Revenue Facts

ಮನೆಯಲ್ಲಿ ಸ್ಕೈ ಲೈಟ್ ಯಾವ ದಿಕ್ಕಿನಲ್ಲಿರಬೇಕು..?

ಮನೆಯಲ್ಲಿ ಸ್ಕೈ ಲೈಟ್ ಯಾವ ದಿಕ್ಕಿನಲ್ಲಿರಬೇಕು..?

ಬೆಂಗಳೂರು, ಮಾ. 30 : ಮನೆಯನ್ನು ನಿರ್ಮಾಣ ಮಾಡುವಾಗ ಈಗ ಹೊಸ ಟ್ರೆಂಡ್ ಶುರುವಾಗಿದೆ. ಮನೆಯ ಒಳಗಡೆಗೆ ಸ್ಕೈ ಲೈಟ್ ಅನ್ನು ಅಳವಡಿಸಿಕೊಳ್ಳುತ್ತಾರೆ. ಸ್ಕೈ ಲೈಟ್ ಎಂದರೆ, ಸೂರ್ಯನ ಬೆಳಕನ್ನು ಮನೆಯ ಒಳಗಡೆ ಬರುವಂತೆ ಮಾಡಲು ರೂಫ್ ನಲ್ಲಿ ಜಾಗ ಮಾಡಿ ಗ್ಲಾಸ್ ಅನ್ನು ಅಳವಡಿಸಲಾಗುತ್ತದೆ. ಇದು ಈಗ ಸಾಮಾನ್ಯವಾಗಿದ್ದು, ಯಾವ ದಿಕ್ಕಿನಲ್ಲಿದ್ದರೆ, ಚೆಂದ ಎಂಬುದನ್ನು ನೋಡೋಣ ಬನ್ನಿ.

ಸೂರ್ಯನ ಬೆಳಕನ್ನು ಮನೆಗೆ ಬರುವುದು ಶುಭವೇ. ಆದರೆ, ಯಾವ ದಿಕ್ಕಿನೀಮದ ಬೆಳಕು ಮನೆಯ ಒಳಗೆ ಪ್ರವೇಶ ಮಾಡುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ. ದಕ್ಷಿಣದಲ್ಲೋ ಅಥವಾ ಪಶ್ಚಿಮದಲ್ಲೋ ಸ್ಕೈ ಲೈಟ್ ಅನ್ನು ಅಳವಡಿಸಿಕೊಂಡರೆ, ಅದು ಅಶುಭ ಎಂದು ಹೇಳಲಾಗುತ್ತದೆ. ದಕ್ಷಿಣ ಹಾಗೂ ಪಶ್ಚಿಮದ ಕಡೆ ಇರಬಾರದು. ಇನ್ನು ಸೂರ್ಯನ ಕಿರಣಗಳು ಮಧ್ಯಾಹ್ನದ ಮೇಲೆ ಇನ್ಫ್ರಾರೆಡ್ ರೇಸ್ ಬರುವುದರಿಂದ ಇದು ಮನುಷ್ಯನ ದೇಹಕ್ಕೆ ಅನಾರೋಗ್ಯವನ್ನು ತಂದೊಡ್ಡುತ್ತದೆ ಎಂದು ಹೇಳಲಾಗಿದೆ. ಹಾಗಾಗಿ ದಕ್ಷಿಣ ಮತ್ತು ಪಶ್ಚಿಮದಲ್ಲಿ ಸ್ಕೈ ಲೈಟ್ ಅನ್ನು ಅಳವಡಿಸಿಕೊಳ್ಳಬಾರದು.

ಇನ್ನು ಬ್ರಹ್ಮಸ್ಥಾನದಲ್ಲೋ, ಪೂರ್ದಲ್ಲೋ ಇಲ್ಲವೇ ಈಶಾನ್ಯದಲ್ಲೋ ಸ್ಕೈ ಲೈಟ್ ಅನ್ನು ಇಟ್ಟುಕೊಳ್ಳಬಹುದು. ಸ್ಕೈ ಲೈಟ್ ಓಪನಿಂಗ್ ಅನ್ನು ಆದಷ್ಟು ಉತ್ತರದಲ್ಲಿ ಇಟ್ಟುಕೊಳ್ಳುವುದು ಅವಾಯ್ಡ್ ಮಾಡಬೇಕು. ಇನ್ನು ಇದು ಆದಷ್ಟು ಬ್ರಹ ಸ್ಥಾನದಲ್ಲಿ ಸ್ಕೈ ಲೈಟ್ ಅನ್ನು ಇಟ್ಟುಕೊಂಡರೆ, ಮನೆಯ ಮಧ್ಯ ಭಾಗದಲ್ಲಿ ಸೂರ್ಯನ ಬೆಳಕು ಬರುವುದು ಒಳ್ಳೆಯದು.

ಕೆಲವರು ಪೂಜಾ ರೂಮ್ ನಲ್ಲೀ ಸ್ಕೈ ಲೈಟ್ ಅನ್ನು ಇಟ್ಟುಕೊಳ್ಳುತ್ತಾರೆ. ಈಶಾನ್ಯದಲ್ಲಿ ಪೂಜಾ ರೂಮ್ ಅನ್ನು ಇಟ್ಟು ಅಲ್ಲಿ ಸ್ಕೈಲೈಟ್ ಅನ್ನು ಇಟ್ಟುಕೊಳಳಬಹುದು. ಇನ್ನು ಕೆಲವರು ನಾರ್ತ್-ಈಸ್ಟ್ ನಲ್ಲೂ ಕೂಡ ಪೂಜಾ ರೂಮ್ ಅನ್ನು ಇಟ್ಟುಕೊಳ್ಳಬಹುದು. ಆದರೆ, ಇಲ್ಲಿ ಸ್ಕೈ ಲೈಟ್ ಇಡುವಾಗ, ಕೆಲವರು ಕಟ್ ಮಾಡುತ್ತಾರೆ. ಅದು ಶುಭವಲ್ಲ. ಅದರ ಬದಲು ಸ್ಲೋಪ್ ಮಾದರಿಯಲ್ಲಿ ಸ್ಕೈ ಲೈಟ್ ಅನ್ನು ಇಟ್ಟರೆ ಅದು ಒಳ್ಳೆಯದು. ಸ್ಕೈ ಲೈಟ್ ಅನ್ನು ಮಧ್ಯದಲ್ಲಿ ಖಾಲಿ ಬಿಟ್ಟುಕೊಮಡು, ಮೇಲೆ ರೂಫ್ ನಲ್ಲಿ ಓಪನ್ ಬಿಡಲಾಗುತ್ತದೆ.

ಇನ್ನು ಕೆಲವರು ಸ್ಕೈ ಲೈಟ್ ಅನ್ನು ಹಾಕುವರು ಕೆಲವರು ಕಲರ್ ಅನ್ನು ಹಾಕುತ್ತಾರೆ. ಇದು ಶುಭವಲ್ಲ. ಆದಷ್ಟು ಪ್ಲೈನ್ ಗ್ಲಾಸ್ ಅನ್ನು ಹಾಕುವುದು ಉತ್ತಮ. ಕಲರ್ ರೂಫ್ ಅನ್ನು ಹಾಕಿದಾಗ ಸಮಸ್ಯೆ ಗಳಿಗೆ ಸ್ಥಳವಾಗುತ್ತದೆ. ಯಾಕೆಂದರೆ, ಕೆಂಪು ಬಣ್ಣ ಇದ್ದರೆ, ಅಲ್ಲಿ ಅಗ್ನಿಯಂತಹ ಸಮಸ್ಯೆಗಳು ಉದ್ಭವವಾಗುವ ಸಾಧ್ಯತೆ ರುತ್ತದೆ. ಹೀಗೆ ನೀಲಿ, ಹಳದಿ ಯಾವುದೇ ಬಣ್ಣವು ಸೂಕ್ತವಲ್ಲ. ಅದರ ಬದಲು ಸೂರ್ಯನ ಬೆಳಕು ನೇರವಾಗಿ ಗ್ಲಾಸ್ ಮೂಲಕ ಯಾವುದೇ ಬಣ್ಣವಿಲ್ಲದೇ ಬರುವುದು ಒಳ್ಳೆಯದು.

Exit mobile version