Revenue Facts

Vastu Shastra: ವಾಸ್ತು ಶಾಸ್ತ್ರದ ಈ ನಿಯಮಗಳು , ಯಾವ ವಸ್ತುವನ್ನು ಯಾವ ದಿಕ್ಕಿನಲ್ಲಿ ಇರಿಸಬೇಕು ,

ಬೆಂಗಳೂರು;ವಾಸ್ತು ಪ್ರಕಾರ , ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವೂ ಮಹತ್ವ ಪಡೆಯುತ್ತದೆ.ವ್ಯಕ್ತಿ ವಾಸ್ತು ಶಾಸ್ತ್ರದ(Vastu shastra) ನಿಯಮಗಳನ್ನು ಪಾಲಿಸುವುದು ತುಂಬಾ ಮುಖ್ಯ. ಇದನ್ನು ಮಾಡದಿದ್ದರೆ, ಕಠಿಣ ಪರಿಶ್ರಮದ ಹೊರತಾಗಿಯೂ ಯಶಸ್ಸು ಲಭಿಸುವುದಿಲ್ಲ. ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಮನೆಯನ್ನು ಕಟ್ಟುವಾಗ ಅಥವಾ ಮನೆಯಲ್ಲಿ ವಸ್ತುಗಳನ್ನು ಇಡುವಾಗ, ಕೋಣೆಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸಬೇಕು ಅಥವಾ ಮಾಡಬೇಕು.ಜೀವನದ ಯಶಸ್ಸು, ಧನಾತ್ಮಕ ಹಾಗೂ ನಕಾರಾತ್ಮಕ ಶಕ್ತಿ, ಸಂಪತ್ತು ವೃದ್ಧಿ, ಅನಾರೋಗ್ಯ ಸೇರಿದಂತೆ ಎಲ್ಲದಕ್ಕೂ ಮನೆಯ ವಾಸ್ತು ಕಾರಣವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಬೀರುವನ್ನು(cupboard) ಕೂಡ ಸರಿಯಾದ ದಿಕ್ಕಿನಲ್ಲಿ ಇಡಬೇಕು. ಬೀರು ತಪ್ಪಾದ ಸ್ಥಳದಲ್ಲಿದ್ದರೆ ಹಣದ ಸಮಸ್ಯೆ(Money problem) ಎದುರಾಗುತ್ತದೆ.ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ನಾವು ಮನೆ ಕಟ್ಟುವಾಗ ಅಥವಾ ಯಾವುದೇ ವಸ್ತುಗಳನ್ನ ಇಡುವಾಗ ದಿಕ್ಕುಗಳ ಅನುಸಾರ ನಿರ್ಧಾರ ಮಾಡುತ್ತೇವೆ. ಇದರಿಂದ ನಮಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ.

ಯಾವ ವಸ್ತುವನ್ನು ಯಾವ ದಿಕ್ಕಿನಲ್ಲಿ ಇರಿಸಬೇಕು ,

*ಮನೆಯಲ್ಲಿರುವ ಬೀರುವನ್ನು ನೀವು ಉತ್ತರ ದಿಕ್ಕಿಗೆ ಇಡಬಹುದು. ಇದು ಕುಬೇರನ ದಿಕ್ಕಾಗಿದೆ. ಉತ್ತರ ದಿಕ್ಕಿನಲ್ಲಿ ಹಣವಿಡುವ ಅಥವಾ ಬಂಗಾರವಿಡುವ ಬೀರುವನ್ನು ಇಟ್ಟರೆ ಸಂಪತ್ತು ಸುರಕ್ಷಿತವಾಗಿರುವ ಜೊತೆಗೆ ಸಂಪತ್ತಿನ ವೃದ್ಧಿಯಾಗುತ್ತದೆ.ಮನೆಯಲ್ಲಿರುವ ಬೀರುವನ್ನು(cupboard) ನೀವು ಉತ್ತರ ದಿಕ್ಕಿಗೆ ಇಡಬಹುದು. ಇದು ಕುಬೇರನ ದಿಕ್ಕಾಗಿದೆ. ಉತ್ತರ ದಿಕ್ಕಿನಲ್ಲಿ ಹಣವಿಡುವ ಅಥವಾ ಬಂಗಾರವಿಡುವ ಬೀರುವನ್ನು ಇಟ್ಟರೆ ಸಂಪತ್ತು ಸುರಕ್ಷಿತವಾಗಿರುವ ಜೊತೆಗೆ ಸಂಪತ್ತಿನ ವೃದ್ಧಿಯಾಗುತ್ತದೆ.

*ವಾಸ್ತು ಪ್ರಕಾರ, ಪೊರಕೆಯನ್ನು(broom) ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡುವುದು ಒಳ್ಳೆಯದು ಎನ್ನಲಾಗುತ್ತದೆ. ಇದರಿಂದ ಮನೆಯಲ್ಲಿ ಸಂಪತ್ತು(Wealth) ಹೆಚ್ಚಾಗುತ್ತದೆ. ಮುಖ್ಯವಾಗಿ ಕುಟುಂಬವನ್ನ ಒಂದುಗೂಡಿಸುತ್ತದೆ ಇದು ಎನ್ನುವ ನಂಬಿಕೆ ಇದೆ.

 

*ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಬೀರು ದಕ್ಷಿಣ ದಿಕ್ಕಿಗೆ ಬಾಗಿಲು ತೆರೆಯಬಾರದು. ನಂಬಿಕೆಗಳ ಪ್ರಕಾರ, ತಾಯಿ ಲಕ್ಷ್ಮಿ ದಕ್ಷಿಣ ದಿಕ್ಕಿನಿಂದ ಪ್ರಯಾಣಿಸುತ್ತಾಳೆ. ಅಲ್ಲಿಂದ ಅವಳು ಉತ್ತರಕ್ಕೆ ಬರುತ್ತಾಳೆ. ಹಾಗಾಗಿ ಈ ದಿಕ್ಕಿನಲ್ಲಿ ಬಾಗಿಲು ತೆರೆಯುವುದರಿಂದ ನಿಮ್ಮ ಮನೆಯಲ್ಲಿ ಹಣ ನಿಲ್ಲುವುದಿಲ್ಲ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

* ಹಾಲ್ ಅಥವಾ ಡ್ರಾಯಿಂಗ್ ರೂಂನಲ್ಲಿ ಯಾವಾಗಲೂ ಜೇಡ್ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಇದರಿಂದ ವಾಸ್ತು ದೋಷಗಳು ನಿವಾರಣೆ ಆಗುತ್ತದೆ. ಅಲ್ಲದೇ, ಇದು ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನ ಹೆಚ್ಚಿಸುತ್ತದೆ.

*ದಕ್ಷಿಣ ದಿಕ್ಕಿನ ಜೊತೆಗೆ ಆಗ್ನೇಯ ದಿಕ್ಕನ್ನು ಯಾವಾಗಲೂ ಮಲಗಲು ಉತ್ತಮವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳನ್ನು ಯಾವಾಗಲೂ ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಇದರಿಂದ ಐಶ್ಚರ್ಯ ಹೆಚ್ಚಾಗುತ್ತದೆ.

Exit mobile version