Revenue Facts

ನಕಲಿ ವೋಟರ್ ಐಡಿ‌ ಮಾರಾಟ ಮಾಡ್ತಿದ್ದಮೂವರು ಆರೋಪಿಗಳು ಅರೆಸ್ಟ್

ನಕಲಿ ವೋಟರ್ ಐಡಿ‌ ಮಾರಾಟ ಮಾಡ್ತಿದ್ದಮೂವರು ಆರೋಪಿಗಳು ಅರೆಸ್ಟ್

ಬೆಂಗಳೂರು;ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಪತ್ತೆಯಾದ ನಕಲಿ ವೋಟರ್ ಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಭರತ್, ಮೌನೇಶ್,ರಾಘವೇಂದ್ರ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.ಬಂಧಿತ ಆರೋಪಿಗಳ ಬಳಿ ಇದ್ದ 53 ನಕಲಿ ವೋಟರ್ ಐಡಿಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳು ಕಂಪ್ಯೂಟರ್​ ಅಂಗಡಿ ಇಟ್ಟುಕೊಂಡಿದ್ದು, ಹಣ ಪಡೆದು ನಕಲಿ ವೋಟರ್​ ಐಟಿ ತಯಾರಿಸ್ತಿದ್ದರು.ಆರೋಪಿಗಳು ಕಂಪ್ಯೂಟರ್ ಅಂಗಡಿ ಇಟ್ಟುಕೊಂಡಿದ್ದರು. ಉತ್ತರ ಭಾರತದಿಂದ ಬಂದವರಿಗೆ ಹಣ ಪಡೆದು ನಕಲಿ ವೋಟರ್ ಐಡಿ, ಪಾನ್ ಕಾರ್ಡ್ ಆಧಾರ್ ಕಾರ್ಡ್ ಗಳನ್ನು ತಯಾರಿಸಿ ಕೊಡುತ್ತಿದ್ದರು. ಜಪ್ತಿ ಮಾಡಲಾಗಿರುವ ನಕಲಿ ವೋಟರ್ ಐಡಿಗಳನ್ನು ಚುನವಣಾ ಆಯೋಗಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.ಒರಿಜಿನಲ್ ಐಡಿ ಕಾರ್ಡ್ ಎಂದು ಹಣ ಪಡೆದು ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತಿದ್ದ ಆರೋಪದ ಮೇಲೆ ಈ ಮೂವರ ವಿರುದ್ಧ ದೂರು ದಾಖಲಾಗಿತ್ತು.ಸಚಿವ ಭೈರತಿ ಪ್ರಭಾವದಿಂದ ಆರೋಪಿಗಳನ್ನು ಬಂಧಿಸದೆ ಕೇವಲ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಸಿಸಿಬಿ ಪೊಲೀಸರು ದಾಳಿ ಮಾಡಿ ಮೌನೇಶ್, ರಾಘವೇಂದ್ರ, ಭಗತ್​ನನ್ನು ವಶಕ್ಕೆ ಪಡೆದಿದ್ದರು. ದಾಳಿ ವೇಳೆ ಕಂಪ್ಯೂಟರ್ ಸೇರಿ ಹಲವು ವಸ್ತು ಜಪ್ತಿ ಮಾಡಲಾಗಿತ್ತು.ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾಗುವುದಕ್ಕೆ ಸಹಕಾರ ನೀಡಿದ್ದಾರೆ ಎಂಬ ಆರೋಪ ಇವರ ಮೇಲೆ ಕೇಳಿ ಬಂದಿತ್ತು.

Exit mobile version