Revenue Facts

Karnataka BJP Candidate:ಕರ್ನಾಟಕದಲ್ಲಿ 20 ಕ್ಷೇತ್ರಗಳಿಗೆ ಟಿಕೆಟ್ ಪ್ರಕಟ; 8 ಹಾಲಿ ಸಂಸದರಿಗೆ ಟಿಕೆಟ್ ಮಿಸ್

ಬೆಂಗಳೂರು : ಲೋಕಸಭೆ ಚುನಾವಣೆಗೆ (Lokasabha election) ಬಿಜೆಪಿಯ ಎರಡನೇ ಪಟ್ಟಿ ಇಂದು ಪ್ರಕಟವಾಗಿದೆ. ಇನ್ನು ಕರ್ನಾಟಕ 20 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ.ಬಿಜೆಪಿಯ ಒಟ್ಟು 8 ಹಾಲಿ ಸದಸ್ಯರಿಗೆ ಈ ಬಾರಿ ಟಿಕೆಟ್‌ ತಪ್ಪಿದೆ. ಪ್ರತಾಪ್‌ ಸಿಂಹ, ಡಿವಿ ಸದಾನಂದ ಗೌಡ, ಕರಡಿ ಸಂಗಣ್ಣ, ಶಿವಕುಮಾರ್‌ ಉದಾಸಿ, ಜಿಎಸ್‌ ಬಸವರಾಜು ಅವರಿಗೆ ಟಿಕೆಟ್‌ ತಪ್ಪಿದೆ. ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ.ಒಟ್ಟು 28 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿದ್ದು, ಇನ್ನುಳಿದ 25 ಕ್ಷೇತ್ರಗಳ ಪೈಕಿ ಈಗ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

ಬಿಜೆಪಿ ಅಭ್ಯರ್ಥಿಗಳು;ಯಾರ್ಯಾರಿಗೆ ಟಿಕೆಟ್

ಚಿಕ್ಕೋಡಿ: ಅಣ್ಣಾಸಾಹೇಬ್ ಜೊಲ್ಲೆ

ಬಾಗಲಕೋಟೆ: ಪಿಸಿ ಗದ್ದಿಗೌಡರ್

ವಿಜಯಪುರ: ರಮೇಶ್ ಜಿಗಜಿಣಗಿ

ಕಲಬುರಗಿ: ಉಮೇಶ್ ಜಾಧವ್

ಬೀದರ್: ಭಗವಂತ್ ಖೂಬಾ

ಕೊಪ್ಪಳ: ಬಸವರಾಜ್ ಕ್ಯಾವತೂರು

ಬಳ್ಳಾರಿ: ಶ್ರೀರಾಮುಲು

ಹಾವೇರಿ: ಬಸವರಾಜ್ ಬೊಮ್ಮಾಯಿ

ಧಾರವಾಡ: ಪ್ರಹ್ಲಾದ್ ಜೋಶಿ

ದಾವಣಗೆರೆ: ಗಾಯಿತ್ರಿ ಸಿದ್ದೇಶ್ವರ್

ಶಿವಮೊಗ್ಗ: ಬಿವೈ ರಾಘವೇಂದ್ರ

ಉಡುಪಿ-ಚಿಕ್ಕಮಗಳೂರು: ಕೋಟಾ ಶ್ರೀನಿವಾಸ್ ಪೂಜಾರಿ

ದಕ್ಷಿಣಕನ್ನಡ:ಮ ಕ್ಯಾಪ್ಟನ್ ಬ್ರಿಜೇಶ್ ಚೌಟಾ

ತುಮಕೂರು: ವಿ ಸೋಮಣ್ಣ

ಮೈಸೂರು: ಯದುವೀರ್ ಒಡೆಯರ್

ಚಾಮರಾಜನಗರ: ಬಾಲರಾಜ್

ಬೆಂಗಳೂರು ಗ್ರಾಮಾಂತರ: ಸಿಎನ್ ಮಂಜುನಾಥ್

ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ

ಬೆಂಗಳೂರು ಸೆಂಟ್ರಲ್ : ಪಿ ಸಿ ಮೋಹನ್

ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ

ಡಿಕೆ ಬ್ರದರ್ಸ್‌ ವಿರುದ್ಧ ಶಾಸಕ ಮುನಿರತ್ನ ಸಮರ

Exit mobile version