Revenue Facts

ಭಯಾನಕ ಡೌ ಹಿಲ್ ಬಗ್ಗೆ ಜಗತ್ತಿಗೆ ತಿಳಿಯದ ಸತ್ಯಗಳು..

ಭಾರತದ ಅತ್ಯಂತ ಹದಗೆಟ್ಟ ಮತ್ತು ಭಯಾನಕ ಗಿರಿಧಾಮದಲ್ಲಿ ಡೌ ಹಿಲ್ ಕೂಡ ಒಂದು . ಇದು ಡಾರ್ಜಿಲಿಂಗ್ ನಿಂದ ಸುಮಾರು ೩೦ ಕಿ. ಮೀ. ದೂರವಿದೆ. ಇಲ್ಲಿ ಹೆಚ್ಚು ಅಹಿತಕರ ಘಟನೆಗಳು ನಡೆಯುತ್ತವೆ. ಡೌ ಹಿಲ್ ನಲ್ಲಿ ರಾತ್ರಿ ವೇಳೆ ಓಡಾಡಲು ಸಾಧ್ಯವಿಲ್ಲ. ಯಾಕೆಂದ್ರೆ ಇಲ್ಲಿ ಓಡಾಡಬೇಕಂದ್ರೆ ಹೃದಯವನ್ನ ಅಂಗೈನಲ್ಲಿಟ್ಟುಕೊಂಡು ಓಡಾಡಬೇಕಾಗುತ್ತೆ. ಇಲ್ಲಿ ನಡೆಯುವಂತಹ ಘಟನೆಗಳನ್ನ ನೋಡಿಯೆ ಹಲವಾರು ಜನರ ಉಸಿರು ನಿಂತು ಹೋಗಿದೆ. ಡೌ ಹಿಲ್ ಒಂದು ರೀತಿ ಪ್ರೇತಶಕ್ತಿಗಳು ವಾಸ ಮಾಡುತ್ತಿರುವ ತವರು ಮನೆಯಾಗಿದೆ ಎಂದ್ರೆ ತಪ್ಪಾಗೊಲ್ಲ. ಇಲ್ಲಿ ನಡೆಯುವಂತಹ ಅಸಾಮಾನ್ಯ ಘಟನೆಗಳು ಒಂದಲ್ಲ ಎರಡಲ್ಲ. ಕಾಡಿನಿಂದ ಕೂಡಿರುವ ಈ ಪ್ರದೇಶದಲ್ಲಿ ಸ್ಥಳೀಯರು ಬಹಳಷ್ಟು ಎದೆ ಝಲ್ಲೆನಿಸುವ ದೃಶ್ಯಗಳನ್ನ ನೋಡಿದ್ದಾರೆ. ಈ ಪೈಕಿ ಹಲವರು ರುಂಡವಿಲ್ಲದೆ ಚಲಿಸುವ ಯುವಕನನ್ನ ನೋಡಿದ್ದಾರೆ. ಇನ್ನಲವರು ನಾಲಿಗೆಯ ಮೇಲೆ ರಕ್ತ ಕಾರಿಕೊಂಡು ಸಂಚರಿಸುತ್ತಿದ್ದಂತಹ ಪಿಶಾಚಿಯನ್ನ ನೋಡದ್ದಾರಂತೆ. ಯಾರೋ ಯುವತಿಯೊಬ್ಬಳು ಇಲ್ಲಿ ನೇಣು ಹಾಕಿಕೊಂಡಿದ್ದಳಂತೆ, ಆಕೆ ಇದೀಗ ಪ್ರತಿದಿನ ದಾರಿಯಲ್ಲಿ ಹೋಗ ಬರುವ ಯುವಕರನ್ನ ಮದುವೆಯಾಗು ಎಂದು ವಶೀಕರಣ ಮಾಡಿ ತನ್ನ ಜೊತೆ ಕಾಡಿನಲ್ಲಿ ದೂರಕ್ಕೆ ಕರೆದೊಯ್ದು ಕೊಲ್ಲುತ್ತಾಳಂತೆ. ಪಾಪದ ಯುವಕರು ಈ ರಸ್ತೆಯಲ್ಲಿ ಬರೋದಿರ್ಲಿ, ಇತ್ತ ಕಡೆ ತಲೆ ಸಹ ಹಾಕಿ ಮಲಗೋಲ್ವಂತೆ. ಎರಡು ಹಳದಿ ಕಣ್ಣುಗಳನ್ನ ಹೊಂದಿರುವ ಕಪ್ಪು ಹೊಗೆಯೊಂದು ಗಾಳಿಯಲ್ಲಿಯೇ ತೇಲಾಡುತ್ತಿದ್ದ ದೃಶ್ಯವನ್ನ ನೋಡಿದ್ದಾರೆ. ಇಲ್ಲಿ ರಾತ್ರಿ ಬಿಟ್ಟುಬಿಡಿ ಬೆಳಿಗ್ಗೆ ಸಹ ಓಡಾಡೋದಿಕ್ಕೆ ಡಬಲ್ ಗುಂಡಿಗೆ ಬೇಕು..ಅದಿಕ್ಕೆ ಇಲ್ಲಿರುವ ಜನ ಪಾಪ ಪ್ರಾಣವನ್ನ ಅಂಗೈನಲ್ಲಿಟ್ಟುಕೊಂಡು ಓಡಾಡುತ್ತಾರಂತೆ.

Exit mobile version