Revenue Facts

ನಿಮ್ಮ ಮನೆಯ ಅಂದವನ್ನು ಈ ಗಿಡಗಳನ್ನು ತಂದು ಹೆಚ್ಚಿಸಿ..

ನಿಮ್ಮ ಮನೆಯ ಅಂದವನ್ನು ಈ ಗಿಡಗಳನ್ನು ತಂದು ಹೆಚ್ಚಿಸಿ..

ಬೆಂಗಳೂರು, ಜ. 02 : ಈಗ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಅಲಂಕಾರಿಕ ಗಿಡಗಳನ್ನು ನೆಡಲು ಬಯಸುತ್ತಾರೆ. ಇದರಿಂದ ಮನೆಯ ಅಂದವನ್ನು ಹೆಚ್ಚಿಸಬಹುದು ಕೂಡ. ಮನೆಯ ಅಂದದ ಜೊತೆಗೆ ಮನಸ್ಸಿನ ನೆಮ್ಮದಿಗೂ ಹಸಿರಿನ ಗಿಡಗಳು ಸಹಾಯಕಾರಿಯಾಗಿವೆ. ತರಹೇವಾರಿ ಪಾಟ್‌ ಗಳು ಮಾರುಕಟ್ಟೆಗಳಲ್ಲಿ ಸಿಗುತ್ತವೆ. ತಮ್ಮ ಮನೆಯ ಬಣ್ಣಕ್ಕೆ ಹೊಂದಿಕೆಯಾಗುವಂತಹ ಪಾಟ್‌ ಗಳನ್ನು ತಂದು ಮನೆಯೊಳಗೆ ಬೆಳೆಯಬಹುದಾದಂತಹ ಗಿಡಗಳನ್ನು ನೆಡುತ್ತಾರೆ. ಮನೆಯೊಳಗೆ ಗಿಡಗಳು ಇರುವುದರಿಂದ ಆರೋಗ್ಯಕ್ಕೂ ಪ್ರಯೋಜನವಿದೆ. ಆದರೆ, ಮನೆಯೊಳಗೆ ಬೆಳೆಸಲು ಯಾವ ಗಿಡ ಸೂಕ್ತ ಎಂಬುದರ ಬಗ್ಗೆ ಮಾಹಿತಿ ಇರಬೇಕು.

ಮನೆಗೆ ಅಂದವಾಗಿರುತ್ತವೆ ಎಂದು ಯಾವ ಗಿಡಗಳೆಂದರೆ ಅವನ್ನು ತರುವುದು ಸರಿಯಲ್ಲ. ಮನೆಯೊಳಗೆ ಬೆಳೆಯುವುದಕ್ಕೆ ಸೂಕ್ತವಾದ ಗಿಡಗಳನ್ನು ಆರಿಸಿ ತರಬೇಕು. ಮನೆಯೊಳಗೆ ಬೆಳಯುವ ಗಿಡಗಳು ಹೆಚ್ಚು ಕಾಲ ಪೋಷಣೆ ಇಲ್ಲದಿದ್ದರು ಹಸಿರಾಗಿರುವಮತಹ ಗಿಡಗಳನ್ನು ಗಮನವಿಟ್ಟು ಆರಿಸಿಕೊಳ್ಳಬೇಕು. ಎಲ್ಲಾದರೂ ದೂರ ಪ್ರಯಾಣ ಂಆಡಿದಾಗ ಮನೆ ಬೀಗ ಹಾಕಿದರೆ, ಗಿಡಗಳಿಗೆ ನೀರಿಲ್ಲ ಎಂದರೆ, ಒಣಗಿ ಬಿಡುತ್ತವೆ. ಇದರಿಂದ ಹೆಚ್ಚು ಹಣ ಕೊಟ್ಟು, ಇಷ್ಟ ಪಟ್ಟು ತಂದ ಗಿಡ ಒಣಗಿ ಹೋದರೆ ನಿಮಗೆ ಬೇಸರವಾಗುತ್ತದೆ. ಹಾಗಾಗಿ ಎಚ್ಚರದಿಂದ ಗಿಡವನ್ನು ಆರಿಸುವುದು ಒಳ್ಳೆಯದು.

ಮನೆಯೊಳಗೆ ಬೆಳಯಬಹುದಾದಂತಹ, ವಿಶೇಷ ಗಿಡಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಪೀಸ್ ಲಿಲ್ಲಿ, ಫಿಲೋಡೆಂಡ್ರಾನ್, ಪೊಥೋಸ್, ಕ್ಯಾಲಡಿಯಮ್, ಇಂಗ್ಲಿಷ್ ಐವಿ ಗಿಡಗಳು ನಿಮ್ಮ ಮನೆಗೆ ಚೆಂದವಾಗಿ ಕಾಣುವಂತೆ ಮಾಡುತ್ತದೆ. ಹಾಗಾದರೆ ಬನ್ನಿ, ಮನೆಯೊಳಗೆ ಯಾವ ಗಿಡಗಳನ್ನು ನೆಟ್ಟರೆ ಸೂಕ್ತ. ಅವುಗಳಿಂದ ಮಕ್ಕಳ ಮೇಲೆ ಯಾವ ಪರಿಣಾಮಗಳು ಬೀರಬಹುದು ಎಂದು ತಿಳಿಯೋಣ.

ಪೀಸ್ ಲಿಲ್ಲಿಗಳು:
ಇದು ನಿಜವಾದ ಲಿಲ್ಲಿ ಗಿಡಗಳಲ್ಲ. ಬದಲಿಗೆ ನಿತ್ಯ ಹರಿದ್ವರ್ಣ ಸಸ್ಯಗಳು. ಇದರ ಎಲೆ ಹಾಗೂ ಹೂವುಗಳು ಹೊಳಪಿನಿಂದ ಕೂಡಿರುತ್ತವೆ. ಇದನ್ನು ಮನೆಯಲ್ಲಿ ಸುಲಭವಾಗಿ ಬೆಳೆಯಬಹುದಾಗಿದೆ. ಇದು ವಾಯು ಶುದ್ಧೀಕರಣವನ್ನು ಮಾಡುತ್ತದೆ.

ಫಿಲೋಡೆಂಡ್ರಾನ್:
ಇದನ್ನು ಸಾಮಾನ್ಯವಾಗಿ ಹಲವರ ಮನೆಯಲ್ಲಿ ನೋಡಬಹುದು. ಇದು ಗಿಡ ಮತ್ತು ಬಳ್ಳಿ ಎರಡೂ ರೂಪದಲ್ಲಿ ದೊರೆಯುತ್ತದೆ. ಇದನ್ನು ಮನೆಯ ಒಳಗೆ ಇಡುವುದರಿಂದ ಮನೆಯ ಅಂದ ಹೆಚ್ಚಾಗುತ್ತದೆ. ನೇತಾಡುವ ಪಾಟ್‌ ಗಳಲ್ಲಿಯೂ ಇದನ್ನು ಬೆಳೆಸಬಹುದು. ಮನೆಯ ಬಾಲ್ಕನಿಗಳಲ್ಲಿ ನೇತು ಹಾಕಬಹುದು.

ಪೊಥೋಸ್:
ಡೆವಿಲ್ಸ್ ಐವಿ ಎಂದು ಕೂಡ ಕರೆಯಲಾಗುತ್ತದೆ. ಈ ಗಿಡವೈ ಗಾಳಿಯನ್ನು ಶುದ್ಧೀಕರಿಸುತ್ತದೆ. ಪೊಥೋಸ್‌ ಗಿಡವನ್ನು ನೋಡಿಕೊಳ್ಳುವುದು ಕೂಡ ತುಂಬಾನೇ ಸುಲಭ.

ಕ್ಯಾಲಡಿಯಮ್:
ಈದು ಜನಪ್ರಿಯವಾದ ಸಸ್ಯವಾಗಿದೆ. ಇದನ್ನು ಆನೆಯ ಕಿವಿ ಎಂದೂ ಕೂಡ ಕರೆಯುತ್ತಾರೆ. ಕೆಲವರು ದೇವತೆಗಳ ರೆಕ್ಕೆಗಳು ಎನ್ನುತ್ತಾರೆ. ಕೆಂಪು, ಗುಲಾಬಿ ಮತ್ತು ಬಿಳಿ ಸೇರಿದಂತೆ ಹಲವು ಬಣ್ಣಗಳಲ್ಲಿ ಇವು ಲಭ್ಯವಿರುತ್ತವೆ. ಇದಕ್ಕೆ ಹೆಚ್ಚಿನ ಬೆಳಕು ಬೇಕಾಗುವುದಿಲ್ಲ. ಈ ಗಿಡಗಳು ಹೆಚ್ಚು ಆಕರ್ಷಕವಾಗಿವೆ.

ಇಂಗ್ಲಿಷ್ ಐವಿ:
ಈ ಗಿಡಗಳು ಮನೆಯಲ್ಲಿ ಬೆಳೆಯಲು ಸುಲಭವಾಗಿರುತ್ತದೆ. ಇದು ಗಾಳಿಯನ್ನಷ್ಟೇ ಅಲ್ಲದೇ, ಹಾನಿಕಾರಕ ಕಣಗಳನ್ನು ತೆಗೆದು ಹಾಕುತ್ತದೆ. ಈ ಸಸ್ಯಗಳು ಮನೆಯೊಳಗೆ ಇಟ್ಟರೆ ಸುಂದರವಾಗಿ ಕಾಣುತ್ತವೆ.

Exit mobile version