Revenue Facts

ರಾಜ್ಯದಲ್ಲಿ 10 ಐಎಎಸ್ ಅಧಿಕಾರಿಗಳ ವರ್ಗಾವಣೆ

ರಾಜ್ಯದಲ್ಲಿ 10 ಐಎಎಸ್ ಅಧಿಕಾರಿಗಳ ವರ್ಗಾವಣೆ

#IAS #Transfer #state #transferlist
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ರಾಜ್ಯ ಕಾಂಗ್ರೆಸ್​ ಸರ್ಕಾರ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡಿದ್ದು, 10 ಮಂದಿ ಐಎಎಸ್​ ಅಧಿಕಾರಿಗಳನ್ನು (IAS Officers)ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.ಮತ್ತೆ ವರ್ಗಾವಣೆ ಪರ್ವ ಮುಂದುವರೆದಿದ್ದು, 10 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಐಎ ಎಸ್ ಅಧಿಕಾರಿಗಳ ವಿವರ

ಮೊಹಮ್ಮದ್‌ ಮೊಹಸಿನ್‌- ಪ್ರಧಾನ ಕಾರ್ಯದರ್ಶಿ ಕಾರ್ಮಿಕ ಇಲಾಖೆ, ಟಿ.ಎಚ್‌.ಎಂ.ಕುಮಾರ್‌ ವ್ಯವಸ್ಥಾಪಕ ನಿರ್ದೇಶಕ ಕೆಎಸ್‌ಎಸ್‌ಐಡಿಸಿ, ಆರ್‌. ಸ್ನೇಹಲ್‌ ನಿರ್ದೇಶಕಿ (ಐಟಿ) ಬೆಂಗಳೂರು ಮಹಾನಗರ ಪಾಲಿಕೆ, ಪ್ರಭುಲಿಂಗ ಕವಳಿಕಟ್ಟಿ ಆಯುಕ್ತ ಪಶು ಸಂಗೋಪನಾ, ಪಶು ವೈದ್ಯಕೀಯ ಸೇವೆಗಳ ಇಲಾಖೆ, ಜಿ. ಲಕ್ಷ್ಮೀಕಾಂತ ರೆಡ್ಡಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆಯುಐಡಿವೈ, ಪಾಂಡೆ ರಾಹುಲ್‌ ತುಕರಾಮ್‌ ಸಿಇಒ ರಾಯಚೂರು ಜಿಲ್ಲಾ ಪಂಚಾಯಿತಿ, ಎಸ್‌ಜೆ ಸೋಮಶೇಖರ್‌ ಸಿಇಒ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ, ಎಸ್‌. ರಂಗಪ್ಪ, ನಿರ್ದೇಶಕ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಕಂದಾಯ ಇಲಾಖೆ, ಡಾ. ಎಸ್‌. ಆಕಾಶ್‌ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರು ಕಲಬುರ್ಗಿ, ಅನ್ಮೂಲ್‌ ಜೈನ್‌ ನೋಂದಣಿ ಇಲಾಖೆ ಡಿಐಜಿ ಬೆಂಗಳೂರು ಹೀಗೆ 10 ಮಂದಿ ಅಧಿಕಾರಗಳನ್ನು ವಿವಿಧ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗಿದೆ.

 

Exit mobile version