21.1 C
Bengaluru
Monday, July 8, 2024

ಶಲ್ಯ ದೋಷ ಎಂದರೇನು? ಶಲ್ಯ ದೋಷವಿದ್ದರೆ ಏನಾಗುತ್ತದೆ ?

ವೇದಿಕ್ ವಾಸ್ತುವಿನಲ್ಲಿ ಶಲ್ಯ ದೋಷದ ಬಗ್ಗೆ ಉಲ್ಲೇಖಿಸಲಾಗಿದೆ. ಈ ದೋಷವಿರುವ ಜಮೀನು, ನಿವೇಶನದಲ್ಲಿ ವಾಸವಿದ್ದರೆ ಭಾರೀ ಸಮಸ್ಯೆಗಳು ಎದುರಾಗುತ್ತವೆ. ಶಲ್ಯ ದೋಷ ಎಂದರೇನು ? ಶಲ್ಯ ದೋಷ ಯಾವಾಗ ಆಗುತ್ತದೆ ? ಅದರ ಪರಿಹಾರ ಮಾರ್ಗಗಳು ಏನು ಎಂಬುದರ ಬಗ್ಗೆ ವಾಸ್ತು ತಜ್ಞರು ಇಲ್ಲಿ ಸಮಗ್ರವಾಗಿ ವಿವರಿಸಿದ್ದಾರೆ.

ಶಲ್ಯ ದೋಷ ಎಂದರೇನು ?
ಯಾವುದೇ ನಿವೇಶನ ಅಥವಾ ಜಮೀನಿನಲ್ಲಿ ದೋಷ ಪೂರಿತ ವಸ್ತುಗಳು. ಅಂದರೆ, ಮೃತದೇಹ, ಕೂದಲು, ಉಗುರು, ಇವು ಸೇರಿಕೊಂಡರೆ, ಜಮೀನಿನಲ್ಲಿ ಇವು ಇದ್ದರೆ ಅದನ್ನು ಶಲ್ಯ ದೋಷ ಎಂದು ಕರೆಯುತ್ತಾರೆ. ವಿಶೇಷವಾಗಿ ಮೃತದೇಹ ವಿದ್ದರೆ, ದೋಷವು ತುಂಬಾ ತೀವ್ರವಾಗಿರುತ್ತದೆ. ಅಕಾಲಿಕ ಮರಣ, ಅಸಹಜ ಸಾವು, ನಡೆದ ಜಾಗಗಳು ಶಲ್ಯ ದೋಷಕ್ಕೆ ಒಳಪಡುತ್ತವೆ. ಶಲ್ಯ ದೋಷಕ್ಕೆ ಒಳಪಟ್ಟ ನಿವೇಶನ, ವಾಸ, ವಾಣಿಜ್ಯ, ಕೈಗಾರಿಕೆ ಅಥವಾ ವ್ಯವಸಾಯ ಮಾಡಲು ಬೇಕಾದ ಪ್ರಾಣ ಚೈತನ್ಯ ಇರುವುದಿಲ್ಲ. ಆದ್ದರಿಂದ ಅಲ್ಲಿ ವಾಸಿಸುವ ವ್ಯಕ್ತಿಗಳಿಗೆ ನಾನಾ ರೀತಿಯ ಅಭಿವೃದ್ಧಿ ಸಮಸ್ಯೆಗಳು ಬಾಧಿಸುತ್ತವೆ.

ಉದಾಹರಣೆ:
ಉದಾಹರಣೆಗೆ, ಕೆಟ್ಟ ಕನಸು ಬೀಳುವುದು, ನಿದ್ರೆ ಬಾರದಿರುವುದು, ಮಲ ಬದ್ಧತೆ ಈ ರೀತಿಯ ಆರೋಗ್ಯ ಸಮಸ್ಯೆ ಉಂಟಾಗಿ ವಿವಿಧ ರೋಗಗಳು ಬರುತ್ತವೆ. ಮತ್ತು ಕೈ ಇಟ್ಟ ಕೆಲಸಗಳು ಪರಿಪೂರ್ಣವಾಗಿ ನೆರವೇರುವುದಿಲ್ಲ. ಮನೆಯಲ್ಲಿನ ವ್ಯಕ್ತಿಗಳು ಪರಸ್ಪರ ಜಗಳ, ಕಚ್ಚಾಟ ಮತ್ತು ಕೆಲಸಗಳು ಸರಿಯಾಗಿ ನಡೆಯದ ಕಾರಣ ಹಣಕಾಸಿನ ಸಮಸ್ಯೆಗಳು ಎದುರಾಗುತ್ತವೆ. ಮಕ್ಕಳಾಗದಿರುವುದು ಪ್ರಾಯದ ಮಕ್ಕಳು ಮದುವೆಯಾಗದಿರುವುದು ಇವು ‍ಶಲ್ಯ ದೋಷದ ಪ್ರಮುಖ ಲಕ್ಷಣಗಳು.

ಪರಿಹಾರ:
ಶಲ್ಯ ದೋಷ ಇರುವ ಜಮೀನಿನ, ನಿವೇಶನದ ವಿವಿಧ ಭಾಗದಿಂದ ಮಣ್ಣನ್ನು ಸಂಗ್ರಹಿಸಬೇಕು. ( ಪೂರ್ವ , ಪಶ್ಚಿಮ, ಉತ್ತರ, ದಕ್ಷಿಣ, ಸೇರಿ ಎಂಟು ಕಡೆ ಸಂಗ್ರಹ) ಆ ಮಣ್ಣನ್ನು ಸಮುದ್ರದ ತೀರ (ಗೋಕರ್ಣ, ತಿರುವಲ್ಲಂ, ರಾಮೇಶ್ವರಂ )ದ ಜಾಗಗಳಿಗೆ ಹೋಗಬೇಕು. ಅಲ್ಲಿ ಆ ಮಣ್ಣಿನಿಂದ ಶಿವಲಿಂಗ ಪ್ರತಿಷ್ಠಾಪಿಸಿ ಶಲ್ಯ ದೋಷ ನಿವಾರಣೆಗೆ ಪ್ರಾರ್ಥಿಸಬೇಕು. ಸಾಧ್ಯವಾದರೆ, ಆನೆಯ ಸಗಣಿ, ಗೋವಿನ ಸಗಣಿ, ಕುದುರೆಯ ಸಗಣಿ, ಕತ್ತೆ ಸಗಣಿ ಹರಶಿನ ಮತ್ತು ಗೋ ಮೂತ್ರ ಇವುಗಳನ್ನು ಭೂಮಿಯಲ್ಲಿ ಸ್ವಲ್ಪ ಹಳ್ಳ ತೆಗೆದು ಎಲ್ಲವನ್ನೂ ಮಿಶ್ರಣ ಮಾಡಬೇಕು. ಹೀಗೆ ಮಾಡುವುದರಿಂದ ಶಲ್ಯ ದೋಷ ನಿವಾರಣೆಯಾಗುತ್ತದೆ ಎಂದು ವೇದಿಕ್ ವಾಸ್ತು ಶಾಸ್ತ್ರ ಹೇಳುತ್ತದೆ.

Related News

spot_img

Revenue Alerts

spot_img

News

spot_img