Revenue Facts

ವಾಸ್ತು ಸೂತ್ರಗಳನ್ನು ಪಾಲಿಸಿ, ಸಾಲದಿಂದ ಮುಕ್ತಿ ಪಡೆಯಿರಿ..

ವಾಸ್ತು ಸೂತ್ರಗಳನ್ನು ಪಾಲಿಸಿ, ಸಾಲದಿಂದ ಮುಕ್ತಿ ಪಡೆಯಿರಿ..

ಬೆಂಗಳೂರು, ಡಿ. 16: ಎಷ್ಟೇ ದುಡಿದರೂ, ಸಾಲ ಮಾಡದೇ ಬದುಕನ್ನು ನಡೆಸುವುದು ಬಹಳ ಕಷ್ಟ. ಒಂದೇ ತಿಂಗಳ ಸಂಬಳದಲ್ಲಿ, ಮನೆ, ಕಾರುಗಳನ್ನು ಖರೀದಿಸಲು ಸಾಧ್ಯವಿಲ್ಲ. ದೊಡ್ಡ ಮೊತ್ತದ ವಸ್ತುಗಳನ್ನು ಖರೀದಿಸಲು ಸಾಲ ಮಾಡಲೇ ಬೇಕು. ಇಲ್ಲವೇ ಬ್ಯಾಂಕ್ ಗಳಲ್ಲಿ ಇಎಂಐ ಮೊರೆ ಹೋಗಬೇಕು. ಇಎಂಐ ಹಾಗೂ ಸಾಲಕ್ಕೆ ಬಡ್ಡಿ ಕಟ್ಟಿ ಕಟ್ಟಿ ಅದೆಷ್ಟೋ ಜನ ಬೇಸತ್ತು ಮನೆ ಮಠವನ್ನು ಮಾರಿಕೊಂಡ ಉದಾಹರಣೆಗಳು ಇವೆ. ಸಾಲ ಎಂಬುದು ಮಾತ್ರ ಮನುಷ್ಯನ ನೆತ್ತಿಯ ಮೇಲೆ ಸದಾ ತೂಗಾಡುವ ಕತ್ತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದಕ್ಕೆ ನಮ್ಮ ಹಿರಿಯರು ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ಮಾತನ್ನು ಹೇಳಿದ್ದಾರೆ.

ಆದರೆ, ಈ ಕಾಲದ ಜೀವನ ಶೈಲಿಗೆ ಸಾಲ ಮಾಡುವುದು, ಹೈ-ಫೈ ಜೀವನ ಮಾಡಲು ಈ ಸಾಲ ಅತ್ಯಗತ್ಯ. ಸಾಲ ಮಾಡದೇ ಐಷಾರಾಮಿ ಬದುಕು ನಿಜಕ್ಕೂ ಕಷ್ಟಕರವಾದುದ್ದೇ. ಹಾಗಾಗಿ ಪ್ರತಿಯೊಬ್ಬರೂ ಸಾಲ ಮಾಡುತ್ತಾರೆ. ಆದರೆ, ಕೆಲವರ ಗ್ರಹಚಾರ ಕೆಟ್ಟರೆ, ಸನ್ಣ ಸಾಲ ಹೋಗಿ ಮೈತುಂಬಾ ಸಾಲ ಮಾಡಿಕೊಂಡು ನಿತ್ಯ ನರಕ ವೇತನೆಯನ್ನು ಅನುಭವಿಸಬೇಕಾಗುತ್ತದೆ. ಹೀಗೆ ಕಷ್ಟದ ಮೇಲೆ ಕಷ್ಟ ಅನುಭವಿಸಿ, ಮನೆ ನಡೆಸಲು, ಅನಿವಾರ್ಯವಾಗಿ ಸಾಲ ಮಾಡಿಕೊಂಡು ಈಗ ಪರದಾಡುತ್ತಿರುವವರಿಗೆ ವಾಸ್ತು ಶಾಸ್ತ್ರದಲ್ಲಿ ಪರಿಹಾರವೂ ಇದೆ. ಅದು ಹೇಗೆ ಎಂದು ಕೇಳುತ್ತೀರಾ ನಿಮ್ಮ ಮನೆಯಲ್ಲಿ ವಾಸ್ತು ಸರಿ ಇಲ್ಲದಿದ್ದರೂ ಸಾಲಗಳು ತಾವಾಗಿಯೇ ಮಾಡುವಂತಹ ಪರೀಸ್ಥಿತಿ ಎದುರಾಗುತ್ತದೆ.

ಅಂತಹವರಿಗಾಗಿಯೇ ಇಲ್ಲಿ ಕೆಲ ಟಿಪ್ಸ್ ಗಳನ್ನು ನೀಡಲಾಗಿದೆ. ಈ ವಾಸ್ತು ಶಾಸ್ತ್ರ ಪ್ರಕಾರ ಪಾಲಿಸಿದರೆ, ಕೆಲವೇ ದಿನಗಳಲ್ಲಿ ನೀವು ಸಾಲದಿಂದ ಮುಕ್ತಿಯನ್ನು ಪಡೆಯಬಹುದಾಗಿದೆ. ಟಿಪ್ಸ್ ಗಳು ಹೀಗಿವೆ:

ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ನೀವು ಭಾರವಾದ ಪೀಠೋಪಕರಣಗಳು ಅಥವಾ ವಸ್ತುಗಳನ್ನೇನಾದರೂ ಇರಿಸಿದ್ದರೆ ಮೊದಲು ಅದರ ಜಾಗವನ್ನು ಬದಲಾಯಿಸಿ. ಈದು ವಾಸ್ತುಗೆ ವಿರುದ್ಧವಾಗಿರುವುದರಿಂದ ನಿಮ್ಮ ಮನೆಯಲ್ಲಿ ಸಾಲ ಹೆಚ್ಚಾಗುತ್ತಿರುತ್ತದೆ.

ಇನ್ನು ಮನೆ ನಿರ್ಮಿಸುವಾಗ ನೀವು ಮಹಡಿಗೆ ಮೆಟ್ಟಿಲನ್ನು ಉತ್ತರ ದಿಕ್ಕಿನಲ್ಲಿ ಇಡಬಾರದು. ಇದು ಕೂಡ ವಾಸ್ತು ದೋಷವಾಗಿದೆ. ದಕ್ಷಿಣ ದಿಕ್ಕಿನಲ್ಲಿ ಮೆಟ್ಟಿಲುಗಳಿರುವುದು ಸೂಕ್ತ.

ಇನ್ನು ಮನೆಯಲ್ಲಿ ನೀರಿನ ಸಂಪ್, ಟ್ಯಾಂಕ್ ಅಥವಾ ಬೋರ್‌ ವೆಲ್‌ ಅನ್ನು ಯಾವುದೇ ಕಾರಣಕ್ಕೂ ನೈರುತ್ಯದಲ್ಲಿದ್ದರೆ ಸಾಲ ಹೆಚ್ಚಾಗುತ್ತದೆ.

ಇನ್ನು ಮನೆಯ ಆಗ್ನೇಯ ದಿಕ್ಕು ಸದಾ ಅಡುಗೆ ಮನೆಗೆ ಮೀಸಲಿರಬೇಕು. ಆಗ್ನೇಯ ದಿಕ್ಕು ಅಗ್ನಿ ದೇವನ ವಾಸಸ್ಥಾನವಾದ್ದರಿಂದ ಇಲ್ಲಿ ನೀವು ನೀರಿನ ಟ್ಯಾಂಕ್‌ ಇಟ್ಟಿದ್ದರೆ ಸಾಲ ಮಾಡುವುದು ಖಚಿತ.

ಮನೆಯ ಫ್ಲೋರಿಂಗ್‌ ಬಗ್ಗೆಯೂ ಇರಲಿ ಎಚ್ಚರ. ಯಾಕೆಂದರೆ ಮನೆಯ ಫ್ಲೋರಿಂಗ್‌ ಬಿರುಕು ಬಿಟ್ಟಿದ್ದರೆ, ನಿಮ್ಮ ಜೇಬಿಗೆ ಕತ್ತರಿ ಬಿದ್ದಂತೆ. ಎಷ್ಟು ದುಡಿದರೂ ಹಣ ಒಂದು ಪೈಸವೂ ನಿಲ್ಲುವುದಿಲ್ಲ. ಫ್ಲೋರಿಗ್‌ ಬಿರುಕು ಬಿಟ್ಟಿದ್ದರೆ, ಮೊದಲು ಅದನ್ನು ಮುಚ್ಚಿಸಿ. ಆಗ ನೋಡಿ ನೀವು ಸಾಲದಿಂದ ಹೇಗೆ ಮುಕ್ತಿ ಪಡೆಯುತ್ತೀರಿ ಎಂದು.

ಈಗಾಗಲೇ ಕಟ್ಟಿರುವ ಮನೆಯಲ್ಲಿ ನೈರುತ್ಯ ದಿಕ್ಕಿನಲ್ಲಿ ನೀರಿನ ಟ್ಯಾಮಕ್‌ ಇದ್ದರೆ ನೆಲದ ಮೇಲೆ ತಲೆಕೆಳಗಅಗುವಂತೆ ಕನ್ನಡಿಯನ್ನು ಇರಿಸಿ, ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

ಆದರೆ ನೆನಪಿಡಿ ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಮಾತ್ರ ಎಂದೂ ಕನ್ನಡಿಯನ್ನು ಇಡಬೇಡಿ. ಇದರಿಂದ ಸಾಲದ ಹೊರೆ ಹೆಚ್ಚಾಗುತ್ತದೆ.

ನಿಮ್ಮ ಮನೆಯಲ್ಲಿ ಮೇಲೆ ಹೇಳಿರುವ ಯಾವುದೇ ವಾಸ್ತು ದೋಷವಿದ್ದರೂ ಮೊದಲು ಸರಿ ಪಡಿಸಿಕೊಳ್ಳಿ ಆಗ ನಿಮ್ಮ ಮನೆಯು ಸಾಲದಿಂದ ಮುಕ್ತಿಯನ್ನು ಪಡೆಯುವುದಲ್ಲದೇ, ನೀವು ನೆಮ್ಮದಿಯಾಗಿಯೂ ಇರಬಹುದು.

Exit mobile version