Revenue Facts

ಮನೆಗೆ ಯಾವ ರೀತಿಯ ರೀಡಿಂಗ್‌ ಟೇಬಲ್‌ ಇದ್ದರೆ ಬಾಳಿಕೆ ಹೆಚ್ಚು..

ಬೆಂಗಳೂರು, ಫೆ. 14 : ಮನೆಯಲ್ಲಿ ಮಕ್ಕಳಿದ್ದಾರೆ ಎಂದರೆ, ಅವರಿಗೊಂದು ಓದುವ ಟೇಬಲ್‌ ಇದ್ದರೆ ಚೆನ್ನ. ಮಕ್ಕಳು ಓದುವ ಹಾಗೂ ಹೋಮ್‌ ವರ್ಕ್‌ ಬರೆಯುವ ಟೇಬಲ್‌ ಗಳನ್ನು ತಂದರೆ ಅವರಿಗೆ ಉಪಯೋಗವಾಗುತ್ತದೆ. ಡೈನಿಂಗ್‌ ಹಾಲ್ನಲ್ಲಿ, ಟೀ ಪಅಯ್‌ ಗಳ ಮೇಲೆ ಮಕ್ಕಳು ಪುಸ್ತಕ, ಪೆನ್ನುಗಳನ್ನು ಚೆಲ್ಲಾ-ಪಿಲ್ಲಿಯಾಗಿ ಹರಡುವುದು ತಪ್ಪುತ್ತದೆ. ಇನ್ನು ಹೈ ಸ್ಕೋಲ್‌ ಓದುವ ಮಕ್ಕಳಿಗೆ ರೀಡಿಂಗ್‌ ಟೇಬಲ್‌ ಇದ್ದರೆ, ತಡರಾತ್ರಿಯವರೆಗೂ ಪರೀಕ್ಷೆಗೆ ಓದಿಕೊಳ್ಳಲು ಸಹಾಯವಾಗುತ್ತದೆ. ಹಾಗಾಗಿ ಮನೆಯಲ್ಲಿ ಒಂದು ರೀಡಿಂಗ್‌ ಟೇಬಲ್‌ ಇದ್ದರೆ ಒಳ್ಳೆಯದು. ನಿಮ್ಮ ಮನೆಗೆ ರೀಡಿಂಗ್‌ ಟೇಬಲ್‌ ಅನ್ನು ಆರಿಸುವ ಮುನ್ನ ಈ ಲೇಖನ ಓದಿ.., ಯಾವುದು ಬೇಕೋ ಅದನ್ನೇ ಆರಿಸಿಕೊಳ್ಳಿ.

ಐಕಿಯಾದಲ್ಲಿ ergonomic ಎಂಬ ಸ್ಟಡಿ ಟೇಬಲ್‌ ಸಿಗುತ್ತದೆ. ಈ ಟೇಬಲ್‌ ಹಲವು ಬಣ್ಣಗಳಲ್ಲಿ ಲಭ್ಯವಿದ್ದು, ಮಕ್ಕಳು ಬೆಳೆದಂತೆ ಅವರ ಎತ್ತರಕ್ಕೆ ಸರಿಯಾಗಿ ಜೋಡಿಸಿಕೊಳ್ಳಬಹುದಾಗಿದೆ. ಇದನ್ನು ದೀರ್ಘಕಾಲದವರೆಗೂ ಉಪಯೋಗಿಸಬಹುದಾಗಿದೆ. ಹಣ ಉಳಿತಾಯವೂ ಆಗುತ್ತದೆ.

Two in one: ಇದನ್ನು ಎರಡು ರೀತಿಯಲ್ಲಿ ಬಳಸಬಹುದು. ಮಕ್ಕಳು ಕುಳಿತು ಓದಬೇಕು ಎನಿಸಿದಾಗ ಒಂದು ಬಟನ್‌ ಪ್ರೆಸ್‌ ಮಾಡಿದರೆ, ಅವರಿಗೆ ಬೇಕಾದ ಎತ್ತರಕ್ಕೆ ಅಡ್ಜಸ್ಟ್‌ ಆಗುತ್ತದೆ. ಇನ್ನು ನಿಲ್ಲಬೇಕು ಎನಿಸಿದರೂ ನಿಂತು ಓದಲು ಸಹಾಯ ಮಾಡುತ್ತದೆ.

ಶೇಖರಣಾ ವ್ಯವಸ್ಥೆ: ಈ ರೀಡಿಂಗ್‌ ಟೇಬಲ್‌ ಅನ್ನು ಖರೀದಿಸಿದರೆ, ಮಕ್ಕಳ ಕೆಲ ಪುಸ್ಕಗಳು ಸೇರಿಂದಂತೆ ಕೆಲ ಸಾಮಾಗ್ರಿಗಳನ್ನು ಜೋಡಿಸಿಕೊಳ್ಳಲು ಡ್ರಾಯರ್‌ ಇರುತ್ತದೆ. ಇದರಲ್ಲಿ ಮಕ್ಕಳ ಪುಸ್ತಕ, ಪೆನ್ನು, ಪೆನ್ಸಿಲ್‌, ಪೇಪರ್‌ ಗಳನ್ನು ಶೇಕರಿಸಿಡಬಹುದು.

ಮಕ್ಕಳಿಗಾಗಿ ಟೇಬಲ್: ಇದು ಚಿಕ್ಕ ಮಕ್ಕಳಿಗಾಗಿ ತಯಾರಿಸಿರುವ ರೀಡಿಂಗ್‌ ಟೇಬಲ್.‌ ಟೇಬಲ್‌ ಜೊತೆಗೆ ಪುಟಾಣಿಗಳಿಗೆ ಚೇರ್‌ ಕೂಡ ಬರುತ್ತದೆ. ಇದರ ಮೂಲಕ ಮಕ್ಕಳು ಡ್ಯಾಯಿಂಗ್‌ ಮಾಡುವುದು, ಸಣ್ಣ ಆಟಗಳನ್ನು ಆಡಲು ಸಹಾಯಕವಾಗಿದೆ. ಈ ಡೆಸ್ಕ್‌ ಅನ್ನು ಖರೀದಿಸಿದರೆ, ಮಕ್ಕಳು ಇದರಲ್ಲಿ ಆಟವಾಡುತ್ತಾ ಸಮಯ ಕಳೆಯುತ್ತಾರೆ.

ಕಾರ್ನರ್‌ ಡೆಸ್ಕ್:‌ ಈ ಕಾರ್ನರ್‌ ಡೆಸ್ಕ್‌ ಗಳನ್ನು ಖರೀದಿಸಿದರೆ, ಮನೆಯಲ್ಲಿ ಜಾಗ ಉಳಿತಾಯವಾಗುತ್ತದೆ. ಎಲ್‌ ಶೇಪ್‌ ನಲ್ಲಿ ಬರುವ ಈ ಟೇಬಲ್‌ ಗಳು, ಕೆಳಗೆ ಶೆಫ್‌ ಗಳನ್ನು ಹೊಂದಿರುತ್ತವೆ. ಇದರಿಂದ ಮನೆಯಲ್ಲಿ ಜಾಗ ಉಳಿತಾಯವೂ ಆಗುತ್ತದೆ. ಕೆಲ ವಸ್ತುಗಳನ್ನು ಇಡಲು ಸ್ಥಳವೂ ಸಿಗುತ್ತದೆ.

ಸ್ಟೈಲಿಶ್‌ ಡೆಸ್ಕ್:‌ ಇದು ಈಗಿನ ಆಧುನಿಕ ಮನೆಗಳಿಗೆ ಹೇಳಿ ಮಾಡಿಸಿದ ಡೆಸ್ಕ್‌ ಗಳಾಗಿವೆ. ಇದು ಮನೆಯ ಅಂದವನ್ನೂ ಹೆಚ್ಚಿಸುವುದರ ಜೊತೆಗೆ ಕುಳಿತು ಓದಲು ಹಾಗೂ ಬರೆಯಲು ಇಲ್ಲವೇ ಕಚೇರಿ ಕೆಲಸಗಳನ್ನು ಮಾಡಲು ಕೂಡ ಸಹಾಯ ಮಾಡುತ್ತದೆ.

ಇನ್ನು ನಿಮ್ಮ ಮನೆಗೆ ರೀಡಿಂಗ್‌ ಟೇಬಲ್‌ ಅನ್ನು ಆರಿಸುವಾಗ ಅದರ ಬಾಳಿಕೆ ಬಗ್ಗೆ ಮಾಹಿತಿ ತಿಳಿಯಿರಿ. ಇನ್ನು ಆ ಟೇಬಲ್‌ ನಿಮ್ಮ ಮನೆಗೆ ಸೂಕ್ತವೇ ಎಂಬುದನ್ನು ಅರಿಯಿರಿ. ಈಗ ಮರ, ಪ್ಲಾಸ್ಟಿಕ್‌, ಮೆಟಲ್ ಸೇರಿದಂತೆ ಹಲವು ಬಗೆಯ ಟೇಬಲ್‌ ಗಳು ಲಭ್ಯವಿದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದು ಬಳಿಕವಷ್ಟೇ ಆರಿಸಿಕೊಳ್ಳಿ.

Exit mobile version