ಬೆಂಗಳೂರು, ಆ. 23: ದಕ್ಷಿಣಾಭಿಮುಖವಾಗಿ ಇರುವ ಆಸ್ತಿಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಖಾತ್ರಿಪಡಿಸುವಲ್ಲಿ ವಾಸ್ತು ಶಾಸ್ತ್ರ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ದಕ್ಷಿಣಾಭಿಮುಖವಾದ ಮನೆಯಲ್ಲಿ ವಾಸ ಮಾಡುವವರಿಗೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಆದ್ದರಿಂದ ಮನೆ ಮಾಲೀಕರು ಮುಖ್ಯ ದ್ವಾರದ ನಿಯೋಜನೆ ಮತ್ತು ವಿನ್ಯಾಸದ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸುದು ಸೂಕ್ತ. ಮನೆ ನಿರ್ಮಿಸುವಾಗ ವಾಸ್ತು ನಿಯಮಗಳ ಪ್ರಕಾರ ಆಸ್ತಿಯ ಉದ್ದ ಮತ್ತು ಅಗಲವನ್ನು ಒಂಬತ್ತು ಸಮಾನ ಭಾಗಗಳಾಗಿ ವಿಂಗಡಿಸಬೇಕು.
ದಕ್ಷಿಣಾಭಿಮುಖ ಇರುವ ಸ್ಥಳದಲ್ಲಿ ಮನೆ ಕಟ್ಟುವವರು ಗಮನಿಸಲೇಬೇಕಾದ ವಿಷಯಗಳು ಯಾವುವು ಎಂದು ನೋಡೋಣ ಬನ್ನಿ. ದಕ್ಷಿಣಾಭಿಮುಖ ಆಸ್ತಿ ಇರುವ ಮನೆಯಲ್ಲಿ ಆಗ್ನೇಯ ಮೂಲೆಯಲ್ಲಿ ಧನಾತ್ನಕ ಶಕ್ತಿ ಇರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಮನೆಯ ಪ್ರವೇಶ ದ್ವಾರವು ಇಡೀ ಮನೆಯಲ್ಲಿರುವ ಇತರೆ ಬಾಗಿಲುಗಳಿಗಿಂತಲೂ ದೊಡ್ಡದಾಗಿರಬೇಕು. ದಕ್ಷಿಣದ ಅಪಾರ್ಟ್ಮೆಂಟ್ ವಾಸ್ತು ಯೋಜನೆಯಲ್ಲಿ ಪ್ರದಕ್ಷಿಣಾಕಾರವಾಗಿ ಒಳಮುಖವಾಗಿ ತೆರೆಯಬೇಕು. ವಾಸ್ತು ತಜ್ಞರು ಪ್ರವೇಶದ್ವಾರದಲ್ಲಿ ಹೊಸ್ತಿಲನ್ನು ನಿರ್ಮಿಸಲು ಸೂಚಿಸುತ್ತಾರೆ.
ಇದನ್ನು ಬಹುತೇಕರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ವಾಸ್ತುವನ್ನು ಮೀರಿದರೆ ಸಮಸ್ಯೆಗಳು ಎದುರಾಗಬಹುದು. ಉತ್ತರ ಭಾಗದಲ್ಲಿರುವುದಕ್ಕಿಂತ ದಕ್ಷಿಣದ ಭಾಗದಲ್ಲಿ ಗೋಡೆಗಳನ್ನು ಎತ್ತರದಲ್ಲಿ ಇಡುವುದನ್ನು ಸಹ ಧನಾತ್ಮಕವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ಮುಖದ ಮನೆಯಲ್ಲಿ ವಾಟರ್ ಕೂಲರ್ನಂತಹ ನೀರಿನ ಉಪಕರಣಗಳು ಅಥವಾ ಯಂತ್ರೋಪಕರಣಗಳು ನೈಋತ್ಯ ಪ್ರದೇಶದಲ್ಲಿರಲಿ. ದಕ್ಷಿಣದಲ್ಲಿ ಪಾರ್ಕಿಂಗ್ ಸ್ಥಳ. ನೈಋತ್ಯ ಪ್ರದೇಶದಲ್ಲಿ ಅಡುಗೆ ಮನೆ. ಉತ್ತರಕ್ಕಿಂತ ದಕ್ಷಿಣದಲ್ಲಿ ಹೆಚ್ಚು ತೆರೆದ ಸ್ಥಳ ಇದ್ದರೆ ಉತ್ತಮ.
ದಕ್ಷಿಣಾಭಿಮುಖವಾಗಿ ಪೂಜಾ ಕೋಣೆ :
ದಕ್ಷಿಣ ದಿಕ್ಕಿನ ಮನೆ ವಾಸ್ತು ಯೋಜನೆಯ ಪ್ರಕಾರ, ನಿಮ್ಮ ಮನೆಯ ಈಶಾನ್ಯ ಭಾಗವು ಲಿವಿಂಗ್ ರೂಮ್ ನಿರ್ಮಿಸಲು ಸೂಕ್ತವಾಗಿರುತ್ತದೆ. ದಕ್ಷಿಣಾಭಿಮುಖವಾಗಿರುವ ಮನೆಗೆ ಈಶಾನ್ಯ ದಿಕ್ಕು ಪೂಜಾ ಕೊಠಡಿಯನ್ನು ನಿರ್ಮಿಸಲು ಸೂಕ್ತವಾದ ಆಯ್ಕೆಯಾಗಿದೆ. ಸ್ಥಳಾವಕಾಶದ ಕೊರತೆಯಿದ್ದರೆ ಮತ್ತು ಪ್ರತ್ಯೇಕ ಪೂಜಾ ಕೊಠಡಿಯನ್ನು ನಿರ್ಮಿಸಲು ಸಾಧ್ಯವಾಗದಿದ್ದಲ್ಲಿ, ನಿಮ್ಮ ಕೋಣೆಯ ಒಂದು ಭಾಗವನ್ನು ಮೀಸಲಿಡಬಹುದು.
ಮಾಸ್ಟರ್ ಬೆಡ್ ರೂಂ :
ದಕ್ಷಿಣ ದಿಕ್ಕಿನ ಮನೆಐ ವಾಸ್ತು ಪ್ರಕಾರ, ಮಾಸ್ಟರ್ ಬೆಡ್ರೂಮ್ಗೆ ಸೂಕ್ತವಾದ ಸ್ಥಳವೆಂದರೆ ಅದು ನೈಋತ್ಯ ದಿಕ್ಕು. ಮನೆ ಬಹುಮಹಡಿಯದ್ದಾಗಿದ್ದರೆ, ಮೇಲಿನ ಮಹಡಿಯಲ್ಲಿ ಮಾಸ್ಟರ್ ಬೆಡ್ರೂಮ್ ಅನ್ನು ನಿರ್ಮಿಸಬೇಕು ಎಂದು ವಾಸ್ತು ನಿಯಮಗಳು ಹೇಳುತ್ತವೆ. ಇದರಿಂದ ಮನೆಯ ಏಳಿಗೆಗೆ ಸಹಾಯವಾಗುತ್ತದೆ.
ಅಡುಗೆ ಮನೆ :
ವಾಸ್ತು ತಜ್ಞರ ಪ್ರಕಾರ, ಅಡುಗೆ ಮನೆ ನಿರ್ಮಿಸಲು ಮನೆಯಲ್ಲಿ ಸೂಕ್ತವಾದ ಸ್ಥಳವೆಂದರೆ ದಕ್ಷಿಣ ದಿಕ್ಕಿನ ಆಗ್ನೇಯ ಮೂಲೆ. ಅಡುಗೆ ಮಾಡುವಾಗ, ನೀವು ಪೂರ್ವಕ್ಕೆ ಮುಖ ಮಾಡಬೇಕು. ಇದು ದಿನವಿಡೀ ಸೂರ್ಯನ ಬೆಳಕು ಬೀರುವುದನ್ನು ಖಚಿತಪಡಿಸಿಕೊಂಡು ನಿರ್ಮಿಸಬೇಕು. ಇಲ್ಲವೇ ಅಡುಗೆಮನೆಗೆ ಎರಡನೇ ಅತ್ಯುತ್ತಮ ಸ್ಥಳವೆಂದರೆ ವಾಯುವ್ಯ ದಿಕ್ಕು. ನಿಮ್ಮ ವಾಯಿವ್ಯ ದಿಕ್ಕಿನಲ್ಲಿ ಅಡುಗೆ ಮನೆ ಇದ್ದರೆ, ಅಡುಗೆ ಮಾಡುವಾಗ ನೀವು ಪಶ್ಚಿಮಕ್ಕೆ ಮುಖ ಮಾಡುವಂತಿರಲಿ.
ಮಕ್ಕಳ ಕೋಣೆ :
ನಿಮ್ಮ ಮಕ್ಕಳು ಮಲಗುವ ಕೋಣೆ ವಾಯುವ್ಯ ಭಾಗದಲ್ಲಿ ನಿರ್ಮಿಸಬೇಕು. ಇದು ಸಾಧ್ಯವಾಗದಿದ್ದರೆ, ಈ ಕೋಣೆಯನ್ನು ನಿರ್ಮಿಸಲು ನೀವು ದಕ್ಷಿಣ ಅಥವಾ ಪಶ್ಚಿಮ ಭಾಗಗಳ ನಡುವೆ ಆಯ್ಕೆ ಮಾಡಬಹುದು. ಅತಿಥಿಗಳ ಕೋನೆಯೂ ಸಹ ವಾಯುವ್ಯ ದಿಕ್ಕಿನಲ್ಲಿದ್ದರೆ ಸೂಕ್ತವೆಂದು ಶಾಸ್ತ್ರ ಹೇಳುತ್ತದೆ.