Revenue Facts

ಬಿಗ್ ಬಾಸ್ ಮನೆಯಲ್ಲಿ ಇದ್ದಕ್ಕಿದ್ದಂತೆ‌ ತಣ್ಣಗಾದ್ರ ರೋಷಾವೇಷದ ವಿನಯ್..?

ಬಿಗ್ ಬಾಸ್ ಮನೆಯಲ್ಲಿ ಇದ್ದಕ್ಕಿದ್ದಂತೆ‌ ತಣ್ಣಗಾದ್ರ ರೋಷಾವೇಷದ ವಿನಯ್..?

ಬಹುಷಃ ವಿನಯ್ ರಷ್ಟು ಬಿಗ್ ಬಾಸ್ ಮನೆಯಲ್ಲಿ ಯಾರು ವಿವಾದಕ್ಕೀಡಾಗಿಲ್ಲ. ಯಾಕೆಂದ್ರೆ ತಮ್ಮ ಅಗ್ರೆಸ್ಸೀವ್ ಆಟದಿಂದಲೇ ವಿನಯ್ ಸಾಕಷ್ಟು ಸುದ್ದಿಗೆ ಗ್ರಾಸವಾಗ್ತಿರ್ತಾರೆ…ಆದ್ರೆ ಈ ಬಾರಿ ಯಾಕೋ ವಿನಯ್ ಒಂಚೂರು ತಮ್ಮ ಆಟವನ್ನ ಬದಲಾಯಿಸಿದಂತಿದೆ.ಕೆಲವೊಂದಿಷ್ಟು ಸೂಕ್ಷ್ಮ ವಿಚಾರಗಳನ್ನ ವಿನಯ್ ಬಿಗ್ ಬಾಸ್ ಮನೆಯಲ್ಲಿ ಗ್ರಹಿಸಿದಂತಿದೆ..

ಶೈನ್ ಶೆಟ್ಟಿ ವಿನಯ್ ಗೆ ಹೇಳಿದ ಗುಟ್ಟೇನು.?

ಇನ್ನು ಈ ಕುರಿತು ಬಿಗ್ ಬಾಸ್ ವೀಕ್ಷಕರಿಗೂ ವಿನಯ್ ವರ್ತನೆ ಅಸಮಾಧಾನ ತಂದಿತ್ತು. ಕಿಚ್ಚ ಸುದೀಪ್ ಒಮ್ಮೆಯಾದರೂ ಅವರ ವರ್ತನೆಯನ್ನು ಪ್ರಶ್ನಿಸಬೇಕು ಎಂದು ಅಭಿಪ್ರಾಯಪಟ್ಟಿದ್ದೂ ಹೆಚ್ಚಾಗೇ ಇದೆ. ಇದೀಗ ಮನೆಗೆ ಈ ವಾರಂತ್ಯದಲ್ಲಿ ಭೇಟಿ ಕೊಟ್ಟಿದ್ದ ಶೈನ್ ಶೆಟ್ಟಿ ವಿನಯ್ ಗೆ ಇದನ್ನು ಸೂಕ್ಷ್ಮವಾಗಿ ಹೇಳಿದ್ದರು. ಅಗ್ರೆಸಿವ್ ಆಗಿದ್ದರೆ ಪರಿಣಾಮ ಸರಿ ಇರಲ್ಲ, ಎಚ್ಚರಿಕೆಯಿಂದ ಆಡಿದರೆ ಉಳಿದುಕೊಳ್ಳಬಹುದು ಎಂದು ಕಿವಿ ಮಾತು ಹೇಳಿದ್ದರು..

ಮನೆಯ ಸದಸ್ಯರ ಬಳಿ ಪ್ರಮಾಣ ಮಾಡಿರುವ ವಿನಯ್

ಹೀಗಾಗಿ ಬಳಿಕ ವಿನಯ್ ನಾನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಅಗ್ರೆಸಿವ್ ಆಗಿರುವುದಿಲ್ಲ. ಯಾವುದೇ ಕಾರಣಕ್ಕೂ ಪ್ರವೋಕ್ ಆಗಲ್ಲ ಎಂದು ಮನೆಯ ಸದಸ್ಯರಿಗೆ ಹೇಳಿಕೊಂಡಿದ್ದಾರೆ. ಅದನ್ನು ತಮ್ಮ ವರ್ತನೆ ಮೂಲಕವೂ ತೋರಿಸುತ್ತಿದ್ದಾರೆ. ಎಲ್ಲರ ಜೊತೆಗೆ ಚೆನ್ನಾಗಿರಲು ಪ್ರಯತ್ನಿಸುತ್ತಿದ್ದಾರೆ. ಎಲ್ಲವನ್ನೂ ತಮಾಷೆಯಾಗಿಯೇ ಸ್ವೀಕರಿಸುತ್ತಿದ್ದಾರೆ. ಅವರ ಈ ಬದಲಾವಣೆ ಎಷ್ಟು ದಿನ ಅಥವಾ ಇದು ನೀರ ಮೇಲಿನ ಗುಳ್ಳೆನಾ ಅಂತ ಕಾದು‌ ನೋಡಬೇಕು.

Exit mobile version