Revenue Facts

ಇಂದಿನಿಂದ INDIA ಮೈತ್ರಿಕೂಟದ ಮೂರನೇ ಸಭೆ

ಇಂದಿನಿಂದ INDIA ಮೈತ್ರಿಕೂಟದ ಮೂರನೇ ಸಭೆ

#THIRD #MEETING #INDIA #ALLIANCE #TODAY

ಮುಂಬೈ;ಲೋಕಸಭೆ ಚುನಾವಣೆಗೆ ಸಿದ್ಧತೆಯ ಭಾಗವಾಗಿ ಇಂದಿನಿಂದ ವಿಪಕ್ಷಗಳ ಮಹಾ ಮೈತ್ರಿ ‘ಇಂಡಿಯಾ’ ಒಕ್ಕೂಟದ ಮೂರನೇ ಸಭೆ ನಡೆಯಲಿದೆ.ಆಡಳಿತಾರೂಢ ಬಿಜೆಪಿಗೆ ಪರ್ಯಾಯವಾಗಿ ರೂಪುಗೊಂಡಿರುವ ಪ್ರತಿಪಕ್ಷಗಳ ಮೈತ್ರಿಕೂಟ ‘INDIA’ದ ಮೂರನೇ ಸಭೆ ಗುರುವಾರ ಮುಂಬೈನಲ್ಲಿ ಆರಂಭವಾಗಲಿದೆ. ಈ ಸಭೆಯಲ್ಲಿ ಕಾಂಗ್ರೆಸ್ ಜೊತೆಗೆ 28 ರಾಜಕೀಯ ಪಕ್ಷಗಳ 63 ಪ್ರತಿನಿಧಿಗಳು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ INDIA ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಮೈತ್ರಿ ಲಾಂಛನ ಮತ್ತು ಸಮನ್ವಯ ಸಮಿತಿಯನ್ನು ಇಂದಿನ ಸಭೆಯಲ್ಲಿ ಪ್ರಕಟಿಸಲಾಗುವುದು.ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ ಕ್ಲೂಸಿವ್ ಅಲಯನ್ಸ್’ ಮೈತ್ರಿಕೂಟದ ಮೂರನೆಯ ಸಭೆ ಇಂದಿನಿಂದ ಎರಡು ದಿನ ಮುಂಬೈನಲ್ಲಿ ಆರಂಭವಾಗಲಿದೆ.ಮೈತ್ರಿಕೂಟದ ಲೋಗೋ ಅನಾವರಣ ಮಾಡಲಿದ್ದು, ಮೈತ್ರಿಕೂಟಕ್ಕೆ ಸಂಚಾಲಕರನ್ನು ನೇಮಕ ಮಾಡಲಾಗುವುದು.ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿರುವ ಸಮಾವೇಶದಲ್ಲಿ, ಮೈತ್ರಿಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲು, ದೇಶಾದ್ಯಂತ ಆಂದೋಲನಗಳನ್ನು ನಡೆಸಲು ಮತ್ತು ಸೀಟು ಹಂಚಿಕೆಗಾಗಿ ಜಂಟಿ ಯೋಜನೆಗಳನ್ನು ರೂಪಿಸಲು 27 ಪಕ್ಷಗಳ ನಾಯಕರು ಚರ್ಚೆ ನಡೆಸಲಿದ್ದಾರೆ.ಅರವಿಂದ ಕೇಜ್ರಿವಾಲ್, ಭಗವಂತ್ ಮಾನ್, ನಿತೀಶ್ ಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಂದು ಮುಂಬೈಗೆ ಬಂದಿಳಿಯಲಿದ್ದು, ನಂತರ ಉದ್ಧವ್ ಠಾಕ್ರೆ ಆಯೋಜಿಸಿದ್ದ ಔತಣಕೂಟದಲ್ಲಿ ಎಲ್ಲಾ ಸದಸ್ಯರು ಭಾಗವಹಿಸಲಿದ್ದಾರೆ.

Exit mobile version