Revenue Facts

ಮಣ್ಣಿನ ಬಣ್ಣದ ಬಗ್ಗೆ ವಾಸ್ತುವಿನ ಅರ್ಥವೇನು..?

ಮಣ್ಣಿನ ಬಣ್ಣದ ಬಗ್ಗೆ ವಾಸ್ತುವಿನ ಅರ್ಥವೇನು..?

ಬೆಂಗಳೂರು, ಮಾ. 11 : ಮನೆ ಕಟ್ಟುವಾಗ ಆ ನಿವೇಶನದಲ್ಲಿನ ಮಣ್ಣಿನ ಗುಣಮಟ್ಟದ ಬಗ್ಗೆ ಸಾಕಷ್ಟು ಕಾಳಜಿಯನ್ನು ವಹಿಸಬೇಕು. ಮಣ್ಣಿನಲ್ಲಿ ಹಲವು ವಿಧಗಳು ಇರುತ್ತವೆ. ಮಣ್ಣಿನಲ್ಲಿ ಲೂಸ್ ಸಾಯಿಲ್ ಎಂದು ಹೇಳುತ್ತೇವೆ. ಆ ಮಣ್ಣು ಅಷ್ಟು ಗಟ್ಟಿಯಾಗಿ ಇರುವುದಿಲ್ಲ. ಮರಳಿನಂತಿರುವ ನಿವೇಶನದಲ್ಲಿ ಮನೆ ಕಟ್ಟಿದರೆ, ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಇಂತಹ ನಿವೇಶನಗಳಲ್ಲಿ ಮನೆಯನ್ನು ನಿರ್ಮಾಣ ಮಾಡಬೇಕೆಂದರೆ ಹೆಚ್ಚು ಕರ್ಚಾಗುತ್ತದೆ. ಹಾಗಾಗಿ ನಿವೇಶನದ ಮಣ್ಣಿನ ಗುಣಮಟ್ಟವನ್ನು ತಿಳಿದುಕೊಳ್ಳಬೇಕು. ವಾಸ್ತು ಗ್ರಂಥಗಳಲ್ಲಿ ಮಣ್ಣಿನ ಗುಣಮಟ್ಟವನ್ನ ಹೇಗೆ ಕಂಡ ಹಿಡಿಯುವುದು ಎಂದು ಮಾಹಿತಿಯನ್ನು ನೋಡಿದ್ದಾರೆ.

ಗ್ರಂಥಗಳ ಪ್ರಕಾರ, ಯಾವ ವರ್ಣದವರಿಗೆ ಯಾವ ಮಣ್ಣು ಸೂಕ್ತ ಎಂದು ತಿಳಿಯೋಣ. ಬಿಳಿ ಬಣ್ಣ ಬ್ರಾಹ್ಮಣರಿಗೆ ಸೂಕ್ತ, ಕೆಂಪು ಬಣ್ಣ ಕ್ಷತ್ರಿಯ, ಹಳದಿ ಬಣ್ಣ ವೈಶ್ಯರು, ಕಪ್ಪು ಬಣ್ಣ ಶೂದ್ರರು ಹೀಗೆ ಮಣ್ಣಿನ ಬಣ್ಣವನ್ನು ತಿಳಿಸಿದ್ದಾರೆ. ಆದರೆ, ಈ ಕಾಲದಲ್ಲಿ ಎಲ್ಲರಿಗೂ ಎಲ್ಲಾ ಮಣ್ಣು ಸೂಕ್ತ. ಇದೇ ರೀತಿಯಲ್ಲಿ ಮಣ್ಣಿನ ವಾಸನೆ, ಮಣ್ಣಿನ ರುಚಿಯ ಬಗ್ಗೆಯೂ ಕೂಡ ಗ್ರಂಥಗಳಲ್ಲಿ ಹೇಳಲಾಗಿದೆ. ಆದರೆ, ಹಳೆಯ ಕಾಲದಲ್ಲಿ ಇವೆಲ್ಲವೂ ನಡೆಯುತ್ತಿತ್ತು. ಆದರೆ, ಈಗ ಪ್ರಕೃತಿಯನ್ನು ಮನುಷ್ಯರು ಹಾಳೂ ಮಾಡಿದ್ದಾರೆ. ಇನ್ನು ಕೆಲವು ಕಡೆ ಬೇರೆ ಕಡೆಯಿಂದ ಮಣ್ಣನ್ನು ತಂದು ಹಾಕಿರುತ್ತಾರೆ. ಹೀಗಾಗಿ ಈಗ ನಿವೇಶನವನ್ನು ನಿರ್ಧರಿಸಲು ಸಾಧ್ಯವಿಲ್ಲ.

ಇನ್ನು ಗ್ರಂಥಗಳ ಪ್ರಕಾರ ವೃಕ್ಷಗಳ ಮೇಲೂ ನಿವೇಶನ ಯಾರಿಗೆ ಸೂಕ್ತ ಎಂದು ಹೇಳಲಾಗಿದೆ. ಇನ್ನು ಇದಲ್ಲದೇ ಕೆಲವು ಸೂಚನೆಗಳ ಬಗ್ಗೆಯೂ ಹೇಲಲಾಗಿದೆ. ನಾವು ಹೋಗಿ ನಿಂತಾಗ ಅಲ್ಲಿ ಹಿತವಾಗಿ ಕಾಣಬೇಕು. ಒಂದು ಹತ್ತು ನಿಮಿಷ ನಿಂತಾಗ ಆ ವಾತಾವರನ ನಮಗೆ ಒಪ್ಪಿಗೆಯಾಗುವಂತೆ ಇರಬೇಕು. ಅಥವಾ ಅಲ್ಲಿ ನಿಂತಾಗ ನಾಯಿ ಬಂದು ನಿಂತು ಗಲೀಜು ಮಾಡಿದರೆ, ಇನ್ನೇನಾದರೂ ಇದ್ದರೆ, ಆ ಭೂಮಿಯಲ್ಲಿ ಅಶುಭ ಸಂಕೇತಗಳು ಇದ್ದರೆ, ಆ ನಿವೇಶನಗಳನ್ನು ತೆಗೆದುಕೊಳ್ಳಬಾರದು. ಶುಭ ಸೂಚನೆಗಳನ್ನು ನೀಡುವಂತಹ ನಿವೇಶನಗಳನ್ನು ಗಮನಿಸಿ ಖರೀದಿಸುವುದು ಬಹಳ ಉತ್ತಮ

Exit mobile version