Revenue Facts

ಮನೆಯ ರೂಫಿನ ಸ್ಲೋಪ್ ಹೇಗಿರಬೇಕು ಎಂದು ವಾಸ್ತುವಿನಲ್ಲಿ ಹೇಳಲಾಗಿದೆ..?

ಬೆಂಗಳೂರು, ಮೇ. 22 : ಮನೆ ನಿರ್ಮಾಣ ಮಾಡುವಾಗ ರೂಫ್ ನಲ್ಲಿ ಕೆಲ ತಪ್ಪುಗಳನ್ನು ಸಾಮಾನ್ಯವಾಗಿ ಮಾಡಿರುತ್ತಾರೆ. ಸಾಮಾನ್ಯವಾಗಿ ಗ್ರೌಂಡ್ ಫ್ಲೋರ್ ನಲ್ಲಿ ರೂಫ್ ಸ್ಲೋಪ್ ಇರಬೇಕು. ಪಶ್ಚಿಮದಿಂದ ಪೂರ್ವಕ್ಕೆ, ದಕ್ಷಿಣದಿಂದ ಉತ್ತರಕ್ಕೆ ಅಥವಾ ನೈರುತ್ಯದಿಂದ ಈಶಾನ್ಯಕ್ಕೆ ಸ್ಲೋಪ್ ಇರಬೇಕು. ಅದೂ ಗೂಡ ಲೈಟ್ ಆಗಿ ಇರಬೇಕು. ಇನ್ನು ಸಾಮಾನ್ಯವಾಗಿ ಸ್ಲಿಟ್ ಸ್ಲೋಪ್ ಅನ್ನು ಅಳವಡಿಸುವಂತಿಲ್ಲ ಎಂದು ಹೇಳಲಾಗಿದೆ. ಸಣ್ಣ ಮನೆಗಳಲ್ಲಿ ರೂಫ್ ಸ್ಲೋಪ್ ಅನ್ನು ಅಳವಡಿಸಿರುವುದಿಲ್ಲ.

ಕೆಲ ರೂಮ್ ಗಳನ್ನು ಎತ್ತರಿಸುವುದು. ಕೆಲ ರೂಮ್ ಗಳನ್ನು ತಗ್ಗಿಸಿ ನಿರ್ಮಾಣ ಮಾಡಿರಲಾಗುತ್ತದೆ. ಗ್ರೌಂಡ್ ಫ್ಲೋರ್ ಗೆ ಯಾವಾಗಲೂ ಸ್ಲೋಪ್ ಇರಲೇಬೇಕು. ಇಲ್ಲದೇ ಹೋದರೆ, ಆಗ್ಲೇಯ ಮತ್ತು ಈಶಾನ್ಯದಲ್ಲಿ ಸ್ಲೋಪ್ ಇರಲೇ ಬೇಕು. ಆಗ್ಲೇಯದಲ್ಲಿ ನೀರು ಬಿಟ್ಟರೆ ಅದೂ ಈಶಾನ್ಯ ದಿಕ್ಕಿಗೆ ಹರಿಯುವಂತಿರಬೇಕು. ರೂಫ್ ಗೂ ಕೂಡ ಇದೇ ಫಾರ್ಮುಲಾವನ್ನು ಬಳಸಬೇಕಾಗುತ್ತದೆ. ಆದರೆ ಯಾರು ಇದನ್ನು ಹೆಚ್ಚಾಗಿ ಬಳಸುವುದಿಲ್ಲ.

ಕೆಲವರು ಮಧ್ಯದ ರೂಫ್ ಅನ್ನು ಎತ್ತರಿಸುತ್ತಾರೆ. ಸ್ಕೈ ಲೈಟ್ ಬೇಕು ಎಂದು ಸ್ಲೋಪ್ ಅನ್ನು ಕೊಟ್ಟಿರುತ್ತಾರೆ. ಇದೆಲ್ಲವೂ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಗತ್ಯವಾಗಿ ಮಳೆ ಬಂದಾಗ ನೀರು ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನ ಕಡೆಗೆ ಹರಿಯಬೇಕು. ಇದರಿಂದ ಶುಭ ಫಲಗಳು ಸಿಗುತ್ತವೆ. ರೂಫ್ ಅನ್ನು ನಿರ್ಮಾಣ ಮಾಡುವಾಗ ಈ ಬಗ್ಗೆ ಬಹಳ ಎಚ್ಚರದಿಂದ ನೋಡಿಕೊಳ್ಳಬೇಕಾಗುತ್ತದೆ. ಅದು ಬಿಟ್ಟು ಒಂದು ಕಡೆ ಎತ್ತರಿಸುವುದು, ಮತ್ತೊಂದು ಕಡೆ ತಗ್ಗಿಸುವುದು ಒಳ್ಳೆಯದಲ್ಲ.

Exit mobile version