Revenue Facts

ಮನೆಯ ಕಾಂಪೌಂಡ್ ಗೆ ಗೇಟ್ ಗಳು ಎಲ್ಲೆಲ್ಲಿ ಇರಬೇಕು..?

ಮನೆಯ ಕಾಂಪೌಂಡ್ ಗೆ ಗೇಟ್ ಗಳು ಎಲ್ಲೆಲ್ಲಿ ಇರಬೇಕು..?

ಬೆಂಗಳೂರು, ಮಾ. 31 : ಗೇಟ್ ಅನ್ನು ಅಳವಡಿಸುವಾಗ ವಾಸ್ತುವನ್ನು ನೋಡುವುದು ಬಹಳ ಮುಖ್ಯವಾಗುತ್ತದೆ. ಪದ ವಾಸ್ತು ಪ್ರಕಾರ, ದಕ್ಷಿಣ ದಲ್ಲಿ 3-4 ಪದಗಳು, ಪೂರ್ವದಲ್ಲಿ 3-4 ಪದಗಳು, ಪಶ್ಚಿಮದಲ್ಲಿ 4-5 ಪದಗಳು, ಉತ್ತರದಲ್ಲಿ 3-4-5 ಪದಗಳಲ್ಲಿ ಗೇಟ್ ಅನ್ನು ಅಳವಡಿಸಿಕೊಳ್ಳಬಹುದು. ಇಲ್ಲವೇ, ಉಚ್ಛಸ್ಥಾನಗಳಲ್ಲಿ ಅಳವಡಿಸಿದರೆ ಉತ್ತಮ. ಪೂರ್ವ ಈಶಾನ್ಯ, ಉತ್ತರ ಈಶಾನ್ಯ, ದಕ್ಷಿಣ ಆಗ್ನೇಯ, ಪಶ್ಚಿಮ ವಾಯುವ್ಯ ಉಚ್ಛಸ್ಥಾನಗಳಾಗಿವೆ. ಇಲ್ಲಿಯೂ ಕೂಡ ಗೇಟ್ ಗಳನ್ನು ಇಟ್ಟುಕೊಳ್ಳಬಹುದು.

ಈ ಎರಡೂ ಪದ್ಧತಿಯಲ್ಲಿ ಯಾವುದಾದರೂ ಒಂದು ಪದ್ಧತಿಯ ಪ್ರಕಾರ ಗೇಟ್ ಗಳನ್ನು ಇಟ್ಟುಕೊಳ್ಳಬಹುದು. ಇನ್ನು ಈಗ ಹೆಚ್ಚಿನ ಜನರು, ಉಚ್ಛಸ್ಥಾನದಲ್ಲಿ ಗೇಟ್ ಗಳನ್ನು ಇಟ್ಟುಕೊಳ್ಳುತ್ತಾರೆ. ಇದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಉಚ್ಛಸ್ಥಾನದಲ್ಲಿ ಗೇಟ್ ಅನ್ನು ಇಡುವಾಗ ದೊಡ್ಡದಾಗಿ ಗೇಟ್ ಅನ್ನು ಇಡಬೇಕೆಂದರೆ, ಪೂರ್ವದಲ್ಲೋ ಅಥವಾ ಉತ್ತರದಲ್ಲೋ ಉಚ್ಛಸ್ಥಾನದಲ್ಲಿ ಗೇಟ್ ಗಳನ್ನು ಇಟ್ಟುಕೊಳ್ಳುವುದಕ್ಕೆ ಸ್ಥ ಸಿಗುತ್ತದೆ. 15 ರಿಂದ 20 ಅಡಿ ಅಗಲದ ಗೇಟ್ ಅನ್ನು ಇಟ್ಟುಕೊಳ್ಳುತ್ತಾರೆ.

ಸ್ಲೈಡೀಂಗ್ ಗೇಟ್, ಶಟರ್ ಗೇಟ್ ಗಳನ್ನು ಕೆಲವರು ಇಟ್ಟುಕೊಳ್ಳುತ್ತಾರೆ. ಆದರೆ, ಇದನ್ನು ಮಧ್ಯಭಾಗದಲ್ಲಿ ಇಡಬಾರದು. ಆದಷ್ಟು ಎಷ್ಟು ಸಾಧ್ಯವೋ ಅಷ್ಟು ಗೇಟ್ ಅನ್ನು ಉಚ್ಛಸ್ಥಾನದಲ್ಲಿ ಹಾಕಿಕೊಳ್ಳಬೇಕಾಗುತ್ತದೆ. ಅಥವಾ ಜಾಗ ಸಾಕಾಗುವುದಿಲ್ಲ ಎಂದು ಇದ್ದರೆ, ಎರಡು ಗೇಟ್ ಅನ್ನು ಹಾಕಿಕೊಳ್ಳಬಹುದು. ಈ ಸಂದರ್ಭದಲ್ಲಿ ಪೂರ್ವದಲ್ಲಿ ಎರಡು ಗೇಟ್ ಅನ್ನು ಇಟ್ಟರೆ, ಮೊದಲು ಈಶಾನ್ಯ ಗೇಟ್ ಅನ್ನು ಓಪನ್ ಮಾಡಬೇಕು. ನಂತರ ಪೂರ್ವ ಆಗ್ನೇಯದಲ್ಲಿನ ಗೇಟ್ ಅನ್ನು ತೆರೆಯಬೇಕು. ಇನ್ನು ಕ್ಲೋಸ್ ಮಾಡುವಾಗ ಮೊದಲು ಪೂರ್ವ ಆಗ್ನೇಯ ಮುಚ್ಚಿ ನಂತರ ಪೂರ್ವ ಈಶಾನ್ಯ ಗೇಟ್ ಅನ್ನು ಕ್ಲೋಸ್ ಮಾಡಬೇಕು.

ಹಾಗೆಯೇ ದಕ್ಷಿಣ ಆಗ್ನೇಯ ಗೇಟ್ ಅನ್ನು ಮೊದಲು ತೆರೆ, ದಕ್ಷಿಣ ನೈರುತ್ಯದಲ್ಲಿರುವುದನ್ನು ತೆರೆಯಬೇಕು. ಮುಚ್ಚುವಾಗ ವೈಸ್ ವರ್ಸ ಮುಚ್ಚಬೇಕು. ಇನ್ನು ಗೇಟ್ ಅನ್ನು ಸದಾ ತೆರೆದಿಡಬೇಕೆಂದರೆ, ಉಚ್ಛಸ್ಥಾನದ ಗೇಟ್ ಗಳನ್ನು ತೆಗೆದಿಟ್ಟರೆ ಒಳ್ಳೆಯದು. ಇನ್ನು ಗೇಟ್ ಗಳಿಗೆ ಫೈರಿ ಸ್ಪೈಕ್ಸ್ ಗಳನ್ನು ಮಾಡುವುದು ಶುಭವಲ್ಲ. ಇನ್ನು ಮೂರು, ಐದು ಸ್ಲ್ಯಾಬ್ಸ್ ಗಳನ್ನು ಇಟ್ಟುಕೊಳ್ಳುವುದು ಸರಿಯಲ್ಲ.

Exit mobile version