನೆ ಆಧಾರ್, ಆರ್‌ಟಿಸಿ ನೀಡಬೇಕು. ತದನಂತರ ಅವರು ‘ಸಕಾಲ’ ಯೋಜನೆಯಡಿ ಸೇರಿಸಿಕೊಂಡು 7ರಿಂದ 15 ದಿನಗಳ ಒಳಗಾಗಿ ಅಕಾರಬಂದ್ ಪ್ರತಿಯನ್ನು ನೀಡಬೇಕಿರುತ್ತದೆ.

Exit mobile version