Revenue Facts

ಆಸ್ತಿಯನ್ನು ಕ್ರಯ ಮಾಡಿಕೊಳ್ಳುವಾಗ ಮಾರಾಟಗಾರರ ಮತ್ತುಖರೀದಿಸುವವರ ಹೊಣೆ ಹಾಗೂ ಕರ್ತವ್ಯಗಳೇನು?

ಆಸ್ತಿಯನ್ನು ಕ್ರಯ ಮಾಡಿಕೊಳ್ಳುವಾಗ ಮಾರಾಟಗಾರರ ಮತ್ತುಖರೀದಿಸುವವರ ಹೊಣೆ ಹಾಗೂ ಕರ್ತವ್ಯಗಳೇನು?

ಮಾರಾಟಗಾರ ಮತ್ತು ಖರೀದಿಸುವವರಿಗೆ ಕೆಳಕಂಡ ಹೊಣೆಗಳು ಹಾಗೂ ಕರ್ತವ್ಯಗಳು ಇರುತ್ತವೆ. (ಆಸ್ತಿ ಹಸ್ತಾಂತರ ಕಾಯಿದೆ 1882 ರ ಕಲಂ 55)ಮೇಲೆ ಹೇಳಿದಂತೆ ಜವಾಬ್ದಾರಿ ಮತ್ತು ಕರ್ತವ್ಯಗಳಿದ್ದರೂ ಕ್ರಮಕ್ಕೆಪಡೆಯುವವರು ಮಾತ್ರ ಬಹಳ ಎಚ್ಚರಿಕೆಯಿಂದ ಈ ಕೆಳಗೆ ವಿವರಿಸಿದ ವಿಷಯಗಳನ್ನು ಪರಿಶೀಲಿಸಬೇಕು.

1. ಮೂಲ ದಸ್ತಾವೇಜು.
2. ಮಾರುವವನಿಗೆ ಆಸ್ತಿ ಯಾವ ಮೂಲದಿಂದ ಬಂದಿದೆ ಎಂಬುದನ್ನುತಿಳಿಯಬೇಕು.
3. ಕ್ರಯಕ್ಕೆ ಪಡೆಯುವ ಆಸ್ತಿಯ ಮೇಲೆ ಯಾವುದಾದರೂ ಋಣ ಭಾರ ಅಧಿಕಾರಿಯವರ ಕಛೇರಿಯ ದಾಖಲೆಗಳಿಂದ ಕನಿಷ್ಟ 15 ವರ್ಷಗಳ ಇದೆಯೇ ಎನ್ನುವುದನ್ನು ತಿಳಿಯಲು, ಉಪನೋಂದಣಿ
ಋಣಭಾರ ಪತ್ರ (EC) ಪಡೆದುಕೊಳ್ಳಬೇಕು.
4. ನ್ಯಾಯಾಲಯದಲ್ಲಿ ಆಸ್ತಿಯ ಸಂಬಂಧಿಸಿದಂತೆ ವಾಜ್ಯಗಳು ಇವೆಯೇ ಎಂಬುದನ್ನು ತಿಳಿದುಕೊಳ್ಳಬೇಕು.
5. ಕ೦ದಾಯ ಅಥವಾ ಪುರಸಭೆ ಕಾರ್ಯಾಲಯಗಳಲ್ಲಿ ವಾರಸಾ ಬಗ್ಗೆಅಥವಾ ಇನ್ಯಾವುದೇ ವಿಚಾರವಾಗಿ ಏನಾದರೂ ವಾಜ್ಯ, ತಕರಾರು ನಡೆದಿದೆಯೇ ಎಂಬುದನ್ನು ಸಹ ತಿಳಿದುಕೊಳ್ಳಬೇಕು.
6. ದಸ್ತಾವೇಜು ಬರೆದು ಕೊಡುವವರು ಮುಖ್ಯಾರನಾಮೆ ಪತ್ರವನ್ನುಹೊಂದಿದವರಾಗಿದ್ದರೆ, (Power of attorney) ಅವರು ಹೊಂದಿರುವುದು ನಿಜವಾದ ಮುಖ್ಯಾರನಾಮೆ ಪತ್ರವೇ, ಅದು
ಚಾಲ್ತಿಯಲ್ಲಿದೆಯೇ ಎನ್ನುವುದನ್ನು ಮುಖ್ಯಾರನಾಮ ಪತ್ರ ಬರೆದುಕೊಟ್ಟವರಿಂದ ಖಾತ್ರಿಪಡಿಸಿಕೊಳ್ಳಬೇಕು.
7. ವ್ಯವಹಾರವು ನೋಂದಣಿ ಕಾಯಿದೆ ಕಲಂ 22ಎ ರಂತೆ ಸಾರ್ವಜನಿಕ ನೀತಿಗೆ ವಿರೋಧವಾಗಿಲ್ಲ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.
8. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ ಆಸ್ತಿಯನ್ನು ಸರ್ಕಾರ ಅನುದಾನ ಮಾಡಿದ್ದರೆ ಅನುದಾನದ ನಿರ್ಬಂಧನೆಯು ಉಲ್ಲಂಘನೆ ಆಗುತ್ತದೆಯೇ, ಹಸ್ತಾಂತರ ಮಾಡಲು ಸರ್ಕಾರದಿಂದ ಅನುಮತಿ
ಪಡೆಯಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.

ಆಸ್ತಿಯನ್ನು ನೋಂದಾಯಿಸುವ ಮೊದಲು ಪರಿಶೀಲಿಸಬೇಕಾದ ವಿಷಯಗಳು:
ಭಾರತದಲ್ಲಿ ಆಸ್ತಿ ನೋಂದಣಿ ಒಂದು ಟ್ರಿಕಿ ಪ್ರಕ್ರಿಯೆಯಾಗಿದೆ ಮತ್ತು ಇದು ದೀರ್ಘಾವಧಿಯ ಪರಿಣಾಮಗಳನ್ನು ಉಂಟುಮಾಡಬಹುದು. ಹೀಗಾಗಿ ನೋಂದಣಿ ಮಾಡುವಾಗ ಜಾಗರೂಕರಾಗಿರಬೇಕು. ಆಸ್ತಿಯನ್ನು ನೋಂದಾಯಿಸುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳು ಇಲ್ಲಿವೆ:-
ದಾಖಲೆಗಳ ಸರಣಿ – ಖರೀದಿದಾರನು ಆಸ್ತಿಯನ್ನು ಯಾವಾಗ ಮತ್ತು ಹೇಗೆ ಒಬ್ಬ ಮಾಲೀಕರಿಂದ ಇನ್ನೊಬ್ಬರಿಗೆ ವರ್ಗಾಯಿಸಲಾಗುತ್ತದೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕ್ರಾಸ್-ಚೆಕ್ ಮಾಡಬೇಕು.
ಕಾರಣ ಕ್ಲಿಯರೆನ್ಸ್ – ಆಸ್ತಿಯನ್ನು ಖರೀದಿಸುವ ಮೊದಲು, ವಿದ್ಯುತ್ ಬಿಲ್, ನೀರಿನ ಬಿಲ್, ತೆರಿಗೆಗಳು ಇತ್ಯಾದಿಗಳನ್ನು ಪರಿಶೀಲಿಸಿ ಮತ್ತು ನವೀಕರಿಸಬೇಕು.

ಸ್ಟ್ಯಾಂಪ್ ಸುಂಕದ ಲೆಕ್ಕಾಚಾರ – ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ಆಧರಿಸಿ, ಸ್ಟ್ಯಾಂಪ್ ಸುಂಕವನ್ನು ಲೆಕ್ಕಹಾಕಲಾಗುತ್ತದೆ ಮತ್ತು ಇದು ಒಂದು ರಾಜ್ಯದಿಂದ ಇನ್ನೊಂದಕ್ಕೆ ಬದಲಾಗುತ್ತದೆ.
ಡೀಡ್ ತಯಾರಿ – ನಿಯಮಗಳು ಮತ್ತು ಷರತ್ತುಗಳು, ಖರೀದಿದಾರ ಮತ್ತು ಮಾರಾಟಗಾರರ ವಿವರಗಳು ಇತ್ಯಾದಿಗಳನ್ನು ಪತ್ರದಲ್ಲಿ ಕರಡು ಮಾಡಬೇಕು. ಅದು ಸೇಲ್ ಡೀಡ್, ಗಿಫ್ಟ್ ಡೀಡ್, ಲೀಸ್ ಡೀಡ್ ಇತ್ಯಾದಿ ಆಗಿರಬಹುದು.
ಎನ್ಕಂಬರೆನ್ಸ್ – ಎನ್ಕಂಬರೆನ್ಸ್ ಪ್ರಮಾಣಪತ್ರವು ಆಸ್ತಿಯು ಕಾನೂನು ವಿವಾದಗಳು ಮತ್ತು ಅಡಮಾನಗಳಿಂದ ಮುಕ್ತವಾಗಿದೆ ಎಂದು ಖಚಿತಪಡಿಸುತ್ತದೆ. ಆಸ್ತಿಯನ್ನು ಖರೀದಿಸುವ ಮೊದಲು ಖರೀದಿದಾರರು ಇದನ್ನು ಪರಿಶೀಲಿಸಬೇಕು.

Exit mobile version