Revenue Facts

ದಕ್ಷಿಣ ಹಾಗೂ ಪಶ್ಚಿಮ ಮುಖದ ನಿವೇಶನ ಖರೀದಿ ಮಾಡಬಹುದೇ..?

ದಕ್ಷಿಣ ಹಾಗೂ ಪಶ್ಚಿಮ ಮುಖದ ನಿವೇಶನ ಖರೀದಿ ಮಾಡಬಹುದೇ..?

ಬೆಂಗಳೂರು, ಮೇ. 12 : ನಿವೇಶನವನ್ನು ಖರೀದಿಸುವಾಗ ಯಾಕೆ ಎಲ್ಲರೂ ಪೂರ್ವ ಮತ್ತು ಉತ್ತರ ದಿಕ್ಕಿನ ಮನೆಗಳನ್ನೇ ಖರೀದಿಸುತ್ತಾರೆ. ವಾಸ್ತುವಿನಲ್ಲಿ ಪೂರ್ವ ಮತ್ತು ಉತ್ತರ ದಿಕ್ಕಿಗೆ ಮುಖ ಮಾಡಿರುವ ನಿವೇಶನಗಳನ್ನೇ ಖರೀದಿಸಬೇಕು ಎಂದೇನಿಲ್ಲ. ಆದರೆ, ಸಾಮಾನ್ಯವಾಗಿ ಈ ದಿಕ್ಕಿನ ಮನೆಗಳನ್ನು ಖರೀದಿ ಮಾಡಿದರೆ, ಸಮಸ್ಯೆಗಳಕಾಡುವುದಿಲ್ಲ ಎಂದು ನಂಬಿದ್ದಾರೆ. ಇನ್ನು ಈ ದಿಕ್ಕು ಸಾಮಾನ್ಯವಾಗಿ ಎಲ್ಲರಿಗೂ ಆಗಿ ಬರುತ್ತದೆ. ಹೀಗಾಗಿ ಹಲವರು ಪೂರ್ವ ಹಾಗೂ ದಕ್ಷಿಣ ದಿಕ್ಕಿನ ನಿವೇಶನಗಳನ್ನೇ ಆಯ್ಕೆ ಮಾಡುತ್ತಾರೆ.

ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ನಿವೇಶನಗಳಲ್ಲಿ ಕೆಲ ಸಮಸ್ಯೆಗಳು ಇರುತ್ತವೆ. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ಈ ದಿಕ್ಕಿನ ನಿವೇಶನಗಳನ್ನು ಕೂಡ ಖರೀದಿ ಮಾಡಬಹುದಾಗಿದೆ. ಪಶ್ಚಿಮಾಭಿಮುಖದ ನಿವೇಶನವನ್ನು ಖರೀದಿ ಮಾಡಿದರೆ, ಕೆಲವರು ಕಾರ್ ಪಾರ್ಕಿಂಗ್ ಗೆ ಜಾಗ ಬೇಕು ಎಂಧು ಹೇಳಿ, ಪೂರ್ವದ ಕಡೆಎ ಮನೆಯನ್ನು ನಿರ್ಮಾಣ ಮಾಡಿ, ಪಶ್ಚಿಮದ ಕಡೆಯ ಜಾಗವನ್ನು ಪಾರ್ಕಿಂಗ್ ಗೆ ಎಂದು ಖಾಲಿ ಬಿಡುತ್ತಾರೆ. ಆದರೆ, ಈ ರೀತಿ ಪಶ್ಚಿಮ ದಿಕ್ಕನ್ನು ಖಾಲಿ ಬಿಡುವುದು ಒಳ್ಳೆಯದಲ್ಲ.

ಇನ್ನು ಇಂತಹ ನಿವೇಶನಗಳಲ್ಲಿ ಮನೆಯನ್ನು ನಿರ್ಮಾಣ ಮಾಡುವಾಗ ಸ್ವಲ್ಪ ಎಚ್ಚರ ವಹಿಸಿದರೆ ಏನೂ ಸಮಸ್ಯೆ ಆಗುವುದಿಲ್ಲ. ಮನೆಯಿಂದ ಹೊರ ಹರಿಯುವ ವೇಸ್ಟ್ ನೀರು ಸರಿಯಾದ ದಿಕ್ಕಿನಲ್ಲಿ ಹರಿಯುವಂತೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಹೀಗೆ ಮನೆಯನ್ನು ನಿರ್ಮಾಣ ಮಾಡುವಾಗ ಸರಿಯಾಗಿ ವಾಸ್ತುವನ್ನು ನೋಡಿ ಮಾಡಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ದಕಿಣ, ಪಶ್ಚಿಮದ ನಿವೇಶನದಲ್ಲಿ ವಾಸ ಮಾಡಿದರೂ ಯಾವುದೇ ದೋಷ ಉಂಟಾಗುವುದಿಲ್ಲ.

ಸಾಮಾನ್ಯವಾಗಿ ಯಾವ ಮನೆಯನ್ನೇ ನಿರ್ಮಾಣ ಮಾಡುವಾಗ ವಾಸ್ತು ಪ್ರಕಾರವಾಗಿಯೇ ಸಂಪೂರ್ಣವಾಗಿ ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚು ಕಡಿಮೆ ಏರು ಪೇರುಗಳು ಆಗೇ ಆಗುತ್ತವೆ. ದಕ್ಷಿಣ, ಪಶ್ಚಿಮ, ಪೂರ್ವ ಹಾಗೂ ಉತ್ತರ ಯಾವ ದಿಕ್ಕಿನ ನಿವೇಶನವಾದರೂ ಸಮಸ್ಯೆ ಇಲ್ಲ.

Exit mobile version