ಬೆಂಗಳೂರು, ಮಾ. 07 : ನಿವೇಶನಗಳನ್ನು ಖರೀದಿಸುವಾಗ ಹಲವಾರು ಅಂಶಗಳ ಬಗ್ಗೆ ತಿಳಿದಿರಬೇಕು. ಹಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ರಾಜ ಮಾರ್ತಾಂಡ ಗ್ರಂಥದಲ್ಲಿ ನಿವೇಶನಗಳನ್ನು ಖರಿದಿಸುವಾಗ ಯಾವೆಲ್ಲಾ ಅಂಶಗಳ ಬಗ್ಗೆ ಗಮನಿಸಬೇಕು ಎಂದು ಒಟ್ಟು 19 ಬಗೆಯ ಆಕಾರದ ಬಗ್ಗೆ ಹೇಳಿದ್ದಾರೆ. ಒಂದೊಂದು ಆಕಾರಕ್ಕೂ ಅದರದ್ದೇ ಆದ ಮಹತ್ವಗಳಿವೆ. ಆಯತಾ ಸಿದ್ದೇ ಸರ್ವ ಎಂದು ಹೇಳಿದ್ದಾರೆ. ಆಯತಾ ಎಂದರೆ, ಉದ್ದ ಮತ್ತು ಅಗಲಕ್ಕೆ ಒತ್ತು ಕೊಡಲಾಗುತ್ತದೆ. ಅಂದರೆ ರೆಕ್ಟ್ಯಾಂಗ್ಯೂಲರ್ ಶೇಪ್ ನಲ್ಲಿ ಮನೆಯನ್ನು ಕಟ್ಟಲಾಗುತ್ತದೆ. ಈ ಮನೆಯಲ್ಲಿ ಸರ್ವವೂ ಸಿದ್ಧಿಯಾಗುತ್ತದೆ ಎಂದು ಹೇಳಲಾಗಿದೆ.
ಚತುರಶ್ರ ಧನಾಗಮನ ಎಂದು ಹೇಳಲಾಗಿದೆ. ಹೀಗೆಂದರೆ, ನಿವೇಶನ ಸುತ್ತಲೂ ಚೌಕಾಕಾರದಲ್ಲಿದ್ದು, ನಾಲ್ಕು ದಿಕ್ಕು ಸಮವಾಗಿದ್ದರೆ ಮನೆಗೆ ಧನಾಗಮನವಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ವೃತ್ತೇ ಬುದ್ಧಿರ್ ವೃದ್ಧಸ್ಯ ಅಂದರೆ ವೃತ್ತಾಕಾರದ ಮನೆಯಲ್ಲಿ ಬುದ್ಧಿ ವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ. ಬುದ್ಧಿ ಎಂದರೆ, ಲೌಕಿಕ ಬುದ್ಧಿನಾ ಅಥವಾ ಆಧ್ಯಾತ್ಮಿಕ ಬುದ್ಧಿ ವೃದ್ಧಿನಾ ಎಂಬುದನ್ನು ತಿಳಿಯಬೇಕಾಗುತ್ತದೆ. ಮನುಷ್ಯ ಹಿಂದಿನ ಜನ್ಮದಿಂದಲೇ ತನಗೆ ಏನು ಬೇಕು ಎಂಬುದನ್ನು ಪಡೆದುಕೊಂಡು ಬಂದಿರುತ್ತಾನೆ. ಅದರ ಪ್ರಕಾರವಾಗಿ ಆತನಿಗೆ ದೊರೆಯುತ್ತದೆ.
ಸಾಮಾನ್ಯವಾಗಿ ವೃತ್ತಾ ಕಾರದ ಕಟ್ಟಡಗಳು ಲೋಕಕಲ್ಯಾಣ ಮಾಡುವಂತಹದಾದರೆ ಒಳ್ಳೆಯದು. ಸರ್ಕಾರಿ ಕಚೇರಿಗಳನ್ನು ವೃತ್ತಾಕಾರದಲ್ಲಿ ನಿರ್ಮಿಸಿದರೆ ಸಮಸ್ಯೆ ಇಲ್ಲ. ಇನ್ನು ಆಯತಾಕಾರ ಹಾಗೂ ಸ್ಕ್ವಯರ್ ಶೇಪ್ ಮನೆಗಳನ್ನು ವಾಸಕ್ಕಾಗಿ ನಿರ್ಮಾಣ ಮಾಡುವುದು ಸೂಕ್ತ. ಸ್ಟಾರ್ ಶೇಪ್ ಬಿಲ್ಡಿಂಗ್ ಗಳನ್ನು ದೇವಸ್ಥಾನಕ್ಕೆ ಬಳಸಲಾಗುತ್ತದೆ. ಹೀಗೆ ನೋಡುವುದಾದರೆ ಸಾಕಷ್ಟು ಆಕಾರಗಳ ಬಗ್ಗೆ ತಿಳಿಸಲಾಗಿದೆ. ಚಕ್ರಾಕಾರದ ಮನೆಗಳು, ದಂಡಾಕರಾದ ಮನೆಗಳು ವಾಸ್ತು ಪ್ರಕಾರ ಶುಭ ಅಲ್ಲ. ದಂಡಾಕಾರದ ಮನೆಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಮೊರದಂತ ಶೇಪ್ ಮನೆಗಳು ವಂಶವೃದ್ಧಿ ಸಮಸ್ಯೆ ಇರುತ್ತದೆ. ಕುಂಭ ಎಂದರೆ, ಕಳಸದಂತಹ ಮನೆಗಳು ಕುಷ್ಠ ರೋಗಗಳನ್ನು ಕೊಡುತ್ತದೆ.
ಹೀಗೆ ಸುಮಾರು ನೆಗೆಟಿವ್ ಶೇಪ್ ಗಳ ಮನೆಗಳ ಬಗ್ಗೆ ರಾಜ ಮಾರ್ತಾಂಡದಲ್ಲಿ ಹೇಳಲಾಗಿದೆ. ಇನ್ನು ಗೋಮುಖಿ ಮನೆಗಳು ಸಾಮಾನ್ಯವಾಗಿ ಕಟ್ಟಬಹುದು ಎನ್ನವಾಗಿದೆ. ಆದರೆ ರಾಜಮಾರ್ತಾಂಡ ಗ್ರಂಥದಲ್ಲಿ ಇದು ಕೂಡ ಸರಿ ಇಲ್ಲ ಎಂದು ಹೇಳಲಾಗಿದೆ. ಇನ್ನು ವ್ಯಾಘ್ರಾ ಮುಖಿ ಮನೆಯನ್ನು ಕೂಡ ನಿಷೇಧಿಸಲಾಗಿದೆ. ತ್ರಿಕೊನಾಕಾರ, ಕೆಟಲ್ ಮಾದರಿಯ ಮನೆಗಳು ಎಲ್ಲವೂ ಸಮಸ್ಯೆಗಳನ್ನು ಕಟ್ಟಬಾರದು ಎಂದು ಹೇಳಲಾಗಿದೆ. ಹಾಗಾಗಿ ಚೌಕಾಕಾರ ಹಾಗೂ ಆಯತಾಕಾರದ ಮನೆಗಳನ್ನು ನಿರ್ಮಾಣ ಮಾಡುವುದು ಸೂಕ್ತ ಎಂದು ಹೇಳಲಾಗಿದೆ.