ಬೆಂಗಳೂರು, ಮಾ. 29 : ಬೆಂಗಳೂರಿನಲ್ಲಿ ಬಾಡಿಗೆ ಮನೆಗಳು ಸಿಗುವುದೇ ಕಷ್ಟವಾಗಿದೆ. ಅಂತಹದ್ದರಲ್ಲಿ ಈಗ ಹೊಸ ನಿಯಮಗಳು ಬಂದಿದ್ದು, ಬ್ಯಾಚುಲರ್ ಗಳು ಮನೆ ಬಾಡಿಗೆಗೆ ಪಡೆಯಲು ಒದ್ದಾಡುವಂತಾಗಿದೆ. ಬೆಂಗಳುರಿನ ಹೌಸಿಂಗ್ ಸೊಸೈಟಿ ಒಂದು ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದನ್ನು ನೋಡಿದ ವ್ಯಕ್ತಿಯೊಬ್ಬರು, ಬ್ಯಾಚುಲರ್ ಗಳಿಗೆ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳು ಸಿಗುವುದಿಲ್ಲ ಎಂಬ ಅರ್ಥದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮಾರ್ಗ ಸೂಚಿಗಳನ್ನು ನೋಡಿದ ಇತರೆ, ಬ್ಯಾಚುಲರ್ ಗಳು ಕೂಡ ದಂಗಾಗಿದ್ದು, ಹಾಗಾದರೆ, ನಮಗೆ ಬಾಡಿಗೆ ಮನೆಗಳು ಸಿಗೋದಿಲ್ವಾ ಎಂಬ ಆಲೋಚನೆಯಲ್ಲಿ ಮುಳುಗಿದ್ದಾರೆ.
ಮಾರತ್ ಹಳ್ಳಿಯ ಹೌಸಿಂಗ್ ಸೊಸೈಟಿ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ ಬಾಡಿಗೆ ಮನೆಗಳನ್ನು ಬ್ಯಾಚುಲರ್ ಗಳು ಹಾಗೂ ಅವಿವಾಹಿತ ಮಹಿಳೆಯರಿಗೆ ಸಾಕಷ್ಟು ಸಮಸ್ಯೆ ಎದುರಾಗುವುದಂತೂ ಗ್ಯಾರೆಂಟಿ ಆಗಿದೆ. ಈ ಹೊಸ ಮಾರ್ಗಸೂಚಿ ಪ್ರಕಾರ, ಸಂಬಂಧಿಕರು, ಅಥವಾ ಯಾರೇ ಅತಿಥಿಗಳು ರಾತ್ರಿಯಲ್ಲಿ ತಂಗುವಂತಿಲ್ಲ. ರಾತ್ರಿ 10 ಗಂಟೆಯ ನಂತರ ಯಾರೂ ಫೋನ್ ನಲ್ಲಿ ಮಾತನಾಡುವುದು, ಹಾಡು ಜೋರಾಗಿ ಹಾಕಿ ಪಾರ್ಟಿ ಮಾಡುವಂತಿಲ್ಲ. ಇನ್ನು ರಾತ್ರಿ ಅತಿಥಿಗಳು ತಂಗಬೇಕೆಂದರೆ, ಅವರ ಗುರುತಿನ ಚೀಟಿ ನೀಡಿ, ಅಸೋಸಿಯೇಷನ್ ನಲ್ಲಿ ಅನುಮತಿಯನ್ನು ಪಡೆಯಬೇಕು.
ಹಾಗೊಂದು ವೇಳೆ, ನಿಯಮವನ್ನು ಉಲ್ಲಂಘನೆ ಮಾಡಿದರೆ, ಒಂದು ಸಾವಿರ ರೂಪಾಯಿ ದಂಡವನ್ನು ಕಟ್ಟಬೇಕು. ಇಲ್ಲವೇ, ಅಂತಹವರನ್ನು ಮನೆಯಿಂದ ಹೊರಗೆ ಹಾಕಲಾಗುತ್ತದೆ ಎಂದು ಹೇಳಲಾಗಿದೆ. ಈ ಮಾರ್ಗಸೂಚಿಗಳನ್ನು ನೋಡಿದವರೆಲ್ಲಾ ಶಾಕ್ ಆಗಿದ್ದಾರೆ. ಇದು ಹಾಸ್ಟೆಲ್ ಗಳಲ್ಲಿ ಇರುವ ನಿಯಮಗಳಿಗಿಂತಲೂ ಕೆಟ್ಟದಾಗಿದೆ. ಈ ಹೌಸಿಂಗ್ ಸೊಸೈಟಿಯ ಸಹವಾಸವೇ ಬೇಡ. ಹೀಗೆಲ್ಲಾ ನಿಯಮಗಳನ್ನು ಪಾಲಿಸುವುದು ಕಷ್ಟ. ಅದರಲ್ಲೂ ಭೇಂಗಳೂರಿನಂತಹ ನಗರಗಳಲ್ಲಿ ಕಷ್ಟವಾಗುತ್ತದೆ.
ಟ್ರಾಫಿಕ್ ನಲ್ಲಿ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗಬೇಕೆಂದರೆ, ಗಂಟೆ ಗಟ್ಟಲೆ ಬೇಕಾಗುತ್ತದೆ. ಇನ್ನು ರಾತ್ರಿ ಹೊತ್ತಿನಲ್ಲಿ ಫೋನ್ ನಲ್ಲಿ ಮಾತನಾಡುವುದು ನಮ್ಮ ವಯಕ್ತಿಕ ವಿಚಾರ. ಅದರ ಜೊತೆಗೆ ಧ್ವನಿ ಎಷ್ಟಿರಬೇಕು ಎಂಬುದನ್ನು ಹೇಗೆ ನಿರ್ಧಾರ ಮಾಡಲಾಗುತ್ತದೆ. ಅತಿಥಿಗಳು ತಂಗಲು ಪರ್ಮಿಷನ್ ತೆಗೆದುಕೊಳ್ಳುವುದು ಒಳ್ಳೆಯದೆ. ಇದು ಸೆಕ್ಯೂರಿಟಿಗೆ ಸಂಬಂಧಿಸಿದ್ದು. ಆದರೆ, ಇನ್ನಿತರೆ ಮಾರ್ಗಸೂಚಿಗಳನ್ನು ಪಾಲಿಸುವುದು ಬಹಳ ಕಷ್ಟ ಎಂದು ನೆಟ್ಟಿಗರು ಗರಂ ಆಗಿದ್ದಾರೆ.