Revenue Facts

ವಾಸ್ತುಶಾಸ್ತ್ರ ಪ್ರಕಾರ ಮನೆಯಲ್ಲಿ ದೇವರ ವಿಗ್ರಹಗಳನ್ನು ಮನೆಯಲ್ಲಿ ಹೇಗೆ ಇಡಬೇಕು

ವಾಸ್ತುಶಾಸ್ತ್ರ ಪ್ರಕಾರ ಮನೆಯಲ್ಲಿ ದೇವರ ವಿಗ್ರಹಗಳನ್ನು ಮನೆಯಲ್ಲಿ ಹೇಗೆ ಇಡಬೇಕು

ವಾಸ್ತುಶಾಸ್ತ್ರ ಎನ್ನುವದು ಎಲ್ಲರಿಗೂ ಪ್ರಮುಖವಾದ ಅಂಶ. ಹಾಗೆ ಮನೆಯ ವಿಚಾರದಲ್ಲಿ ವಾಸ್ತು ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಅದಕ್ಕೆ ಮನೆಯನ್ನು ವಾಸ್ತು ಪ್ರಕಾರ, ನೋಡಿ ಕಟ್ಟುವುದು. ಮನೆಯಲ್ಲಿ ನೆಲೆಸುವ ಅಥವಾ ಆರಾಧಿಸುವ ದೇವರಿಗೂ ವಾಸ್ತು ಮುಖ್ಯ ಎಂಬುದು ನಿಮಗೆ ತಿಳಿದಿದೆಯೇ?

ಮನೆಯಲ್ಲಿ ದೇವರನ್ನು ಹೇಗೆ ಇಡಬೇಕು ಎಲ್ಲಿ ಇಡಬೇಕು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಇವೆಲ್ಲವೂ ನಿಮ್ಮ ಮನೆಯ ಹಾಗೂ ಮನೆಯಲ್ಲಿರುವ ಜನರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಹಾಗೆ, ವಿಗ್ರಹ ಹೇಗಿರಬೇಕು? ಮನೆಯ ದೇವರು ಮನೆ ಯಾವ ದಿಕ್ಕಿಗೆ ಇರಬೇಕು? ಅವುಗಳನ್ನು ಹೇಗಿಡಬೇಕು ಎಂಬುದನ್ನು ನಾವು ಇಲ್ಲಿ ತಿಳಿದುಕೊಳ್ಳೋಣ.

ಈ ದಿಕ್ಕಿನಲ್ಲಿ ಫೋಟೋ ಇಡಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ಪೂಜೆಯ ಕೋಣೆಯ ಪೂರ್ವ ಅಥವಾ ಉತ್ತರ ಭಾಗದ ಗೋಡೆಯ ಮೇಲೆ ಯಾವುದೇ ದೇವರ ವಿಗ್ರಹ ಮತ್ತು ಚಿತ್ರವನ್ನು ಇಡುವುದು ಅವಶ್ಯವೆಂದು ಪರಿಗಣಿಸಲಾಗಿದೆ. ಉತ್ತರದ ಕಡೆಗೆ ದೇವರ ವಿಗ್ರಹ ಅಥವಾ ಚಿತ್ರವನ್ನು ಎಂದಿಗೂ ಇಡಬೇಡಿ. ಇದರಿಂದ ಆರಾಧಕರು ದಕ್ಷಿಣದ ಕಡೆಗೆ ಮುಖ ಮಾಡಬೇಕಾಗುತ್ತದೆ. ಇದು ಅಷ್ಟು ಒಳ್ಳೆಯದಲ್ಲ. ಜೊತೆಗೆ ದಕ್ಷಿಣ ದಿಕ್ಕಿನಲ್ಲಿ ದೇವರ ಮನೆಯನ್ನು ಎಂದಿಗೂ ನಿರ್ಮಾಣ ಮಾಡಬೇಡಿ

ದೇವರ ಬೆನ್ನುಅಥವಾ ಹಿಂಭಾಗ ನೋಡಬೇಡಿ
ದೇವರುಮನೆಯಲ್ಲಿ, ದೇವರ ವಿಗ್ರಹವನ್ನು ಎಂದಿಗೂ ಅದರ ಬೆನ್ನು ಕಾಣಿಸುವ ರೀತಿಯಲ್ಲಿ ಇಡಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗುವುದು. ಇದರಿಂದ ನಿಮಗೆ ಯಾವುದೇ ಒಳ್ಳೆಯದು ಆಗದು, ಜೊತೆಗೆ ಯಾವುದೇ ಉಪಯೋಗ ಸಿಗಲಾರದು. ಆದ್ದರಿಂದ, ನೀವು ಯಾವದೇ ಕಾರಣಕ್ಕೂ ದೇವರ ಬೆನ್ನನ್ನು ನೋಡಬಾರದು ಎಂಬುದನ್ನುಗಮನದಲ್ಲಿಡಿ

ಎರಡು ಅಥವಾ ಎರಡಕ್ಕಿಂತ ಹೆಚ್ಚು ಫೋಟೋಗಳನ್ನು ಇಡಬೇಡಿ
ನಮ್ಮಲ್ಲಿ ತುಂಬಾ ಜನರಿಗೆ ದೇವರ ಮನೆ ತುಂಬಾ ಭಿನ್ನಭಿನ್ನವಾದ ಫೋಟೋಗಳು, ವಿಗ್ರಹಗಳನ್ನು ಇಟ್ಟು ಪೂಜಿಸುವ ಪದ್ದತಿಯಿದೆ. ಆದರೆ ಇದು ಸೂಕ್ತವಾದದ್ದಲ್ಲ. ನಿಮ್ಮ ದೇವರ ಮನೆಯಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಗಣೇಶನ ವಿಗ್ರಹಗಳನ್ನು ಇಡದಂತೆ ವಿಶೇಷ ಮುತುವರ್ಜಿ ವಹಿಸಿ. ಇದನ್ನು ಅಶುಭವೆಂದು ಪರಿಗಣಿಸಲಾಗುವುದು. ಅಷ್ಟೇಅಲ್ಲದೆ, ಒಂದೇ ದೇವರ ಎರಡು ವಿಗ್ರಹಗಳನ್ನು ಎರಡು ಬೇರೆಬೇರೆ ಸ್ಥಳಗಳಲ್ಲಿ ಇಡಬಾರದು. ಇದು ಕೂಡ ವಾಸ್ತು ಪ್ರಕಾರ, ಅಶುಭದ ಪ್ರತೀಕ ಎನ್ನಲಾಗುವುದು

ಭಯಂಕರವಾದ ವಿಗ್ರಹಗಳನ್ನುಪ್ರತಿಷ್ಠಾಪಿಸಬೇಡಿ
ಯುದ್ಧದ ಸಂದರ್ಭವನ್ನು ತೋರಿಸುವ ಚಿತ್ರವನ್ನು ದೇವರಕೋಣೆಯಲ್ಲಿ ಇಡದಂತೆ, ಸಂಪೂರ್ಣವಾದ ಗಮನ ವಹಿಸಬೇಕು. ಇದು ಮನೆಯಲ್ಲಿ ಯುದ್ಧದ ಅಥವಾ ಗದ್ದಲ ಸನ್ನಿವೇಶವನ್ನುಸೃಷ್ಟಿಮಾಡಬಹುದು. ಆದ್ದರಿಂದ ಮನೆಯಲ್ಲಿ ಯಾವಾಗಲು ಧನಾತ್ಮಕ ಶಕ್ತಿ ಉಳಿಯುವಂತೆ ಮಾಡುವಂತಹ ಶಾಂತ ರೂಪದ ದೇವರ ವಿಗ್ರಹಗಳನ್ನು ಇಡಿ.

 

Exit mobile version