Revenue Facts

ಬೆಂಗಳೂರಿನ ಬಸವನಗುಡಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ವೇಳೆ ದಾಖಲೆ ರಹಿತ ಹಣ ಪತ್ತೆ

ಬೆಂಗಳೂರಿನ ಬಸವನಗುಡಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ವೇಳೆ ದಾಖಲೆ ರಹಿತ ಹಣ ಪತ್ತೆ

ಬೆಂಗಳೂರು ಏ 13;ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ವಿವಿಧ ರೀತಿಯ ಆಮಿಷಗಳನ್ನು ಒಡ್ಡುತ್ತಿವೆ. ಹೀಗಾಗಿ ಚುನಾವಣಾ ಅಕ್ರಮಗಳನ್ನು ತಡೆಯಲು ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ.ಚುನಾವಣೆ ಸಮೀಪಿಸುತ್ತಿರುವಂತೆ ಪೊಲೀಸರು ಅಕ್ರಮ ನಗದು ವರ್ಗಾವಣೆಗಳ ಮೇಲೆ ನಿಗಾ ವಹಿಸಿದ್ದಾರೆ.ನಗರದೆಲ್ಲಡೆ ಪೊಲೀಸರು ಹದ್ದಿನ ಕಣ್ಣನ್ನು ಇಟ್ಟಿದ್ದಾರೆ.ನಗರದ ಎಲ್ಲಾ ರಸ್ತೆ ಮಾರ್ಗಗಳ ಚೆಕ್​ ಪೋಸ್ಟ್​ಗಳಲ್ಲಿ ಬಿಗಿ ಭದ್ರತೆಯನ್ನ ಕೈಗೊಳ್ಳಲಾಗಿದೆ.

ನಿನ್ನೇ ತಡರಾತ್ರಿ ಬಸವನಗುಡಿ ಪೊಲೀಸರು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 18 ಲಕ್ಷ ಹಣವನ್ನ ಜಪ್ತಿ ಮಾಡಿದ್ದಾರೆ‌. ರಿಷಭ್ ಎಂಬಾತನಿಂದ ಹಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.ರಿಷಭ್ ಎಂಬುವವರ ಕ್ರೇಟಾ ಕಾರಿನಲ್ಲಿ ದಾಖಲೆ ಇಲ್ಲದ ಹಣವನ್ನ ಸಾಗಿಸಲಾಗ್ತಿತ್ತು. ಚೆಕ್​ಪೋಸ್ಟ್​ ಬಳಿ ಕಾರು ತಡೆದು ಪೊಲೀಸರು ಪರಿಶೀಲಿಸಿದಾಗ 18 ಲಕ್ಷ ರೂ. ಹಣ ಪತ್ತೆಯಾಗಿದೆ. ಸದ್ಯ ರಿಶಬ್​ನನ್ನ ಬಸವನಗುಡಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ಧಾರೆ. ಈ ವೇಳೆ 2 ಸಾವಿರ, 500 ಹಾಗೂ‌ 200 ರೂ. ಮುಖಬೆಲೆಯ ಒಟ್ಟು 18 ಲಕ್ಷ ರೂ‌ ನಗದು ಪತ್ತೆಯಾಗಿದೆ. ಸದ್ಯ ಹಣವನ್ನ ವಶಕ್ಕೆ ಪಡೆಯಲಾಗಿದ್ದು, ರಿಷಭ್​ನನ್ನ ವಿಚಾರಣೆ ನಡೆಸಲಾಗುತ್ತಿದೆ.

Exit mobile version