Revenue Facts

ವಯಕ್ತಿಕವಾಗಿ ಯಾವ ವ್ಯಕ್ತಿಗೆ ಯಾವ ದಿಕ್ಕು ಸೂಕ್ತ ಎಂದು ತಿಳಿಯುವುದು..?

ವಯಕ್ತಿಕವಾಗಿ ಯಾವ ವ್ಯಕ್ತಿಗೆ ಯಾವ ದಿಕ್ಕು ಸೂಕ್ತ ಎಂದು ತಿಳಿಯುವುದು..?

ಬೆಂಗಳೂರು, ಡಿ. 29 : ಎಲ್ಲಾ ರಾಶಿಗಳಿಗೂ ಎಲ್ಲಾ ದಿಕ್ಕುಗಳು ಒಳ್ಳೆಯದಲ್ಲ. ಒಂದೊಂದು ರಾಶಿಗೆ ಒಂದೊಂದು ದಿಕ್ಕುಗಳು ಶುಭವನ್ನು ತಂದುಕೊಡುತ್ತದೆ. ಹಾಗೆಯೇ ಕೆಲ ದಿಕ್ಕುಗಳು ಕೆಲ ರಾಶಿಗಳಿಗೆ ಕೆಟ್ಟದ್ದನ್ನು ಮಾಡುತ್ತದೆ. ಹಾಗಾಗಿ ನಮಗೆ ಯಾವ ದಿಕ್ಕು ಶುಭ, ಯಾವುದು ಅಶುಭ ಎಂಬುದನ್ನು ತಿಳಿದುಕೊಳ್ಳದೆ ಇದ್ದರೆ ಮುಂದೆ ದೊಡ್ಡ ಅಪಾಯವಾಗುವುದಂತೂ ಸತ್ಯ. ವಾಸ್ತು ಶಾಸ್ತ್ರವನ್ನು ನಂಬದವರೂ ಎಷ್ಟೋ ಜನ ನಂಬಿ ವಾಸ್ತು ಪ್ರಕಾರ ನಡೆದುಕೊಳ್ಳುವುದು ಇದೇ ಕಾರಣಕ್ಕಾಗಿಯೇ. ವಾಸ್ತು ಶಾಸ್ತ್ರ ಜ್ಯೋತಿಷ್ಯ ಎರಡಕ್ಕೂ ಸಂಬಂಧ ಇದೆ ಎಂಬುದನ್ನು ಈ ಹಿಂದೆ ಬರೆದ ಲೇಖನದಲ್ಲಿಯೇ ಹೇಳಲಾಗಿದೆ.

ಹಾಗಾದರೆ, ಜನ್ಮ ನಕ್ಷತ್ರದ ಪ್ರಕಾರ ಯಾವ ದಿಕ್ಕು ವ್ಯಕ್ತಿಗೆ ಸೂಕ್ತ. ಯಾವುದೇ ಒಬ್ಬ ವ್ಯಕ್ತಿಗೆ ಆತನಿಗೆ ಶುಭ ಕೊಡುವ ದಿಕ್ಕನ್ನು ಹೇಗೆ ತಿಳಿಯುವುದು. ವಾಸ್ತು ಶಾಸ್ತ್ರದ ಪ್ರಕಾರ ಡಾ. ರೇವತಿ ವೀ ಕುಮಾರ್‌ ಅವರು ಏನು ಹೇಳುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ..

ಒಬ್ಬ ವ್ಯಕ್ತಿಗೆ ವಯಕ್ತಿಕವಾಗಿ ಯಾವ ದಿಕ್ಕು ಸೂಕ್ತ ಎಂಬುದನ್ನು ತಿಳಿಯಲು ಅವರ ನಾಮ ನಕ್ಷತ್ರ ಇಲ್ಲವೇ ಜನ್ಮ ನಕ್ಷತ್ರದ ಬಗ್ಗೆ ತಿಳಿಯಬೇಕಾಗುತ್ತದೆ. ಇದನ್ನು ಜ್ಯೋತಿಷ್ಯಾಸ್ತ್ರದ ಮುಖಾಂತರ ನಿರ್ಧಾರ ಮಾಡಲಾಗುತ್ತದೆ ಎಂದು ಡಾ.ರೇವತಿ ವೀ ಕುಮಾರ್‌ ಅವರು ತಿಳಿಸಿದ್ದಾರೆ. ಜ್ಯೋತಿಷ್ಯದಲ್ಲಿ ನಾಮ ನಕ್ಷತ್ರ ಅಥವಾ ಜನ್ಮ ನಕ್ಷತ್ರವನ್ನು ಗಣನೆ ತೆಗೆದುಕೊಳ್ಳ ಬೇಕಾಗುತ್ತದೆ. ಅಂದರೆ ಹುಟ್ಟಿದ ಸಮಯದಲ್ಲಿ ಚಂದ್ರ ಯಾವ ನಕ್ಷತ್ರದಲ್ಲಿ ಚಲನೆಯಾಗುತ್ತಿರುತ್ತದೋ ಅದನ್ನು ಜನ್ಮ ನಕ್ಷತ್ರ ಎಂದು ಪರಿಗಣಿಸಲಾಗುತ್ತದೆ.

 

12 ರಾಶಿಗಳಿಗೂ ಒಂದೊಂದು ದಿಕ್ಕನ್ನು ಸೂಚಿಸಲಾಗಿದೆ. ಒಟ್ಟು 28 ನಕ್ಷತ್ರಗಳು ಇದ್ದು ಇವನ್ನು 12 ರಾಶಿಗೂ ಡಿವೈಡ್‌ ಮಾಡಲಾಗಿದೆ. ಒಂದೊಂದು ನಕ್ಷತ್ರಕ್ಕೆ ಸಂಬಂಧ ಪಟ್ಟಂತೆ ಆಯಾ ರಾಶಿಗೆ ಯಾವ ದಿಕ್ಕು ಸೂಕ್ತವೋ ಅದನ್ನು ಹೇಳಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಎಲ್ಲರಿಗೂ ಹೊಂದುವಂತೆ ದಿಕ್ಕುಗಳನ್ನು ಹೇಳಲಾಗಿದೆ. ಈಗ ಮೇಷ ರಾಶಿಗೆ ಪೂರ್ವ ದಿಕ್ಕು ಫೇವರೆಬಲ್‌ ಆಗಿದೆ. ಮೇಷ ರಾಶಿಯಲ್ಲಿ ಬರುವ ನಕ್ಷತ್ರದವರು ಪೂರ್‌ ದಿಕ್ಕಿನಲ್ಲಿ ಯಾವ ಕೆಲಸವನ್ನು ಮಾಡಿದರೂ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಉತ್ತರ ದಿಕ್ಕು ಕೂಡ ಸೂಕ್ತ ಎಂದು ಹೇಳಲಾಗುತ್ತದೆ.

ಇನ್ನು ವೃಷಭ ರಾಶಿಗೆ ದಕ್ಷಿಣ ದಿಕ್ಕು ಶುಭ. ದಕ್ಷಿಣ ದಿಕ್ಕು ಶುಭ ಇರುವವರು ಪಶ್ಚಿಮ ದಿಕ್ಕನ್ನು ಕೂಡ ಬಳಸಬಹುದು. ಮಿಥುನ ರಾಶಿಯವರಿಗೆ ಪಶ್ಚಿಮ ದಿಕ್ಕು ಶುಭವಾಗಿರುತ್ತದೆ. ಇವರು ದಕ್ಷಿಣ ದಿಕ್ಕನ್ನು ಬಳಸಿದರೂ ಒಳ್ಳೆಯದಾಗುತ್ತದೆ. ಕರ್ಕಾಟಕ ರಾಶಿಗೆ ಉತ್ತರ ಶುಭವಾಗಿದ್ದು, ಇವರಿಗೆ ಪೂರ್ವ ದಿಕ್ಕು ಕೂಡ ಆಗಿಬರುತ್ತದೆ. ಇದೇ ರೀತಿಯಲ್ಲಿ 12 ರಾಶಿಗಳಿಗೂ ಶುಭ ದಿಕ್ಕುಗಳನ್ನು ಸೂಚಿಸಲಾಗಿದೆ. ವ್ಯಕ್ತಿ ತಮ್ಮ ಜನ್ಮ ನಕ್ಷತ್ರದ ಆಧಾರದ ಮೇಲೆ ತಮ್ಮದು ಯಾವ ನಕ್ಷತ್ರ ಎಂಬುದನ್ನು ತಿಳಿದುಕೊಂಡರಾಯ್ತು. ಆ ರಾಶಿಗೆ ಯಾವ ದಿಕ್ಕು ಎಂದು ಸೂಚಿಸಲಾಗಿದೆಯೋ ಅದನ್ನು ಸಾಮಾನ್ಯವಾಗಿ ಅವರಿಗೆ ಶುಭವನ್ನೇ ಮಾಡುತ್ತದೆ.

ಇನ್ನು ಕೆಲವರಿಗೆ ಜನ್ಮ ನಕ್ಷತ್ರ ಗೊತ್ತಿರುವುದಿಲ್ಲ. ಅಂತಹವರಿಗೆ ನಾಮ ನಕ್ಷತ್ರದ ಮೇಲೂ ಮನೆಯ ದಿಕ್ಕನ್ನು ನೋಡಬಹುದು ಎಂದು ಹೇಳಲಾಗಿದೆ. ಒಂದೊಂದು ನಕ್ಷತ್ರಕ್ಕೂ ಅಕ್ಷರಗಳನ್ನು ಬಂದಿರುತ್ತವೆ. ಹೀಗೆ ಒಂದೊಂದು ನಕ್ಷತ್ರಕ್ಕೂ ನಾಲ್ಕು ಅಕ್ಷರಗಳನ್ನು ನೀಡಲಾಗಿದೆ. ಈಗ ಅಶ್ವಿನಿ ನಕ್ಷತ್ರಕ್ಕೆ ಚಿ, ಚು, ಚೆ, ಲೋ ಅಕಷರಗಳು. ಹಾಗೆಯೇ ಹೀಗೆ ನಾಮ ನಕ್ಷತ್ರವನ್ನು ನೋಡಿ ಅವರ ರಾಶಿಗೆ ಯಾವ ದಿಕ್ಕು ಸೂಕ್ತ ಎಂದು ನೋಡಿ ನಿರ್ಧಾರ ಮಾಡಬಹುದು. ಇದರ ಮೂಲಕವೂ ಶುಭ ದಿಕ್ಕನ್ನು ತಿಳಿಯಬಹುದು ಎಂದು ಡಾ. ರೇವತಿ ವೀ ಕುಮಾರ್‌ ಅವರು ಹೇಳಿದ್ದಾರೆ.

Exit mobile version