Revenue Facts

ನಿಮ್ಮ ಮನೆಯ ಅಂದಕ್ಕೆ ಧಕ್ಕೆ ತರುವ ವಸ್ತುಗಳಿಂದ ಮುಕ್ತಿ ಪಡೆಯಿರಿ..

ನಿಮ್ಮ ಮನೆಯ ಅಂದಕ್ಕೆ ಧಕ್ಕೆ ತರುವ ವಸ್ತುಗಳಿಂದ ಮುಕ್ತಿ ಪಡೆಯಿರಿ..

ಬೆಂಗಳೂರು, ಡಿ. 20: ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಕಸ, ಧೂಳು ಬಂದು ಸೇರಿ ಬಿಡುತ್ತವೆ. ಗೃಹಿಣಿಯರಿಗೆ ಬೆಳಗ್ಗೆ ಎದ್ದಾಗಿನಿಂದಲೂ ರಾತ್ರಿ ಮಲಗುವ ವರೆಗೂ ಮನೆಯನ್ನು ಕ್ಲೀನ್ ಮಾಡುವುದೇ ದೊಡ್ಡ ಕೆಲಸವಾಗಿ ಬಿಡುತ್ತದೆ. ಒಂದು ಕಡೆಯಿಂದ ಸ್ವಚ್ಛ ಮಾಡಿದರೆ, ಮತ್ತೊಂದು ಕಡೆಯಿಂದ ಮತ್ತೆ ಬೇಡದ ವಸ್ತುಗಳು ಬಂದು ಸೇರಿ ಬಿಡುತ್ತವೆ. ಮನೆಯ ಸದಸ್ಯರು ಕೂಡ ಸ್ವಚ್ಛತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಇಲ್ಲದಿದ್ದರೆ, ಎಷ್ಟು ಕ್ಲೀನ್ ಮಾಡಿದರೂ ವೇಸ್ಟ್ ಆಗುತ್ತದೆ. ಎಲ್ಲೆಂದರಲ್ಲಿ ಬಟ್ಟೆ, ಬ್ಯಾಗ್ ಗಳನ್ನು ಇಡುವುದು, ವೇಸ್ಟ್ ಪೇಪರ್ ಗಳನ್ನು ಬಿಸಾಡುವುದು ಮಾಡಿದರೆ, ಮನೆಯು ಸ್ವಚ್ಛವಾಗಿ ಕಾಣಿಸುವುದೇ ಇಲ್ಲ.

ಇದನ್ನೆಲ್ಲಾ ಹೊರತು ಪಡಿಸಿ, ಮನೆಯ ಸ್ವಚ್ಛತೆಯನ್ನು ಕೆಲ ವಸ್ತುಗಳು ಕೂಡ ಹಾಳು ಮಾಡುತ್ತವೆ. ಅಂತಹ ವಸ್ತುಗಳು ಯಾವುವು..? ಆ ವಸ್ತುಗಳಿಂದಾಗುವ ಅಸ್ವಚ್ಛತೆಯನ್ನು ಹೇಗೆ ನಿರ್ಮೂಲನೆ ಮಾಡುವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ. ಸರಳ ಸೂತ್ರಗಳಿಂದ ನಿಮ್ಮ ಮನೆಯ ಅಂದವನ್ನು ಹೆಚ್ಚಿಸಿಕೊಳ್ಳಿ..

ಡೈನಿಂಗ್ ಟೇಬಲ್: ನಿಮ್ಮ ಮನೆಯಲ್ಲಿ ಡೈನಿಂಗ್ ಟೇಬಲ್ ಇದ್ದರೆ, ಮೊದಲು ಅದನ್ನು ಸ್ವಚ್ಛವಾಗಿಡಿ. ಅದರ ಮೇಲೆ ಬೇಡದ ಒಂದಷ್ಟು ವಸ್ತುಗಳನ್ನು ಇಡುವ ಬದಲು, ಖಾಲಿಯಾಗಿಡಲು ಪ್ರಯತ್ನಿಸಿ. ಊಟ, ತಿಂಡಿ ಮಾಡುವ ಸಂದರ್ಭದಲ್ಲಿ ಮಾತ್ರವೇ ಡೈನಿಂಗ್ ಟೇಬಲ್ ತುಂಬಿರಲಿ. ಅದನ್ನು ಹೊರತು ಪಡಿಸಿ, ಆದಷ್ಟು ಖಾಲಿಯಾಗಿಡಿ. ಹನ್ಣು, ಉಪ್ಪು, ಉಪ್ಪಿನಕಾಯಿ, ಚಟ್ನಿಪುಡಿಯನ್ನು ಟೇಬಲ್ ಮೇಲೆ ಇಡುವ ಬದಲು, ಅಡುಗೆ ಕೋಣೆಯಲ್ಲೇ ಇರಿಸಿ. ಬೇಕೆಂದಾಗ ಮಾತ್ರವೇ ಅನ್ನು ಡೈನಿಂಗ್ ಟೇಬಲ್ ಮೇಲೆ ತಂದಿಟ್ಟರೆ ಸಾಕು.

ಸಿಂಕ್ ಖಾಲಿ ಮಾಡಿ: ಇನ್ನು ನಿಮ್ಮ ಮನೆಯ ಸಿಂಕ್ ಅನ್ನು ಕೂಡ ಖಾಲಿ ಇಡಿ. ಅಡುಗೆ ಮುಗಿದ ಕೂಡಲೇ ಪಾತ್ರಗಳನ್ನು ತೊಳೇಧೂ ಭೀಢೀ> ಊಟವಾದ ಮೇಲೂ ಪಾತ್ರಗಳನ್ನು ಸಿಂಕ್ ನಲ್ಲಿ ಹಾಗೆ ಇಡುವುದರಿಂದ ವಾಸನೆ ಬರಬಹುದು, ಪಾತ್ರೆಯಲ್ಲಿನ ಆಹಾರಗಳು ಒಣಗಬಹುದು, ಇದರಿಂದ ಜಿರಲೆ, ಸೊಳ್ಳೆಯಂತಹ ಹುಳಗಳು ಅಡುಗೆ ಮನೆಗೆ ಬಂದು ಸ್ವಚ್ಛತೆಯನ್ನು ಹಾಳು ಮಾಡುತ್ತವೆ. ಹಾಗಾಗಿ ಸಿಂಕ್ ಅಲ್ಲಿ ಪಾತ್ರೆಗಳನ್ನಿಡದೇ, ಆಗಿಂದಾಗ್ಗೆ ತೊಳೆದಿಟ್ಟರೆ, ಸ್ವಚ್ಛತೆ ಎದ್ದು ಕಾಣುತ್ತದೆ.

ತೊಳೆಯುವ ಬಟ್ಟೆಯ ಬಾಕ್ಸ್: ಇನ್ನು ನಿನ್ನೆ ಧರಿಸಿದ ಬಟ್ಟೆಯನ್ನು ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಬಿಸಾಡುವ ಬದಲು, ಮುಚ್ಚಳವಿರುವ ಒಂದು ಬಾಕ್ಸ್ ಅನ್ನು ತಂದಿಡಿ. ತೊಳೆಯ ಬೇಕಾದ ಎಲ್ಲಾ ಬಟ್ಟೆಗಳನ್ನು ಅದರಲ್ಲಿ ಹಾಕಿಡಿ. ಬಾಕ್ಸ್ ಮೇಲೆ ಚೆಲ್ಲಾಪಿಲ್ಲಿಯಾಗಿ ಹಾಕುವುದು ಬೇಡ. ಇದು ಅಸ್ವಚ್ಛತೆಯನ್ನು ತೋರಿಸುತ್ತದೆ. ಬಾಕ್ಸ್ ಒಳಗೆ ಹಾಕಿ ಮುಚ್ಚಳ ಮುಚ್ಚಿ, ಆಗ ನೋಡಲು ಅಂದವಾಗಿರುತ್ತದೆ.

ಕಸದ ಡಬ್ಬಿಗೆ ಇರಲಿ ಮುಚ್ಚಳ: ಇನ್ನು ಕಸದ ಡಬ್ಬಿಗಳಿಗೆ ಮುಚ್ಚಳವಿರಲಿ. ತೆರೆದ ಕಸದ ಡಬ್ಬಿಯಿಂದ ದುರ್ವಾಸನೆ ಬರುತ್ತದೆ. ಆ ಕಸವನ್ನು ನೋಡಿದಷ್ಟೂ ಅಸಹ್ಯವಾಗುತ್ತದೆ. ಹೀಗೆಲ್ಲಾ ಆಗಬಾರದು ಎಂದು ಕಸದ ಡಬ್ಬಿಗೆ ಮುಚ್ಚಳವಿದ್ದು, ಸದಾ ಮುಚ್ಚಿಡಿ. ಆಗಾಗ ಈ ಕಸದ ಡಬ್ಬಿಯನ್ನು ತೊಳೆಯುವುದನ್ನು ಕೂಡ ಮರೆಯದಿರಿ.

ಕೊಳಕಾದ ಸ್ವಿಚ್ ಬೋರ್ಡ್: ಎಷ್ಟೇ ಸ್ವಚ್ಛಗೊಳಿಸಿದರೂ ಈ ಸ್ವಿಚ್ ಬೋರ್ಡ್ ಗಳ ಸುತ್ತ ಕೊಳೆ ಉಳಿದು ಬಿಡುತ್ತದೆ. ಹಾಗಾಗಿ ಆಗಾಗ ಈ ಸ್ವಿಚ್ ಬೋರ್ಡ್ ಗಳನ್ನು ಸ್ವಚ್ಛ ಮಾಡಿ. ಇಲ್ಲದಿದ್ದರೆ, ಕೊಳೆ ಕೂತು, ಗಾಢವಾದರೆ, ಎಷ್ಟು ತೊಳೆದರೂ ಹೋಗುವುದಿಲ್ಲ. ಹೀಗೆ ಮನೆಯಲ್ಲಿ ಸಣ್ಣ-ಪುಟ್ಟ ಬೇಡದ ವಸ್ತುಗಳನ್ನು ಬಿಸಾಡಿ. ಬೇಕಿರುವ ವಸ್ತುಗಳನ್ನು ಒಂದು ಕಡೆ ನೀಟ್ ಆಗಿ ಜೋಡಿಸಿ. ಹೇಗೆಂದರೆ ಹಾಗೆ ಇಟ್ಟರೆ, ಮನೆಯ ಅಂದವನ್ನು ಹಾಳು ಮಾಡುತ್ತದೆ. ಆದಷ್ಟು ಮನೆಯನ್ನು ಅಂದವಾಗಿಡಲು ಪ್ರಯತ್ನಿಸಿ.

Exit mobile version