Revenue Facts

ಮನೆಯ ಅಂದವನ್ನು ಹೆಚ್ಚಿಸುವ ಕಿಟಕಿಯನ್ನು ಆರಿಸಿಕೊಳ್ಳಿ..

ಮನೆಯ ಅಂದವನ್ನು ಹೆಚ್ಚಿಸುವ ಕಿಟಕಿಯನ್ನು ಆರಿಸಿಕೊಳ್ಳಿ..

ಬೆಂಗಳೂರು, ಫೆ. 08 : ಒಂದು ಮನೆಯನ್ನು ಕಟ್ಟುವಾಗ ಎಷ್ಟೇ ಜಾಗರೂಕರಾಗಿದ್ದರೂ ಕಡಿಮೆಯೇ. ಮನೆಯ ಹೊಸ್ತಿಲಿನಿಂದ ಹಿಡಿದು ಬಚ್ಚಲು ಮನೆಯ ಕಿಟಕಿಯವರೆಗೂ ಜಾಗರೂಕರಾಗಿರಬೇಕು. ಕಿಟಕಿ ಎಂದಾಗ ನೆನಪಾಯ್ತು ನೋಡಿ. ನೀವೇನಾದರೂ ಮನೆಯನ್ನು ಕಟ್ಟುತ್ತಿದ್ದರೆ, ಯಾವುದೋ ಒಂದು ಕಿಟಕಿ ಇದ್ದರಾಯ್ತು ಎಂದು ನೆಗಲೆಕ್ಟ್ ಮಾಡಲೇಬೇಡಿ. ಮನೆಗೆ ಕಿಟಕಿಯನ್ನು ಅಳವಡಿಸುವಾಗ ನಿಮ್ಮ ಮನೆಯ ಕಿಟಕಿ ಹೇಗಿರಬೇಕು ಎಂದು ನೀವೇ ನಿರ್ಧರಿಸಿ. ಈಗಂತೂ ಮಾರುಕಟ್ಟೆಯಲ್ಲಿ ಸಾಕಷ್ಟು ರೀತಿಯ ಕಿಟಕಿಗಳಿವೆ. ನಿಮ್ಮ ಮನೆಗೆ ಸೂಕ್ತವೆನಿಸುವ ಹಾಗೂ ಮನೆಯ ಅಂದವನ್ನು ಹೆಚ್ಚಿಸುವಂತಹ ಕಿಟಕಿಗಳನ್ನು ಡಿಸೈನ್ ಅನ್ನು ಆರಿಸಿಕೊಳ್ಳಿ.

ಕಿಟಕಿಯ ವಿನ್ಯಾಸ: ಮನೆಗೆ ನೈಸರ್ಗಿಕ ಬೆಳಕು ಚೆಲ್ಲುವಂತೆ ಕಿಟಕಿ ಇರಲಿ. ಆರೋಗ್ಯಕರ ಜೀವನಕ್ಕೆ ನೈಸರ್ಗಿಕ ಬೆಳಕು ಬಹಳ ಮುಖ್ಯ. ಮನೆಯ ಕಿಟಕಿ ಸಾಕಷ್ಟು ದೊಡ್ಡದಾಗಿರಲಿ. ಸೂರ್ಯನ ಕಿರಣಗಳು ನೇರವಾಗಿ ಮನೆಯೊಳಗೆ ಪ್ರವೇಶಿಸಲು ಈ ಕಿಟಕಿಗಳು ಸಹಅಯ ಮಾಡುವಂತಿರಲಿ.ಈಗಂತೂ ನೆಲದಿಂದ ಸೀಲಿಂಗ್ವರೆಗೂ ಗಾಜಿನ ಕಿಟಕಿ ನಿರ್ಮಿಸಬಹುದು. ಇದರಿಂದ ಸ್ವಲ್ಪ ಖರ್ಚು ಹೆಚ್ಚಾಗಬಹುದಷ್ಟೇ.

ಎಲ್ಲೆಲ್ಲಿ ಹೇಗಿರಬೇಕು?
ಇನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಒಂದು ಕಡೆ ಇರುವಂತೆಯೇ ಎಲ್ಲಾ ರೂಮಿನಲ್ಲೂ ಕಿಟಕಿಗಳು ಇರುತ್ತವೆ. ಹೀಗೆ ಒಂದೇ ವಿನ್ಯಾಸದ ಕಿಟಕಿಗಳು ಇದ್ದರೆ, ಅದು ಅಷ್ಟು ಚೆನ್ನಾಗಿರುವುದಿಲ್ಲ. ಹಾಗಾಗಿ ಒಂದೊಂದು ಕೋಣೆಯ ಕಿಟಕಿಯ ವಿನ್ಯಾಸವೂ ಬೇರೆ ರೀತಿಯೇ ಇರಲಿ. ಮಲಗುವ ಕೊಣೆಗೆ ನಿಮ್ಮ ಮಂಚಕ್ಕೆ ಸರಿಯಾಗಿ ಬೆಳಕು ಬರುವಂತೆ ಕಿಟಕಿಯನ್ನು ಅಳವಡಿಸಿ. ಇನ್ನು ಡೈನಿಂಗ್ ಹಾಲ್ ನಲ್ಲೂ ದೊಡ್ಡ ಕಿಟಕಿ ಇರಲಿ. ಊಟ ಮಾಡುವಾಗ ತಣ್ಣನೆಯ ಗಾಳಿ ಬೀಸಿದರೆ, ಮನಸ್ಸಿಗೆ ಹಿತವಾಗಿರುತ್ತದೆ. ಅಡುಗೆ ಮನೆಯಲ್ಲಿ ಕಿಟಕಿಗಳು ಕೊಂಚ ಎತ್ತರದಲ್ಲಿರಲಿ. ಅದರಲ್ಲೂ ಸ್ಟೌವ್ ಇರುವ ಗೋಡೆಗೆ ಕಿಟಕಿ ಇದ್ದರೆ ಅದು ಸುರಕ್ಷಿತವೂ ಹೌದು. ಮಕ್ಕಳು ಓದುವ ಕೋಣೆಗೆ ಬೆಳಕು ಹೆಚ್ಚು ಬರುವಂತೆ ಗಾಜಿನ ಕಿಟಕಿ ಇರಲಿ. ಇದು ಓದಿಗೆ ಸಹಾಯವಾಗಿರುತ್ತದೆ.

ಟ್ರೆಂಡ್ ಗೆ ತಕ್ಕಂತೆ ಕಿಟಕಿಯನ್ನು ಅಳವಡಿಸಿ
ಈಗ ಕೆಲವರು ಮನೆಯನ್ನು ಜೀವನದಲ್ಲಿ ಒಂದು ಬಾರಿ ಕಟ್ಟುವುದು ಎಂದು ಹೆಚ್ಚು ಖರ್ಚು ಮಾಡಲು ಸಿದ್ಧರಿರುತ್ತಾರೆ. ಇನ್ನು ಕೆಲವರು ಹಳೆಯ ಕಾಲದ ವಿನ್ಯಾಸದಲ್ಲಿ ಮನೆಯನ್ನು ಕಟ್ಟಲು ಬಯಸುತ್ತಾರೆ. ಅಂತಹವರು ಹಳೆ ಕಾಲದ ರೀತಿಯ ಕಿಟಕಿಗಳನ್ನು ಅಳವಡಿಸುತ್ತಾರೆ. ಈಗ ಮಾರುಕಟ್ಟೆಯಲ್ಲೂ ಅದೇ ಟ್ರೆಂಡಿಂಗ್ ನಲ್ಲಿದೆ.

ಗ್ರಿಲ್ ಗಳ ಆಯ್ಕೆ
ಕಿಟಕಿಗಳಿಗೆ ವಿವಿಧ ರೀತಿಯ ಗ್ರಿಲ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೂವು, ಬಳ್ಳಿ ಆಕಾರದ ಗ್ರಿಲ್ ಗಳನ್ನು ನಿಮ್ಮ ಮನೆಯ ಕಿಟಕಿಗಳಿಗೆ ಅಳವಡಿಸಿ. ಇಲ್ಲವೇ ಎಲ್ಲರಂತೆ ಮಾಮೂಲಿಯಂತೆಯೇ ಗ್ರಿಲ್ ಗಳನ್ನು ಹಾಕುವುದರಿಂದ ಸಾಮಾನ್ಯವಾಗಿ ಕಾಣುತ್ತದೆ. ಇತರರಿಗಿಂತ ವಿಭಿನ್ನವಾಗಿ ಯೋಚಿಸಿ ನಿಮ್ಮ ಮನೆಯ ಕಿಟಕಿಗೆ ಗ್ರಿಲ್ ಬಳಸಿ. ಸೌಂದರ್ಯ ಹೆಚ್ಚಿಸುವ ಸಂರಚನೆಯ ಆಯತಾಕಾರ, ಚೌಕಾಕಾರ ಹಾಗೂ ಉದನೆಯ ವಿನಾ ಪದ ಕಿಟಕಿಯನು ಆಯ್ಕೆ ಸಹಾಯಕ ವಾಗುವಂತಿರಲಿ.

ಕಿಟಕಿಗೆ ಗಾಜು

ಇನ್ನು ಕಿಟಕಿಗೆ ಗಾಜಿನ ಬಾಗಿಲನ್ನು ಆಯ್ಕೆ ಮಾಡುವಾಗ ಎಚ್ಚರವಹಿಸಿ. ಗಾಜಿನಲ್ಲಿ ತರಹೇವಾರಿ ವಿನ್ಯಾಸಗಳಿವೆ. ಕೆಲವು ಗಾಜಿನ ಮೇಲೆ ಚಿತ್ತಾರ ಬಿಡಿಸಿರುವುದು ಸಿಗುತ್ತವೆ. ಕೆಲವು ಒಳಗಿನಿಂದ ನೋಡಿದರೆ, ಆಚೆ ಯಾರಿದ್ದಾರೆ ಎಂಬುದು ತಿಳಿಯುತ್ತದೆ. ಆದರೆ, ಹೊರಗಿನವರಿಗೆ ಒಳಗಿನ ದೃಶ್ಯ ಕಾಣುವುದಿಲ್ಲ. ಇನ್ನು ಕೆಲ ಗಾಜುಗಳು ಕನ್ನಡಿಯಂತೆ ಇರುತ್ತವೆ. ಹೀಗೆ ಹಲವು ಬಗೆಯ ಗಾಜುಗಳಿವೆ. ನಿಮ್ಮ ಕಿಟಕಿಗೆ ಯಾವುದು ಸೂಕ್ತ ಎಂಬುದನ್ನು ಯೋಚಿಸಿ ನಿರ್ಧರಿಸಿ.

Exit mobile version