ನೀವು ಸ್ವಂತ ಮನೆಯಲ್ಲಿಯೇ ಇರಿ ಅಥವಾ ಬಾಡಿಗೆ ಮನೆಯಲ್ಲಿಯೇ ಇರಿ. ಮನೆ ಯಾವ ದಿಕ್ಕಿಗೆ ಇರಬೇಕು, ಮನೆಯ ಯಜಮಾನ ಮತ್ತು ಇತರೆ ಸದಸ್ಯರ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬುದು ಮುಖ್ಯ. ಹೀಗೆ ಪಶ್ಚಿಮ ದಿಕ್ಕು ಯಾವ ರೀತಿ ಒಳಿತು ಮತ್ತು ಕೆಟ್ಟ ಪರಿಣಾಮಗಳು ಇವೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.
ಪಶ್ಚಿಮ ದಿಕ್ಕಿಗೆ ವರುಣ ದೇವನು ಅಧಿಪತಿ. ಈ ದಿಕ್ಕು ವಾಯುತತ್ವವನ್ನು ಪ್ರಭಾವಗೊಳಿಸುತ್ತದೆ. ವಾಯು ಚಂಚಲ. ಆದ್ದರಿಂದ ಈ ದಿಕ್ಕು ಚಂಚಲತೆಯನ್ನು ಸೂಚಿಸುತ್ತದೆ.
ಮನೆಯ ಬಾಗಿಲು ಪಶ್ಚಿಮ ದಿಕ್ಕಿನಲ್ಲಿ ಇದ್ದರೆ ಮನೆಯಲ್ಲಿ ಚಂಚಲ ಸ್ವಭಾವದವರು ಆಗಿರುತ್ತಾರೆ. ಪಶ್ಚಿಮ ದಿಕ್ಕು ಸಫಲತೆ, ಯಶಸ್ಸು, ಭವ್ಯತೆ ಕೀರ್ತಿಯನ್ನು ತಂದು ಕೊಡುತ್ತದೆ.
ಪಶ್ಚಿಮ ದಿಕ್ಕಿಗೆ ಆಯುಧ ಪಾಶ ಹಾಗೂ ಪ್ರತಿನಿಧಿಗ್ರಹ ಶನಿ. ಪಶ್ಚಿಮ ದೆಸೆಯಿಂದ ಹೊಟ್ಟೆ, ಗುಪ್ತಾಂಗ, ಜನನಾಂಗದ ವಿಚಾರ ಮಾಡಲಾಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಸ್ನಾನದ ಮನೆ ಅಥವಾ ಮನೆಯ ಯಜಮಾನನ ಮಲಗುವ ಕೋಣೆ ಇದ್ದರೆ ಪತಿ ಪತ್ನಿಯರು ಅತಿ ಕಡಿಮೆ ಸಮಯದವರೆಗೆ ಜೊತೆಯಾಗಿ ಇರುತ್ತಾರೆ. ಈ ಕಾರಣದಿಂದ ಪತಿ ಪತ್ನಿ ಯತ್ನವೇನೂ ಆಗದು. ಆದರೆ, ಪತಿ ಅಥವಾ ಪತ್ನಿ ಪದೇ ಪದೇ ಯಾತ್ರೆಗೆ ಹೋಗುವುದರಿಂದ ಅಥವಾ ನೌಕರಿಯ ಸ್ಥಾನ ಬದಲಾಗುವುದರಿಂದ ಪತಿ ಪತ್ನಿ ದೂರವೇ ಇರುತ್ತಾರೆ.
ಪಶ್ಚಿಮ ದಿಕ್ಕಿನಲ್ಲಿ ಅಡುಗೆ ಮನೆ ಇದ್ದರೆ ಮನೆಯ ಯಜಮಾನ ಸಾಕಷ್ಟು ಹಣ ಗಳಿಸುತ್ತಾನೆ. ಆದರೆ, ಆ ಹಣ ಉಳಿಸಲು ಸಾಧ್ಯವಾಗುವುದಿಲ್ಲ. ಶನಿ, ಮಂಗಳನ ಪ್ರಭಾವ ಕಾರಣದಿಂದ ಉಷ್ಣ, ಪಿತ್ತ ಸಂಬಂಧಿತ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮನೆಯ ಬಾಗಿಲು ಚಿಕ್ಕದಾಗಿದ್ದರೆ ಮನೆಯ ಯಜಮಾನನ ಉಜ್ವಲ ಭವಿಷ್ಯಕ್ಕೆ ಬಾಧೆ ತರುತ್ತದೆ.
ಪಶ್ಚಿಮದಲ್ಲಿ ಪೂಜಾ ಸ್ಥಳವಿದ್ದರೆ ಯಜಮಾನನು ಜ್ಯೋತಿಷ್ಯ, ಯಂತ್ರ, ತಂತ್ರ ಹಾಗೂ ನಿಗೂಢ ವಿದ್ಯೆಗಳನ್ನು ತಿಳಿದವನು ಆಗಿರುತ್ತಾನೆ. ಒಂದು ವೇಳೆ ಪಶ್ಚಿಮದಲ್ಲಿ ಶೌಚಾಲಯ, ಉಗ್ರಾಣ ಇದ್ದರೆ ಮನೆಯ ಯಜಮಾನನ ಮೇಲೆ ರಾಹುವಿನ ಪ್ರಭಾವ ಇರುತ್ತದೆ. ಅದರಿಂದ ಆಕಸ್ಮಿಕ ಲಾಭವನ್ನು ತಂದು ಕೊಡುತ್ತದೆ.
ಪಶ್ಚಿಮ ಭಾಗದಲ್ಲಿ ಇರುವ ಗುಡಿಸಲು, ಕೋಣೆ, ಕುಟೀರ ಇತ್ಯಾದಿಗಳು ನೆಲಮನೆಯ ಮುಖ್ಯ ವಾಸ್ತುಸ್ಥಳದ ಮಟ್ಟಕ್ಕೆ ಇದ್ದರೆ ಹಣದ ಹಾನಿ ಆಗುತ್ತದೆ. ಪಶ್ಚಿಮ ದಿಕ್ಕಿನಲ್ಲಿರುವ ಬಾಗಿಲು ನೈರುತ್ಯ ದಿಕ್ಕಿಗೆ ಮುಖ ಮಾಡಿದ್ದರೆ ದೀರ್ಘ ಕಾಯಿಲೆ, ಆರ್ಥಿಕ ಹಾನಿ- ಪಶ್ಚಿಮ ದಿಕ್ಕಿನ ಬಾಗಿಲು ವಾಯುವ್ಯ ದಿಕ್ಕಿಗೆ ಮುಖ ಮಾಡಿದ್ದರೆ ನ್ಯಾಯಾಲಯದಲ್ಲಿನ ವ್ಯಾಜ್ಯಗಳು, ಧನ ಹಾನಿ ಆಗುತ್ತದೆ. ಪಶ್ಚಿಮ ದಿಕ್ಕಿನಲ್ಲಿರುವ ಕಟ್ಟೆ ಮುಖ್ಯವಾಸ್ತುವಿನ ಮಟ್ಟಕಿಂತ ಕೆಳಗೆ ಇದ್ದರೆ ಧನ ಹಾನಿ ಹಾಗೂ ಆರೋಗ್ಯ ಹಾನಿ ಹೊಂದುತ್ತಾರೆ.
ನೀರು, ಮಳೆಯ ನೀರು ಪಶ್ಚಿಮಕ್ಕೆ ಹರಿದು ಬಂದು ಹೊರಗೆ ಹೋಗುತ್ತಿದ್ದರೆ ಪುರುಷ ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗುತ್ತಾನೆ.
ಮನೆಯ ಸ್ಥಳ ವರಾಂಡ, ಕೋಣೆ, ಪಡಸಾಲೆ ಪಶ್ಚಿಮ ದಿಕ್ಕಿನ ಭಾಗಕ್ಕಿಂತ ಕೆಳಮಟ್ಟಕ್ಕೆ ಇದ್ದರೆ ಧನಹಾನಿ ಅಗುತ್ತದೆ. ಪಶ್ಚಿಮಕ್ಕಿಂತ ಪೂರ್ವದಲ್ಲಿ ಖಾಲಿ ಸ್ಥಳ ಕಡಿಮೆ ಇದ್ದರೆ ಪುತ್ರ ಸಂತಾನದ ಹಾನಿ ಆಗುತ್ತದೆ. ಪಶ್ಚಿಮ ದೆಸೆಯ ಮನೆಯ ಪಶ್ಚಿಮದಲ್ಲಿ ಬಾತ್‌ರೂಮ್, ಬೆಡ್‌ರೂಮ್ ಇದ್ದರೆ ಗಂಡ ಹೆಂಡಿತಿಯರು ಎಂದೂ ಜೋಡಿ ಆಗುವುದಿಲ್ಲ.
ಮನೆಯ ಗೋಡೆಗಳ ಬಣ್ಣ ಕಪ್ಪು ಅಥವಾ ಗಾಢ ನೀಲಿ, ಮನೆಯಲ್ಲಿ ಕತ್ತಲು ಇದ್ದರೆ ಅಥವಾ ಹೆಚ್ಚು ಪರದೆಗಳನ್ನು ಹಾಕಿದ್ದರೆ, ರಹಸ್ಯಮಯ ಬಾಗಿಲುಗಳು ಇದ್ದರೆ ಇಂತಹ ಯಜಮಾನನ ಕುಂಡಲಿ ಶನಿಗ್ರಹದಿಂದ ಪ್ರಭಾವಿತ ಆಗಿರುತ್ತದೆ.
ಶೌಚಾಲಯನ್ನು ಯಾವಾಗಲೂ ಪಶ್ಚಿಮ ದಿಕ್ಕು ಹಾಗೂ ನೈರುತ್ಯ ಕೋನದ ನಡುವೆ ನಿರ್ಮಿಸಬೇಕು. ಶೌಚಾಲಯದಲ್ಲಿನ ಎಕ್ಸಾಸ್ಟ್ ಫ್ಯಾನ್ ಉತ್ತರ ಅಥವಾ ಪೂರ್ವದ ಗೋಡೆ ಮೇಲೆ ಕೂಡಿಸಬೇಕು. ಪೂರ್ವದ ಗೋಡೆ ಮೇಲೆ ಒಳಭಾಗಕ್ಕೆ ಒಂದು ಬೆಳಕಿಂಡಿ ಇದ್ದರೆ ಉತ್ತಮ.
ಬ್ರಹ್ಮ, ವಿಷ್ಣು, ಶಿವ, ಕಾರ್ತಿಕೇಯರ ಮುಖಗಳು ಇಡಿ:
ಮುಖ್ಯ ಬಾಗಿಲು ಪಶ್ಚಿಮಕ್ಕೆ ಇದ್ದರೆ ಬಾಲ್ಕನಿಯನ್ನು ಉತ್ತರ-ಪಶ್ಚಿಮ (ವಾಯುವ್ಯ) ದಿಕ್ಕಿನಲ್ಲಿ ನಿರ್ಮಿಸಬೇಕು. ಪೂಜೆ ಮನೆಯಲ್ಲಿ ಬ್ರಹ್ಮ ವಿಷ್ಣು ಶಿವ ಕಾರ್ತಿಕೇಯರ ಮುಖಗಳು ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡಿ ಇರಬೇಕು. ಮಕ್ಕಳು ಓದಲು ಮತ್ತು ಬರೆಯಲು, ಕಚೇರಿ ಕೆಲಸ ಮಾಡಲು ಪಶ್ಚಿಮ ಹಾಗೂ ವಾಯುವ್ಯ ದಿಕ್ಕುಗಳ ನಡುವೆ ಅಧ್ಯಯನ ಕಕ್ಷೆ ನಿರ್ಮಿಸಬಾರದು. ವಿದ್ಯಾಭ್ಯಾಸ ಮಾಡುವಾಗ ಮಕ್ಕಳ ಮುಖ ಪೂರ್ವ ಅಥವಾ ಈಶಾನ್ಯ ದಿಕ್ಕಿನತ್ತ ಇದ್ದರೆ ಉತ್ತಮ. ವಿದ್ಯಾರ್ಥಿಗಳು ಯಾವಾಗಲೂ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನತ್ತ ಮುಖಮಾಡಿ ಮಲಗಬೇಕು.
ದಿನನಿತ್ಯದ ಕೆಲಸದ ದಣಿವಿನ ನಂತರ ಪ್ರತಿ ವ್ಯಕ್ತಿಯೂ ವಿಶ್ರಾಂತಿ ಪಡೆಯಲು, ಎಲ್ಲಾ ಚಿಂತೆಗಳಿಂದ ಮುಕ್ತನಾಗಲು, ಸುಖನಿದ್ರೆ ಮಾಡಲು ಮಲಗುವ ಕೋಣೆಯನ್ನು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಬೇಕು. ಇದರಿಂದ ಉತ್ತಮ ನಿದ್ರೆ ಬರುತ್ತದೆ. ಮಂಚ ಮಲಗುವ ಕೋಣೆಯ ದಕ್ಷಿಣ ಗೋಡೆಗೆ ಅಂಟಿದಂತಿರಬೇಕು. ಒಂದು ವೇಳೆ ಗಿಡ ಮರಗಳನ್ನು ಬೆಳೆಸುವ ಅಭಿರುಚಿ ಇದ್ದರೆ ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಬೆಳೆಸಬೇಕು.
ಒಂದು ವೇಳೆ ಭೂಮಿಯ ಮುಖ ಪಶ್ಚಿಮ ದಿಕ್ಕಿನತ್ತ ಇದ್ದರೆ ಮುಖ್ಯ ಬಾಗಿಲನ್ನು ಪಶ್ಚಿಮ ದಿಕ್ಕಿನ ಮಧ್ಯ ಭಾಗದಲ್ಲಿ ಅಥವಾ ನೈರುತ್ಯ ಕೋನದಲ್ಲಿ ನಿರ್ಮಿಸಬೇಕು. ಊಟದ ಮನೆ ಯಾವಾಗಲೂ ಪೂರ್ವ ಅಥವಾ ಪಶ್ಚಿಮ ಅಥವಾ ಆಗ್ನೇಯ ದಿಕ್ಕಿನಲ್ಲಿ ಇರಬೇಕು. ಊಟದ ಮನೆಯನ್ನು ಎಂದೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು.
ವಾಸ್ತು ದೋಷ ನಿವಾರಣೆಗೆ ಪರಿಹಾರ:
ಪಶ್ಚಿಮ ದಿಕ್ಕಿನ ದೋಷಗಳು ಇದ್ದರೆ ಮನೆಯಲ್ಲಿ ವರ್ಣಯಂತ್ರ ಸ್ಥಾಪಿಸಬೇಕು. ಶನಿವಾರ ವ್ರತ ಮಾಡಬೇಕು. ಆಚಾರ್ಯರಿಗೆ ಸಾಸುವೆ ಎಣ್ಣೆಯನ್ನು ದಕ್ಷಿಣೆ ಸಮೇತ ದಾನ ಮಾಡಬೇಕು ಎಂದು ವೇದಿಕ್ ವಾಸ್ತು ಶಾಸ್ತ್ರ ಹೇಳುತ್ತದೆ.