Revenue Facts

ಮನೆಯಲ್ಲೇ ಆಫೀಸ್‌ ಇದ್ದರೆ, ವಾಸ್ತು ಪ್ರಕಾರ ಹೇಗಿದ್ದರೆ ಶುಭ

ಬೆಂಗಳೂರು, ಮೇ . 22 : ಈಗ ಎಲ್ಲರೂ ಹೆಚ್ಚಾಗಿ ಮನೆಯಲ್ಲಿ ಇದ್ದುಕೊಂಡೆ ಕೆಲಸವನ್ನು ಮಾಡುತ್ತಾರೆ. ಬಿಸಿನೆಸ್‌ ಸಲುವಾಗಿ ಕೆಲವರು ತಮ್ಮ ಮನೆಯಲ್ಲೇ ಕಚೇರಿಯನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವರು ಈಗ ಕೋವಿಡ್‌ ಬಂದಾಗಿನಿಂದ ಮನೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ವರ್ಕ್‌ ಫ್ರಮ್‌ ಹೋಮ್‌ ಇರುವವರು ಅಥವಾ ಮನೆಯಲ್ಲೇ ಕಚೇರಿಯನ್ನು ಇಟ್ಟುಕೊಳ್ಳುವವರು ಇವರಿಗೆ ಯಾವ ದಿಕ್ಕಿನ ಕೋಣೆಯಲ್ಲಿ ಕೆಲಸ ಮಾಡುವುದು ಶುಭವನ್ನು ತರುತ್ತದೆ. ಯಾವ ರೀತಿಯ ವಾತಾವರಣ ಇರಬೇಕು ಎಂಬುದನ್ನು ತಿಳಿಯೋಣ.

ಇತ್ತೀಚಿನ ದಿನಗಳಲ್ಲಿ ಅಂತೂ ಮನೆಯಿಂದ ಕೆಲಸ ಮಾಡುವುದು ಹೆಚ್ಚಾಗಿದೆ. ಹೀಗಾಗಿ ಹೋಮ್‌ ಆಫಿಸ್‌ ವಾಸ್ತು ಬಹಳ ಮುಖ್ಯವಾಗುತ್ತದೆ. ಆಗ್ನೇಯ, ಈಶಾನ್ಯ ಮತ್ತು ಬ್ರಹ್ಮಸ್ಥಾನದಲ್ಲಿ ಬಿಟ್ಟು ಬೇರೆ ಅಂತಹ ನೆಗೆಟಿವ್‌ ಆಗುವುದಿಲ್ಲ ಎಂಬುದು ವಾಸ್ತುವಿನಲ್ಲಿ ಹೇಳಲಾಗಿದೆ. ಅದು ಬಿಟ್ಟು ಮನೆಯ ಬೇರೆ ಯಾವ ದಿಕ್ಕಿನಲ್ಲಾದರೂ ಇರಬಹುದು. ಮನೆ ಮೇಲೆ ಅಥವಾ ಕೆಳಗಡೆ ಇಲ್ಲವೇ ಯಾವುದಾದರೂ ಕೊಠಡಿಯಲ್ಲಿ ಹೋಮ್‌ ಆಫಿಸ್‌ ಇರಬಹುದು. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ.

ಆದರೆ, ಆದಷ್ಟು ಮನೆಯ ಮುಖ್ಯದ್ವಾರ ಇರುವ ಕಡೆ ಹೋಮ್‌ ಆಫಿಸ್‌ ಇದ್ದರೆ ಒಳ್ಳೆಯದು. ಇದರಿಂದ ಮನೆಯಿಂದ ಸಪರೇಟ್‌ ಆಗಿ ಆಫಿಸ್‌ ಇದ್ದಂತೆ ಆಗುತ್ತದೆ. ಎಲ್ಲೇ ಇದ್ದರು ವಾತಾವರಣವೂ ಬಹಳ ಮುಖ್ಯವಾಗುತ್ತದೆ. ಮನೆಯ ಮೇಲಿದ್ದರೆ, ಆಗ ಹೊರಿನ ಸ್ಟೇರ್‌ ಕೇಸ್‌ ನಿಂದ ಆಫಿಸ್‌ ಕೆಲಸಕ್ಕಾಗಿ ಹೊರಡುವುದು ಬಹಳ ಒಳ್ಳೆಯದು. ಇನ್ನು ಟೇಬಲ್‌ ನಲ್ಲಿ ಆಗ್ನೇಯ ಹಾಗೂ ವಾಯುವ್ಯ ಕಡೆ ಕಂಪ್ಯೂಟರ್‌ ಇಡಬಹುದು. ಪ್ರಿಂಟರ್‌ ಅನ್ನು ದಕ್ಷಿಣ ಅಥವಾ ಪಶ್ಚಿಮದಲ್ಲಿ ಇಟ್ಟುಕೊಳ್ಳುವುದು ಸೂಕ್ತ.

ಯಾವ ದಿಕ್ಕಿಗೆ ಕುಳಿತುಕೊಂಡು ಕೆಲಸ ಮಾಡಬೇಕು ಎಂಬುದಕ್ಕೆ, ಪೂರ್ವಾಭಿಮುಖ ಕುಳಿತು ಕೆಲಸ ಮಾಡುತ್ತಾರೆ ಎಂದರೆ, ಆದಷ್ಟು ಪಶ್ಚಿಮದಲ್ಲಿ ಇಲ್ಲವೇ ಉತ್ತರಾಭಿಮುಖವಾಗಿ ಕೆಲಸ ಮಾಡುವುದಾದರೆ, ದಕ್ಷಿಣದಲ್ಲಿ ದೇವರ ಫೋಟೋವನ್ನು ಇಟ್ಟು ಪೂಜೆ ಮಾಡುವುದು ಉತ್ತಮ. ರೆಕಾರ್ಡ್ಸ್‌ ಗಳನ್ನು ವಾಯುವ್ಯದಲ್ಲಿ ಇಲ್ಲವೇ ನೈರುತ್ಯದಲ್ಲಿ ಇಟ್ಟುಕೊಳ್ಳಬಹುದು.‌

Exit mobile version