Revenue Facts

ತಿರುಮಲ ತಿಮ್ಮಪ್ಪನ ಹುಂಡಿಯಲ್ಲಿ ಸಾವಿರಾರು ಕೋಟಿ ಕಲೆಕ್ಷನ್

ತಿರುಮಲ ತಿಮ್ಮಪ್ಪನ ಹುಂಡಿಯಲ್ಲಿ ಸಾವಿರಾರು ಕೋಟಿ ಕಲೆಕ್ಷನ್

ಬೆಂಗಳೂರು, ಜ. 17 : ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ನಿತ್ಯ ಸಾವಿರಾರು ಜನ ದೂರದ ಊರುಗಳಿಂದ ತೆರಳುತ್ತಾರೆ. ಜೀವನದಲ್ಲಿ ಪ್ರತಿಯೊಂದು ವಿಚಾರಕ್ಕೂ ತಿಮ್ಮಪ್ಪನ ಮೊರೆ ಹೋಗುವ ಭಕ್ತರೇ ಹೆಚ್ಚು. ಹರಕೆಗಳನ್ನು ಕಟ್ಟಿಕೊಳ್ಳುತ್ತಿರುತ್ತಾರೆ. ತಿಂಗಳಿಗೊಮೆಮ, ವರ್ಷಕ್ಕೊಮ್ಮೆ ಎಂದೆಲ್ಲಾ ಕೆಲವರು ಸದಾ ತಿರುಮಲಕ್ಕೆ ಹೋಗಿ ಶ್ರೀನಿವಾಸ ದರ್ಶನ ಪಡೆಯಲು ಬಯಸುತ್ತಾರೆ. ತಿರುಪತಿಯಲ್ಲಿ ಭಕ್ತರು 108 ರೀತಿ ದೇವರ ಸೇವೆ ಮಾಡುತ್ತಾರೆ. ಉರುಳು ಸೇವೆ, ಮುಡಿ ಕೊಡುವುದು, ಸುಪ್ರಭಾತ, ಕಾಲ್ನಡಿಗೆಯಲ್ಲಿ ಬರುವವರು, ಅಭಿಷೇಕ ಹೀಗೆ ಸಾಕಷ್ಟು ರೀತಿಯಲ್ಲಿ ತಮ್ಮ ಮನಸ್ಸಿಗೆ ತೋಚಿದ ಹಾಗೆ ಸೇವೆ ಮಾಡುತ್ತಾರೆ.

ತಿಮ್ಮಪ್ಪನ ಬಳಿ ಏನೇ ಬೇಡಿದರೂ ಕರುಣಿಸುತ್ತಾನೆ ಎಂಬ ನಂಬಿಕೆ ಹಲವರದ್ದು. ಇನ್ನು ಗಿರಿವಾಸನ ಭಕ್ತರಲ್ಲದಿದ್ದರೂ ತಿಮ್ಮಪ್ಪನ ಪ್ರಸಾದ ಲಡ್ಡು ಅನ್ನು ತಿನ್ನಲು ಬಯಸುವವರೂ ಇದ್ದಾರೆ. ಒಂದಲ್ಲಾ ಒಂದು ರೀತಿಯಲ್ಲಿ ತಿಮ್ಮಪ್ಪನಿಗೆ ನಮಿಸುವವರು ಪ್ರಪಂಚದಾದ್ಯಂತ ಇದ್ದಾರೆ. ಹೀಗಿರುವ ತಿಮ್ಮಪ್ಪನ ಹುಂಡಿಯಲ್ಲಿ ಸದಾ ಕೋಟಿ ಕೋಟಿ ಹಣ ಝಣ ಝಣ ಅಂತಿರುತ್ತದೆ. ಆದರೆ, ತಿಮ್ಮಪ್ಪನ ದರ್ಶನ ಮಾಡಲು ಭಕ್ತರು ತಿಂಗಳಾನುಗಟ್ಟಲೆ ಕಾಯಲು ಕೂಡ ಸಿದ್ಧರಿರುತ್ತಾರೆ. ಒಂದು ತಿಂಗಳು ಇಲ್ಲವೇ ಮೂರು ತಿಂಗಳ ಕಾಲ ಮುಂಚಿತವಾಗಿಯೇ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುತ್ತಾರೆ.

ಜಗತ್ತಿನ ಶ್ರೀಮಂತ ದೇವರು ಎನಿಸಿಕೊಂಡಿರುವ ತಿಮ್ಮಪ್ಪ ಕಳೆದ ವರ್ಷ ಬರೋಬ್ಬರಿ 1,450 ಕೋಟಿ ಕಲೆಕ್ಷನ್‌ ಮಾಡಿ ಮತ್ತೆ ಸುದ್ದಿಯಾಗಿದ್ದಾನೆ. ತಿಮ್ಮಪ್ಪನ ಸಂಪತ್ತು 2.26 ಲಕ್ಷ ಕೋಟಿ ಎಂದು ಈ ಹಿಂದೆಯೇ ಬಹಿರಂಗವಾಗಿತ್ತು. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ತಿಮ್ಮಪ್ಪನ ದೇಗುಲ ಸ್ಥಾಪಿತವಾಗಿದ್ದು 1933ರಲ್ಲಿ. ಅಂದಿನಿಂದ ತಿಮ್ಮಪ್ಪನ ದೇಗುಲಕ್ಕೆ ಬಂದ ದೇಣಿಗೆ ಲೆಕ್ಕವಿಲ್ಲದಷ್ಟು. ತಿಮ್ಮಪ್ಪನಿಗೆ ಸಂದ 11 ಸಾವಿರ ಕೆಜಿಗೂ ಅಧಿಕ ಚಿನ್ನ ವಿವಿಧ ಬ್ಯಾಂಕ್‌ ಗಳಲ್ಲಿ ಇಡಲಾಗಿದೆ. ಹತ್ತಿರತ್ತಿರ ಸುಮಾರು 17 ಸಾವಿರ ಕೋಟಿ ಹಣವನ್ನು ಬ್ಯಾಂಕ್‌ ನಲ್ಲಿ ಠೇವಣಿ ಮಾಡಲಾಗಿದೆ. ಇನ್ನು ತಿಮ್ಮಪ್ಪನ ಬಳಿ ವಜ್ರ, ವೈಡೂರ್ಯ ಗಳಿಗೆ ಲೆಕ್ಕವೇ ಇಲ್ಲ.

 

2022ರಲ್ಲಿ ಟಿಟಿಡಿಯಲ್ಲಿ ಒಟ್ಟು 11.54 ಲಕ್ಷ ಲಡ್ಡುಗಳು ಮಾರಾಟವಾಗಿದೆ. 2021ರಲ್ಲಿ 5.96 ಲಕ್ಷ ಲಡ್ಡುಗಳನ್ನು ಭಕ್ತರು ಖರೀದಿಸಿದ್ದರು. ಟಿಟಿಡಿ ಅಧಿಕೃತ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ ತಿಂಗಳೊಂದರಲ್ಲೇ ಟಿಟಿಡಿ ಹುಂಡಿ ಸಂಗ್ರಹಕ್ಕೆ 129.37 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದೆ.ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 20.25 ಲಕ್ಷ ಎಂದು ಹೇಳಲಾಗಿದೆ. ಈ ವರ್ಷ ಜನವರಿ 11 ರವರೆಗೆ 6 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಶ್ರೀವಾರಿ ಹುಂಡಿಯಲ್ಲಿ 39.40 ಕೋಟಿ ರೂ. ಕಲೆಕ್ಷನ್‌ ಆಗಿದೆ. ಟಿಟಿಡಿ 2022 ರಲ್ಲಿ 11.54 ಲಕ್ಷ ಲಡ್ಡು ಪ್ರಸಾದವನ್ನು ಮಾರಾಟ ಮಾಡಿದೆ.

 

ತಿರುಮಲ ತಿರುಪತಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ ಪ್ರಕಾರ, ಕಳೆದ ವರ್ಷ ಅಂದರೆ 2021ರಲ್ಲಿ 2.37 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ದೇಗುಲದ ಹುಂಡಿಯಲ್ಲಿ 833.41 ಕೋಟಿ ರೂಪಾಯಿಗಳು ಸಂಗ್ರಹವಾಗಿತ್ತು. 2021 ರಲ್ಲಿ ಭೇಟಿ ನೀಡಿದ ಭಕ್ತರ ಸಂಖ್ಯೆ 1.04 ಕೋಟಿಯಷ್ಟಿತ್ತು. 2022 ರಲ್ಲಿ ದೇಗುಲಕ್ಕೆ 2.37 ಕೋಟಿ ಭಕ್ತರು ಭೇಟಿ ನೀಡಿದ್ದಾರೆ. ಬರೋಬ್ಬರಿ 1,450.50 ಕೋಟಿ ಹುಂಡಿ ಸಂಗ್ರಹವಾಗಿದೆ ಎಂದು ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Exit mobile version