Revenue Facts

ದೇವರ ಕೋಣೆ ಅಗತ್ಯವಾಗಿ ಈಶಾನ್ಯ ದಿಕ್ಕಿನಲ್ಲಿ ಇರಬೇಕೇ..?

ದೇವರ ಕೋಣೆ ಅಗತ್ಯವಾಗಿ ಈಶಾನ್ಯ ದಿಕ್ಕಿನಲ್ಲಿ ಇರಬೇಕೇ..?

ಬೆಂಗಳೂರು, ಏ. 17 : ದೇವರ ಮನೆ ಈಶಾನ್ಯದಲ್ಲಿ ಇರಲಿ ಎಂದು ಸಾಮಾನ್ಯವಾಗಿ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇಲ್ಲವೇ ಬ್ರಹ್ಮಸ್ಥಾನವನ್ನು ಪ್ರವೇಶಿಸುವಂತೆ ಇದ್ದರೂ ಸೂಕ್ತ. ಇದೆರಡೂ ಸ್ಥಳದಲ್ಲಿ ದೇವರ ಮನೆ ಇರಬೇಕು ಎಂದು ಹೇಳಲಾಗುತ್ತದೆ. ಆದರೆ, ಈಶಾನ್ಯ ದಿಕ್ಕಿನಲ್ಲೇ ದೇವರ ಮನೆ ಇರಬೇಕು ಎಂದೇನೂ ಇಲ್ಲ. ದೇವರು ಸರ್ವಾಂತರ್ಯಾಮಿ ಆಗಿರುವುದರಿಂದ ದೇವರ ಮನೆಯನ್ನು ಯಾವ ದಿಕ್ಕಿನಲ್ಲಾದರೂ ಇಡಬಹುದು. ಆದರೆ, ಸಮಸ್ಯೆ ಏನಾಗುತ್ತದೆ ಎಂದರೆ, ದೇವರ ಮನೆಯನ್ನು ಆಗ್ನೇಯದಲ್ಲಿ ಇಟ್ಟರೆ, ಅಡುಗೆ ಮನೆಯನ್ನು ಬೇರೆ ದಿಕ್ಕಿಗೆ ಇಡಬೇಕಾಗುತ್ತದೆ.

ಹಾಗಾಗಿ ಸಾಮಾನ್ಯವಾಗಿ ಈಶಾನ್ಯ ದಿಕ್ಕಿನಲ್ಲಿ ದೇವರ ಮನೆಯನ್ನು ಇಡಲಾಗುತ್ತದೆ. ಮನೆಯ ಜಾಗ ಉದ್ದ ಇದ್ದಾಗ, ದೇವರ ಮನೆಯನ್ನು ಪೂರ್ವದಲ್ಲೋ ಅಥವಾ ಉತ್ತರದಲ್ಲೂ ಇಡಬಹುದು. ದಕ್ಷಿಣದ ಕಡೆಗೆ ಪೂರ್ವಾಭಿ ಮುಖವಾಗಿ ದೇವರ ಮನೆಯನ್ನು ಇಟ್ಟುಕೊಂಡರೂ ಕೂಡ ತೊಂದರೆ ಇರುವುದಿಲ್ಲ. ಹಾಗಾಗಿ ದೇವರ ಮನೆಗೆ ಈಶಾನ್ಯದಲ್ಲಿ ಮಾತ್ರವೇ ಇಡಬೇಕು ಎಂಬುದೇನಿಲ್ಲ. ಅನುಕೂಲಕ್ಕೆ ತಕ್ಕಂತೆ ಯಾವ ದಿಕ್ಕಿನಲ್ಲಾದರೂ ಮಾಡಬಹುದು.

ಪೂಜಾ ಕೊಠಡಿಯಲ್ಲಿ ಕುಳಿತು ಪೂಜೆ ಮಾಡುವಾಗ ದೇವರು ಪೂರ್ವ ದಿಕ್ಕನ್ನು ನೋಡಬೇಕು. ಇಲ್ಲವೇ ಪಶ್ಚಿಮ ದಿಕ್ಕಿನ ಕಡೆಗೆ ದೇವರು ಮುಖ ಮಾಡಿರಬೇಕು. ಅಂದರೆ ನೀವು ಪೂಜೆಗೆ ಕುಳಿತಾಗ ದೇವರು ಪಶ್ಚಿಮವನ್ನ ನೋಡುತ್ತಿದ್ದರೆ, ನಾವು ದೇವರ ಎದುರಿಗೆ ಕುಳಿತು ಪೂಜೆಯನ್ನ ಮಾಡಬಹುದು. ಇನ್ನು ದೇವರು ಪೂರ್ವವನ್ನು ನೋಡುತ್ತಿದ್ದರೆ, ದಕ್ಷಿಣದಲ್ಲಿ ಕುಳಿತು ಅಂದರೆ, ಉತ್ತರಾಭಿಮುಖವಾಗಿ ನಮ್ಮ ಎಡಕ್ಕೆ ದೇವರು ಇರಬಹುದು. ದೇವರು ಯಾವಾಗಲೂ ಪೂರ್ವ ಅಥವಾ ಪಶ್ಚಿಮ ದಿಕ್ಕನ್ನು ನೋಡಬಹುದು. ಹಾಗೆ ನಾವು ಮನುಷ್ಯರು ಪೂರ್ವ ಅಥವಾ ಪಶ್ಚಿಮ ದಿಕ್ಕನ್ನು ನೋಡುತ್ತಾ ಪೂಜೆ ಮಾಡಬಹುದು.

Exit mobile version