Revenue Facts

ಸ್ಟಿಲ್ಡ್ ಫ್ಲೋರ್ ಅನ್ನು ಅಳವಡಿಸಿಕೊಳ್ಳುವುದು ಹೇಗೆ..?

ಸ್ಟಿಲ್ಡ್ ಫ್ಲೋರ್ ಅನ್ನು ಅಳವಡಿಸಿಕೊಳ್ಳುವುದು ಹೇಗೆ..?

ಬೆಂಗಳೂರು, ಮಾ. 28 : ಈಗ ಎಲ್ಲರೂ ಮನೆಯನ್ನು ಕಟ್ಟಿಕೊಳ್ಳುವಾಗ ಸ್ಟಿಲ್ಟ್ ಫ್ಲೋರ್ ಅನ್ನು ಕಟ್ಟಿಕೊಳ್ಳುತ್ತಾರೆ. ಎರಡು ಮೂರು ಫ್ಲೋರ್ ನಲ್ಲಿ ಮನೆಯನ್ನು ಕಟ್ಟುವುದರಿಂದ ಈ ಸ್ಟಿಲ್ಟ್ ಫ್ಲೋರ್ ನಲ್ಲಿ ಕಾರು, ವಾಹನಗಳ ಪಾರ್ಕಿಂಗ್ ಗೆ ಸ್ಥಳವನ್ನು ಮಾಡಿಕೊಳ್ಳುತ್ತಾರೆ. ರಸ್ತೆಗಿಂತಲೂ ನಿವೇಶನ ಕೊಂಚ ಕೆಳಗಿದ್ದರೆ, ಮಣ್ಣು ತುಂಬಿಸಿ ಎತ್ತರ ಮಾಡಿ ಮನೆಯನ್ನು ಕಟ್ಟಿಕೊಳ್ಳುವುದಕ್ಕಿಂತಲೂ, ಇನ್ನು ಸ್ವಲ್ಪ ಮಣ್ಣನ್ನು ತೆಗೆದು, ಅಲ್ಲಿ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಿ, ಫಸ್ಟ್ ಫ್ಲೋರ್ ನಿಂದ ಮನೆಯ ನಿರ್ಮಾಣವನ್ನು ಮಾಡಿಕೊಳ್ಳುತ್ತಾರೆ.

ಹೀಗೆ ಸುಮಾರು ಜನ ಪಾರ್ಕಿಂಗ್ ಸ್ಥಳವನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ. ಅಪಾರ್ಟ್ ಮೆಂಟ್ ಗಳಲ್ಲಿ, ಆಫೀಸ್ ಕಟ್ಟಡಗಳಲ್ಲಂತೂ ಇಂತಹ ಪಾರ್ಕಿಂಗ್ ಸ್ಥಳಗಳು ಸಾಮಾನ್ಯವಾಗಿದೆ. ಹೀಗೆ ಸ್ಟಿಲ್ಟ್ ಫ್ಲೋರ್ ಅನ್ನು ಕಟ್ಟುವಾಗ ಸಾಕಷ್ಟು ತಪ್ಪುಗಳನ್ನು ಮಾಡಲಾಗುತ್ತದೆ. ಅದರಲ್ಲಿ ಬಹಳ ಮುಖ್ಯವಾಗಿ ಯುಟಿಲಿಟಿ ನಿರ್ಮಾಣ. ಸಂಪ್, ಲಿಫ್ಟ್, ಟ್ರಾನ್ಸ್ ಫಾರ್ಮ್, ಜನರೇಟರ್ , ಯುಪಿಎಸ್, ಸ್ಟೇರ್ ಕೇಸ್ ಹೀಗೆ ಯೂಟಿಲಿಟಿ ಗಳನ್ನು ಸರಿಯಾದ ಸ್ಥಳದಲ್ಲಿ ಹಾಕಬೇಕಾಗುತ್ತದೆ.

ಇದೆಲ್ಲವನ್ನು ವಾಸ್ತು ಪ್ರಕಾರವೇ ಹಾಕಬೇಕು. ಎಲೆಕ್ಟ್ರಿಕ್ ಎಂದು ಬಂದಾಗ, ಜನರೇಟರ್ – ಯುಪಿಎಸ್ ಗಳನ್ನು ವಾಯುವ್ಯದಲ್ಲಿಯೇ ಹಾಕಬೇಕು. ಸಂಪ್ ಅನ್ನು ಹಾಕುವಾಗ ಈಶಾನ್ಯ, ಸ್ಟೇರ್ ಕೇಸ್ ಅನ್ನು ಆಗ್ನೇಯದಿಂದ ವಾಯುವ್ಯಕ್ಕೆ ಅಥವಾ ದಕ್ಷಿಣದಿಂದ ಪಶ್ಚಿಮಕ್ಕೆ ಹಾಕಬೇಕಾಗುತ್ತದೆ. ಇಷ್ಟಾ ಬಂದಂತೆ ಪೂರ್ವದಲ್ಲೋ, ಪಶ್ಚಿಮದಲ್ಲೋ ಅಥವಾ ಎಲ್ಲೆಂದರಲ್ಲಿ ಯುಟಿಲಿಟಿಗಳನ್ನು ನಿರ್ಮಾಣ ಮಾಡಲು ಆಗುವುದಿಲ್ಲ. ಸುಮಾರು ಜನ ಸ್ಟೇರ್ ಕೇಸ್ ಅನ್ನು ತಪ್ಪಾಗಿ ಹಾಕುತ್ತಾರೆ. ಇನ್ನು ಲಿಫ್ಟ್ ಅನ್ನು ಹಾಕುವಾಗ ಆಗ್ನೇಯದಲ್ಲಿ ಹಾಕಿ, ಸ್ಟೇರ್ ಕೇಸ್ ಅನ್ನು ಅದರ ಪಕ್ಕದಲ್ಲೇ ಇರುವಂತೆ ಹಾಕಬೇಕು.

ಪಾರ್ಕಿಂಗ್ ಸ್ಥಳ ಆದಷ್ಟು ಖಾಲಿ ಇರುತ್ತದೆ. ಹಾಗಾಗಿ ಯುಟಿಲಿಟಿಗಳನ್ನು ಸ್ವಲ್ಪ ಗಮನ ಹರಿಸಿ ಹಾಕಬೇಕಾಗುತ್ತದೆ. ಇನ್ನು ಸರ್ವೆಂಟ್ ಮನೆಯನ್ನು ಪಾರ್ಕಿಂಗ್ ಬಳಿ ಹಾಕುತ್ತಾರೆ. ಇದನ್ನು ಎಲ್ಲೆಂದರಲ್ಲಿ ಹಾಕಲು ಸಾಧ್ಯವಾಗುವುದಿಲ್ಲ. ಸರ್ವೆಂಟ್ ಮನೆಯನ್ನು ವಾಯುವ್ಯ ದಿಕ್ಕಿನಲ್ಲೇ ಹಾಕಬೇಕು. ಅದೇ ಸರಿಯಾದ ದಿಕ್ಕಿನಲ್ಲಿ ಹಾಕಿದರೆ, ಯಾವುದೇ ಸಮಸ್ಯೆಗಳು ಕಾಣಿಸುವುದಿಲ್ಲ. ಅದರ ಬದಲು ಎಲ್ಲೆಂದರಲ್ಲಿ ಯುಟಿಲಿಟಿಗಳನ್ನು ನಿರ್ಮಾಣ ಮಾಡಿದರೆ, ಮೇಲೆ ನಿರ್ಮಾಣ ಮಾಡುವ ಮನೆಗಳಿಗೂ ಇದರಿಂದ ಸಮಸ್ಯೆ ಆಗುತ್ತದೆ.

ಯುಟಿಲಿಟಿ ನಿರ್ಮಾಣದಲ್ಲಿ ತಪ್ಪಾದರೆ, ಮನೆಗೆ ನೀರಿನ ಪೈಪ್ ಕನೆಕ್ಷನ್ ಗಳು, ಮನೆಯಿಂದ ಹೊರ ಹೋಗುವ ನೀರಿನ ಪೈಪ್ ಗಳು ವಿರುದ್ಧ ದಿಕ್ಕಿನಲ್ಲಿ ಹಾಕಿದರೆ, ಆಗ ಮತ್ತೆ ಸಮಸ್ಯೆ ಆಗುತ್ತದೆ. ಇದರಿಂದ ಕುಟುಂಬದಲ್ಲೂ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಹಾಗಾಗಿ ಸ್ಟಿಲ್ಟ್ ಫ್ಲೋರ್ ಗಳನ್ನು ಕಟ್ಟುವಾಗ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ.

Exit mobile version